ರಾಜ್ಯ

ವಿಕೃತ ಕಾಮಿ ಉಮೇಶ್‌ ರೆಡ್ಡಿಗೆ ಗಲ್ಲು: ಹಿಂಡಲಗಾ ಜೈಲು ಸಿಬ್ಬಂದಿಗೆ ತರಬೇತಿ

Shilpa D

ಬೆಳಗಾವಿ: ವಿಕೃತಕಾಮಿ ಉಮೇಶ್ ರೆಡ್ಡಿ ಕ್ಷಮಾದಾನ ಅರ್ಜಿಯನ್ನ ಸುಪ್ರಿಂಕೋರ್ಟ್ ತಿರಸ್ಕರಿಸಿದ ಹಿನ್ನೆಲೆಯಲ್ಲಿ ಹಿಂಡಲಗಾ ಜೈಲಿನ ಸಿಬ್ಬಂದಿಗೆ ಗಲ್ಲಿಗೇರಿಸುವ ಸಂಬಂಧ ತರಬೇತಿ ನೀಡಲಾಗುತ್ತಿದೆ. 33 ವರ್ಷಗಳ ನಂತರ ಹಿಂಡಲಗಾ ಜೈಲಿನಲ್ಲಿ ನೇಣಿಗೇರುತ್ತಿರುವ ಅಪರಾಧಿ ಉಮೇಶ್ ರೆಡ್ಡಿ ಆಗಿದ್ದಾನೆ,

ನೇಣಿಗೇರಿಸುವ ಕುರಿತು 7 ಸಿಬ್ಬಂದಿಗೆ ದಿನಂಪ್ರತಿ ತರಬೇತಿ ನೀಡಲಾಗುತ್ತಿದೆ.ಗಲ್ಲು ಶಿಕ್ಷೆಗೆ ಗುರಿಯಾಗಿರುವ ಉಮೇಶ್‌ ರೆಡ್ಡಿಯ ಗಾತ್ರದ ಪ್ರತಿಕೃತಿ ತಯಾರಿಸಿ, ಅದಕ್ಕೆ ನೇಣು  ಹಾಕುವ ಬಗ್ಗೆ ತರಬೇತಿ ನೀಡಲಾಗುತ್ತಿದೆ. ಉಮೇಶ್ ರೆಡ್ಡಿಗೆ ಗಲ್ಲು ಶಿಕ್ಷೆ ಆಗುವವರೆಗೂ ಈ ತರಬೇತಿ ಮುಂದುವರಿಯುತ್ತದೆ.

ಸಿಬ್ಬಂದಿಗೆ ಮಾನಸಿಕ ತರಬೇತಿ ಕೂಡ ನೀಡಲಾಗುತ್ತಿದೆ. ಉಮೇಶ್ ರೆಡ್ಡಿಯನ್ನು ಗಲ್ಲಿಗೆ ಹಾಕುವಾಗ ಅವರ ಮನಸ್ಸು ಸ್ಥಿಮಿತ ಕಳೆದುಕೊಳ್ಳದಂತೆ ತರಬೇತಿ ನೀಡಲಾಗುತ್ತಿದೆ.

ಕಾರಾಗೃಹದಲ್ಲಿ ಬಂದೋಬಸ್ತ್‌ಗಾಗಿ ಬೇರೆ ಜಿಲ್ಲೆಗಳ ಪೊಲೀಸರನ್ನೂ ಕರೆಸಲಾಗಿದ್ದು, ಇವರೆಲ್ಲ ಉಮೇಶ್ ರೆಡ್ಡಿ ಚಲನವಲನಗಳ ಮೇಲೆ ನಿಗಾ ಇಟ್ಟಿದ್ದಾರೆ. ದಾರವಾಢ, ಬಾದಾಮಿ, ವಿಜಯಾಪುರ,ಮತ್ತು ಕೊಪ್ಪಳ ಜೈಲುಗಳ 10 ಹಿರಿಯ ಜೈಲರ್ ಗಳನ್ನು ಹೆಚ್ಚುವರಿಯಾಗಿ ನಿಯೋಜಿಸಲಾಗಿದೆ.

ಕ್ಷಮಾಧಾನ ಅರ್ಜಿಯನ್ನು ಸುಪ್ರಿಂಕೋರ್ಟ್ ತಿರಸ್ಕರಿಸಿದ ಪ್ರತಿಯನ್ನು ಉಮೇಶ್ ರೆಡ್ಡಿಗೆ ಜೈಲು ಅಧಿಕಾರಿಗಳು ತೋರಿಸಿದ್ದಾರೆ. ಈ ಸಂಬಂಧ ಪ್ರತಿಕ್ರಿಯಿಸಿರುವ ಅವನು ಇದೆಲ್ಲಾ ದೇವರ ಇಚ್ಚೆ ಎಂದು ಹೇಳಿದ್ದಾನೆ.

SCROLL FOR NEXT