ಮನೆ ವಶಕ್ಕೆ ಪಡೆದ ಜಿಲ್ಲಾಡಳಿತದ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ ದರ್ಶನ್
ತಮ್ಮ ಮನೆಯನ್ನು ಸಾಂಕೇತಿಕವಾಗಿ ವಶಕ್ಕೆ ಪಡೆದಿರುವ ಬೆಂಗಳೂರು ನಗರ ಜಿಲ್ಲಾಡಳಿತದ ವಿರುದ್ಧ ನಟ ದರ್ಶನ್ ಅವರು ಸೋಮವಾರ...
ಬೆಂಗಳೂರು: ತಮ್ಮ ಮನೆಯನ್ನು ಸಾಂಕೇತಿಕವಾಗಿ ವಶಕ್ಕೆ ಪಡೆದಿರುವ ಬೆಂಗಳೂರು ನಗರ ಜಿಲ್ಲಾಡಳಿತದ ವಿರುದ್ಧ ನಟ ದರ್ಶನ್ ಅವರು ಸೋಮವಾರ ಹೈಕೋರ್ಟ್ ಮೆಟ್ಟಿಲೇರಿದ್ದಾರೆ,
ಕಳೆದ ಶನಿವಾರ ದರ್ಶನ್ ಮನೆಯ ಗೋಡೆಯ ಮೇಲೆ 'ಇದು ಕರ್ನಾಟಕ ಸರ್ಕಾರದ ಸ್ವತ್ತು' ಎಂದು ಜಿಲ್ಲಾಡಳಿತ ಬರೆದಿತ್ತು. ಜಿಲ್ಲಾಡಳಿತದ ಈ ಕ್ರಮವನ್ನು ಪ್ರಶ್ನಿಸಿ ದರ್ಶನ್ ಅವರು ಇಂದು ಹೈಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಸಿದ್ದು, ಅರ್ಜಿ ನಾಳೆ ವಿಚಾರಣೆಗೆ ಬರಲಿದೆ.
ರಾಜರಾಜೇಶ್ವರಿ ನಗರದ ಐಡಿಯಲ್ ಹೋಮ್ಸ್ ಬಡಾವಣೆಯಲ್ಲಿರುವ ದರ್ಶನ್ ಅವರ ಮನೆಯೂ ಸೇರಿದಂತೆ ಒಟ್ಟು ಎಂಟು ಮನೆಗಳನ್ನು ಜಿಲ್ಲಾಡಳಿತ ಶನಿವಾರ ವಶಪಡಿಸಿಕೊಂಡಿದೆ.