ಬಿಡಿಎ 
ರಾಜ್ಯ

ಮೊಂಡಾಟ ಬಿಟ್ಟ ಬಿಡಿಎ: ಮಂಗಳಾ ಕುಟುಂಬಕ್ಕೆ 25 ಲಕ್ಷ ರು ಚೆಕ್ ವಿತರಣೆ

ಅಂಡರ್‌ ಪಾಸ್‌ ಯೋಜನೆಗೆ ವಶಪಡಿಸಿಕೊಂಡ ಭೂಮಿಗೆ ಪರಿಹಾರ ಸಿಗದೆ ಹತಾಶರಾಗಿ ಆತ್ಮಹತ್ಯೆಗೆ ಯತ್ನಿಸಿದ್ದ ಮಹಿಳೆಯ ಕುಟುಂಬಕ್ಕೆ ಬಿಡಿಎ 25 ಲಕ್ಷ ರೂ. ...

ಬೆಂಗಳೂರು: ಅಂಡರ್‌ ಪಾಸ್‌ ಯೋಜನೆಗೆ ವಶಪಡಿಸಿಕೊಂಡ ಭೂಮಿಗೆ ಪರಿಹಾರ ಸಿಗದೆ ಹತಾಶರಾಗಿ ಆತ್ಮಹತ್ಯೆಗೆ ಯತ್ನಿಸಿದ್ದ ಮಹಿಳೆಯ ಕುಟುಂಬಕ್ಕೆ ಬಿಡಿಎ  25 ಲಕ್ಷ ರೂ. ಪರಿಹಾರದ ಚೆಕ್‌  ಮಂಗಳ ಅವರ ಪುತ್ರ ಕಾರ್ತಿಕ್ ಅವರಿಗೆ ನೀಡಿದೆ.

ವರ್ತುಲ ರಸ್ತೆಯ ಕಂಠೀರವ ಸ್ಟುಡಿಯೋ ಜಂಕ್ಷನ್‌ನಲ್ಲಿ ಬಿಡಿಎ ನಿರ್ಮಿಸುತ್ತಿರುವ ಗ್ರೇಡ್‌ ಸೆಪರೇಟರ್‌ ಯೋಜನೆಗೆ ಜಮೀನು ಬಿಟ್ಟುಕೊಟ್ಟಿದ್ದರೂ ಮಂಗಳಾ ಕುಟುಂಬಕ್ಕೆ ಪರಿಹಾರ ದೊರೆತಿರಲಿಲ್ಲ. ಇದಕ್ಕೆ ಮಂಗಳಾ, ಸೋಮವಾರ ಬಿಡಿಎ ಕಚೇರಿಯಲ್ಲೇ ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆ ಸೇರಿದ್ದರು. ಮಂಗಳಾ ಅವರ ಕುಟುಂಬಕ್ಕೆ 3.76 ಕೋಟಿ ರೂ. ಪರಿಹಾರವನ್ನು ಬಿಡಿಎ ನೀಡಬೇಕಿದೆ. ಉಳಿದ ಹಣವನ್ನು ಸದ್ಯದಲ್ಲೇ  ಕಂತುಗಳಾಗಿ ವಿತರಿಸುವುದಾಗಿ ಬಿಡಿಎ ಅಧಿಕಾರಿಗಳು ಭರವಸೆ ನೀಡಿದ್ದಾರೆ. ಜೊತೆಗೆ ಇತರೆ 17 ಮಂದಿಗೂ ಭೂ ಪರಿಹಾರ ವಿತರಿಸಿದ್ದು, ಬಾಕಿ ಹಣವನ್ನು ಶೀಘ್ರ ನೀಡುವ ಭರವಸೆ ನೀಡಲಾಗಿದೆ.

ಪರಿಹಾರ ಹಣ ನೀಡುವಂತೆ ಶಾಸಕ ಕೆ.ಗೋಪಾಲಯ್ಯ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಗೆ ಮಣಿದಿರುವ ಬಿಡಿಎ, ಸಂಜೆ ವೇಳೆಗೆ ಮಂಗಳಾ ಸೇರಿದಂತೆ 18 ಕುಟುಂಬಕ್ಕೆ ತಲಾ 25 ಲಕ್ಷ ರೂ. ಹಣವನ್ನು ಚೆಕ್‌ ಮೂಲಕ ವಿತರಿಸಿದೆ. ಪ್ರತಿಭಟನೆ ನಡೆದ ಸ್ಥಳಕ್ಕೆ ಆಗಮಿಸಿದ್ದ ಬಿಡಿಎ ಅಧಿಕಾರಿಗಳು ಶೀಘ್ರವೇ ಸ್ಥಳ ಪರಿಶೀಲನೆ ನಡೆಸಿ ಪರಿಹಾರ ನೀಡುವ ವಾಗ್ದಾನ ನೀಡಿದರು.

ಒಟ್ಟು 72 ಆಸ್ತಿಗಳ ಮಾಲೀಕರಿಗೆ ಬಿಡಿಎ 131 ಕೋಟಿ ರೂ ಪರಿಹಾರ ಹಣ ನೀಡಬೇಕಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

US-Iran ಶಾಂತಿ ಮಾತುಕತೆ ವಿಫಲ ಬೆನ್ನಲ್ಲೇ Pakistanಗೆ ಜಾಕ್‌ಪಾಟ್‌: ಕತಾರ್, ಸೌದಿಯಿಂದ 5 ಬಿಲಿಯನ್ ಡಾಲರ್ ಆರ್ಥಿಕ ನೆರವು!

'ಬಹು ಅಂಗಾಂಗ ವೈಫಲ್ಯದಿಂದ ಗಾಯಕಿ ಆಶಾ ಭೋಸ್ಲೆ ನಿಧನ': ಬ್ರೀಚ್ ಕ್ಯಾಂಡಿ ಆಸ್ಪತ್ರೆ ಸ್ಪಷ್ಟನೆ

US-Iran ಶಾಂತಿ ಒಪ್ಪಂದ ವಿಫಲ: ಪಾಕಿಸ್ತಾನ ಕುತಂತ್ರ; ಸೌದಿಗೆ 13,000 Pak ಸೈನಿಕರು, 18 ಯುದ್ಧ ವಿಮಾನ ರವಾನೆ!

ಇರಾನ್-ಅಮೆರಿಕ ಯುದ್ಧ ಮುಂದುವರೆದರೆ ಟ್ರಂಪ್ ಅಧ್ಯಕ್ಷ ಸ್ಥಾನಕ್ಕೇ ಕುತ್ತು!

40 ಲಕ್ಷ ರೂ ಸಂಬಳ, ದಿಢೀರ್ ಕೆಲಸದಿಂದ ವಜಾ; 1.4 ಕೋಟಿ ಮೌಲ್ಯದ ಮನೆ EMI ತೀರಿಸಲು Rapido ಚಾಲಕನಾದ ಟೆಕ್ಕಿ!

SCROLL FOR NEXT