ಬೆಂಗಳೂರು: ಸಂರಕ್ಷಿತ ಪ್ರದೇಶಗಳಲ್ಲಿ ರಸ್ತೆಗಳು, ರೈಲು ಮಾರ್ಗಗಳು ಮತ್ತು ವಿದ್ಯುತ್ ವಾಹಕ ಮಾರ್ಗಗಳ ಅವ್ಯಾಹತ ಅಭಿವೃದ್ಧಿಯಿಂದ ಪ್ರಾಣಿಗಳ ಮೂಲರೂಪ ಆವಾಸಸ್ಥಾನ ನಾಶವಾಗಿದ್ದಲ್ಲದೆ, ವನ್ಯಜೀವಿಗಳ ಮೇಲೆ ಕೂಡ ಪರಿಣಾಮ ಬೀರಿದೆ. ಈ ಹಿನ್ನೆಲೆಯಲ್ಲಿ ವನ್ಯಮೃಗಗಳ ರಕ್ಷಣೆಗೆ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಕೇಂದ್ರ ಸರ್ಕಾರ ನಿಗದಿತ ಮಾನದಂಡವನ್ನು ಸಿದ್ಧಪಡಿಸಲಿದೆ.
ಕಾರಿಡಾರ್ ಗಳ ವಿಂಗಡಣೆ, ಪ್ರಬೇಧಗಳ ಅಳಿಯುವಿಕೆ ಮತ್ತು ರಸ್ತೆಗಳ ನಿರ್ಮಾಣ ಕುರಿತು ಕೇಂದ್ರ ಸರ್ಕಾರ ಕರಡು ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದ್ದು, ಸಂರಕ್ಷಿತ ಪ್ರದೇಶಗಳಲ್ಲಿ ಮೂಲಭೂತ ಸೌಕರ್ಯಗಳ ಜಾರಿಗೆ ಪರಿಸರ ಸ್ನೇಹಿ ಕ್ರಮಗಳನ್ನು ಜಾರಿಗೆ ತರಲಿದೆ. ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವಾಲಯ ಈ ಕುರಿತು ಸಲಹೆ, ಅಭಿಪ್ರಾಯಗಳನ್ನು ನವೆಂಬರ್ 7ರೊಳಗೆ ಕಳುಹಿಸುವಂತೆ ಕೋರಿದೆ.ಇದರಲ್ಲಿ ಕರ್ನಾಟಕದ ಬಂಡೀಪುರ ಅಭಯಾರಣ್ಯ ಕೂಡ ಒಳಗೊಂಡಿದೆ.