ಮುಖ್ಯಮಂತ್ರಿ ಸಿದ್ದರಾಮಯ್ಯ 
ರಾಜ್ಯ

ಕಾವೇರಿ ವಿವಾದ ಇತ್ಯರ್ಥಕ್ಕೆ ರಾಷ್ಟ್ರೀಯ ಜಲ ನೀತಿಯೊಂದೇ ಪರಿಹಾರ: ಸಿದ್ದರಾಮಯ್ಯ

ಎರಡು ರಾಜ್ಯಗಳ ನಡುವಿನ ಪರಿಸ್ಥಿತಿ ಹದಗೆಡಲು ಕಾವೇರಿ ವಿವಾದ ಕಾರಣವಾಗಿದ್ದು, ವಿವಾದ ಇತ್ಯರ್ಥಕ್ಕೆ ರಾಷ್ಟೀಯ ಜಲ ನೀತಿಯೊಂದೇ ಪರಿಹಾರವೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ...

ಬೆಂಗಳೂರು: ಎರಡು ರಾಜ್ಯಗಳ ನಡುವಿನ ಪರಿಸ್ಥಿತಿ ಹದಗೆಡಲು ಕಾವೇರಿ ವಿವಾದ ಕಾರಣವಾಗಿದ್ದು, ವಿವಾದ ಇತ್ಯರ್ಥಕ್ಕೆ ರಾಷ್ಟೀಯ ಜಲ ನೀತಿಯೊಂದೇ ಪರಿಹಾರವೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.

ವೈಯಾಳಿಕಾವಲ್ ನಲ್ಲಿ ತೆಲುಗು ವಿಜ್ಞಾನ ಸಮಿತಿಯು ನೂತವಾಗಿ ನಿರ್ಮಿಸಿರುವ ಕೃಷ್ಣದೇವರಾಯ ಕಲಾಮಂದಿರ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿರುವ ಅವರು, ಕಾವೇರಿ ವಿವಾದ ನೆರೆ ರಾಜ್ಯದೊಂದಿಗಿನ ವೈಮನಸ್ಸಿಗೆ ಕಾರಣವಾಗಿದೆ. ಇದರಿಂದ ಸಾಕಷ್ಟು ಸಮಸ್ಯೆಗಳು ಎದುರಾಗುತ್ತಿದೆ. ಎರಡು ರಾಜ್ಯಗಳ ನಡುವಿನ ಪರಿಸ್ಥಿತಿಯನ್ನು ನೋಡಿ. ತಮಿಳುನಾಡಿಗೆ ಸಾಂಬಾ ಕೃಷಿಗೆ ನೀರು ಬೇಕಿದೆ. ಇದಕ್ಕಾಗಿ ನಮ್ಮ ಕುಡಿಯುವ ನೀರನ್ನು ಕಿತ್ತುಕೊಳ್ಳುತ್ತಿದೆ. ನೀರು ಸಮಸ್ಯೆ ಕುರಿತಂತೆ ರಾಜ್ಯದೊಂದಿಗೆ ಮಾತುಕತೆ ಮಾಡುವುದನ್ನು ಬಿಟ್ಟು, ತಮಿಳುನಾಡು ನೇರವಾಗಿ ಸುಪ್ರೀಂ ಮೆಟ್ಟಿಲೇರಿದೆ ಎಂದು ಹೇಳಿದ್ದಾರೆ.

ಮೆಟ್ಟೂರು ಡ್ಯಾಂನಲ್ಲಿ 36 ಟಿಎಂಸಿ ನೀರಿದೆ. ಕರ್ನಾಟಕದ ಜಲಾಶಯಗಳಲ್ಲಿ ಒಟ್ಟಾರಿ 47 ಟಿಎಂಸಿ ನೀರಿದೆ. ಈ ನೀರನ್ನು ಕುಡಿಯಲು ಮತ್ತು ಕೃಷಿಯೇತರ ಕಾರ್ಯಗಳಿಗೆ ಬಳಸಿಕೊಳ್ಳಬೇಕಿದೆ. ತಮಿಳುನಾಡಿನಲ್ಲಿ ಸಾಕಷ್ಟು ನೀರಿದೆ. ಪರಿಸ್ಥಿತಿ ಹೀಗಿದ್ದರೂ ಅವರು ಸುಪ್ರೀಂ ಮೊರೆ ಹೋಗಿದ್ದಾರೆ. ಸರಿಯಾದ ರೀತಿಯ ರಾಷ್ಟ್ರೀಯ ಜಲ ನೀತಿ ಇಲ್ಲದ ಕಾರಣ ಎರಡು ರಾಜ್ಯಗಳ ನಡುವೆ ಸಮಸ್ಯೆಗಳು ಎದುರಾಗುತ್ತಿವೆ.

ಸಮಸ್ಯೆ ಬಗೆಹರಿಕೆಗೆ ಸೂಕ್ತ ರೀತಿಯ ರಾಷ್ಟ್ರೀಯ ಜಲ ನೀತಿಯ ಅಗತ್ಯವಿದೆ. ಸೂಕ್ತ ಜಲ ನೀತಿಯಿಂದ ಸಮಸ್ಯೆ ಬಗೆಹರಿಯಲಿದೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಇಂದಿರಾ ಗಾಂಧಿ ಕೂಡ ಹೀಗೆ ಮಾಡಿರಲಿಲ್ಲ': ದೆಹಲಿ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆಯುವ ಮುನ್ನ ಅಭಿಜಿತ್ ದೀಪ್ಕೆ; ವಿಡಿಯೋ ಹಂಚಿಕೊಂಡ CJP

ದೇಶವಿರೋಧಿ ಶಕ್ತಿಗಳಿಂದ ಅಶಾಂತಿ ಸೃಷ್ಟಿಗೆ ಯತ್ನ; CJP ಪ್ರತಿಭಟನೆಯಿಂದ ದೂರವಿರಿ: ಮುಸ್ಲಿಮರಿಗೆ ಇಮಾಮ್‌ ಮುಖ್ಯಸ್ಥ ಕರೆ

'ತಂದಿಟ್ಟ ಗಿಡ ಮನೆಗೇ ಹಾನಿ ಮಾಡಿದ್ರೆ..'; 'ನೋ ಕ್ಲಾಸ್', BiggBoss ಇತಿಹಾಸದ ಅತಿದೊಡ್ಡ ನಿರ್ಧಾರದ ಸುಳಿವು ನೀಡಿದ ಕಿಚ್ಚಾ ಸುದೀಪ್

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌‌ವೇಯಲ್ಲಿ ಅಪಘಾತಕ್ಕೆ ಬಿಗ್ ಟ್ವಿಸ್ಟ್: ಸ್ನೇಹಿತನಿಂದಲೇ ಭೂಮಿಕಾ ಕೊಲೆ?

CJP ಪ್ರತಿಭಟನೆ: ದೆಹಲಿ ಪೊಲೀಸರ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಕೆ!