ರಾಜ್ಯ

1.3 ಕೋಟಿ ಜನರ ತೀರ್ಮಾನವನ್ನು ಒಂದೂವರೆ ಸಾವಿರ ಮಂದಿ ನಿರ್ಧರಿಸಲಾರರು: ಜಾರ್ಜ್

Shilpa D

ಬೆಂಗಳೂರು: ಸಾವಿರಾರು ಮಂದಿ ಉಕ್ಕಿನ ಸೇತುವೆ ನಿರ್ಮಾಣಕ್ಕೆ ವಿರೋಧ ವ್ಯಕ್ತ ಪಡಿಸುತ್ತಿದ್ದರು ಅದನ್ನು ಮಾಡಿಯೇ ತೀರುತ್ತೇನೆ ಎಂದು ಸರ್ಕಾರ ಶಪಥ ಮಾಡಿದೆ. ಬಸವೇಶ್ವರ ವೃತ್ತದಿಂದ ಹೆಬ್ಬಾಳದವರೆಗೂ ನಿರ್ಮಾಣ ಮಾಡಲು ಹೊರಟಿರುವ ಉಕ್ಕಿನ ಸೇತುವೆಗೆ ಕೇವಲ 1.500 ಮಂದಿ ವಿರೋಧ ವ್ಯಕ್ತ ಪಡಿಸಿದ್ದಾರೆ. ಈ ಪ್ರತಿಭಟನಾಕಾರರು ಬೆಂಗಳೂರು ನಗರದಲ್ಲಿರುವ 1.3 ಕೋಟಿ ಜನರನ್ನು ಪ್ರತಿನಿಧಿಸುವುದಿಲ್ಲ ಎಂದು ಅವರು ಹೇಳಿದ್ದಾರೆ.

ವಿಕಾಸಸೌಧದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಶಾಸಕರ ಜತೆ ಸಭೆ ನಡೆಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ ಜಾರ್ಜ್, ಉಕ್ಕಿನ ಸೇತುವೆ ವಿವಾದ ಕೇವಲ ಜನರಿಂದ ಹಾಗೂ ಮಾಧ್ಯಮಗಳಿಂದ ನಿರ್ಧಾರವಾಗುವುದಿಲ್ಲ. ನಾವು ರಾಜ್ಯ ಸರ್ಕಾರ, ಅಂದರೆ ಜನರಿಂದ ಆರಿಸಿ ಬಂದವರು, ನಮಗೆ ಯಾವುದೇ ಒಳ್ಳೆಯ ನಿರ್ಧಾರ ತೆಗೆದುಕೊಳ್ಳುವ ಹಕ್ಕಿಲ್ಲವೇ ಎಂದು ಪ್ರಶ್ನಿಸಿದರು. ಉಕ್ಕಿನ ಸೇತುವೆ ನಿರ್ಮಾಣ ಮಾಡಲು ತೀರ್ಮಾನ ಕೈಗೊಂಡಿದ್ದೇವೆ, ಅದನ್ನು ಮಾಡಿಯೇ ತೀರುತ್ತೇವೆ, ಅದರಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಜಾರ್ಜ್ ತಿಳಿಸಿದ್ದಾರೆ.

ಯೋಜನೆ ವಿರೋಧಿಸುವವರು ಯಾವುದೇ ಸಮಯದಲ್ಲಿ ಬಂದು ನನ್ನನ್ನು ಭೇಟಿ ಮಾಡಲಿ, ಯೋಜನೆ ಬಗ್ಗೆ ವಿಸ್ತಾರವಾಗಿ ವಿವರಣೆ ನೀಡುತ್ತೇನೆ. ಇದವರೆಗೂ ಯೋಜನೆ ವಿರೋಧಿಸುವವರು ಯಾರೋಬ್ಬರು ನನ್ನನ್ನು ಭೇಟಿಯಾಗಿಲ್ಲ ಎಂದು ಹೇಳಿದ್ದಾರೆ.

ಇನ್ನೂ 812 ಮರಗಳನ್ನು ಕತ್ತರಿಸುವ ಬಗ್ಗೆ ಯಾವುದೇ ಭರವಸೆ ನೀಡದ ಜಾರ್ಜ್ ಮುಂದೆ ಗಿಡಗಳನ್ನು  ನೆಡುತ್ತೇವೆ ಎಂದಷ್ಟೇ ಉತ್ತರಿಸಿದರು.

SCROLL FOR NEXT