ಅನಾಮಿಕ ವ್ಯಕ್ತಿ ಕುರಿತು ಫೇಸ್ ಬುಕ್ ನಲ್ಲಿ ಪೊಲೀಸ್ ಪ್ರಚಾರ; 25 ವರ್ಷಗಳ ಬಳಿಕ ಮನೆ ಸೇರಿದ ವ್ಯಕ್ತಿ 
ರಾಜ್ಯ

ವರ್ಷಗಳ ಹಿಂದೆ ಹೊಲಿದು ಕೊಟ್ಟ ಪ್ಯಾಂಟ್ ನಿಂದ ದರ್ಜಿಯ ಪತ್ತೆ: ಪೊಲೀಸರಿಗೆ ವಿಷಯ ತಿಳಿಸಿದ ಗ್ರಾಹಕ

ಹನುಮಂತನಗರದಲ್ಲಿ ಸಿಕ್ಕ ಪ್ರಜ್ಞಾಹೀನ ವ್ಯಕ್ತಿಯ ಬಗ್ಗೆ ನಗರ ಪೊಲೀಸರು ಮಾಡಿದ್ದ ಪ್ರಚಾರ ಇದೀಗ ಆ ವ್ಯಕ್ತಿ 25 ವರ್ಷಗಳ ಬಳಿಕ ಮತ್ತೆ ಕುಟುಂಬ ಸೇರುವಂತಾಗಿದೆ...

ಬೆಂಗಳೂರು: ಹನುಮಂತನಗರದಲ್ಲಿ ಸಿಕ್ಕ ಪ್ರಜ್ಞಾಹೀನ ವ್ಯಕ್ತಿಯ ಬಗ್ಗೆ ನಗರ ಪೊಲೀಸರು ಮಾಡಿದ್ದ ಪ್ರಚಾರ ಇದೀಗ ಆ ವ್ಯಕ್ತಿ 25 ವರ್ಷಗಳ ಬಳಿಕ ಮತ್ತೆ ಕುಟುಂಬ ಸೇರುವಂತಾಗಿದೆ.

ಕೆಲ ದಿನಗಳ ಹಿಂದಷ್ಟೇ ನಗರ ಪೊಲೀಸರು ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತಿಯೊಬ್ಬರ ಫೋಟೋವೊಂದನ್ನು ಹಾಕಿದ್ದರು. ವೈ.ಜಯರಾಮ್ ಭಟ್ ಎಂಬ ವ್ಯಕ್ತಿ ಪ್ರಜ್ಞಾನಹೀನ ಸ್ಥಿತಿಯಲ್ಲಿ ದೊರಕಿದ್ದು, ಜೇಬಿನಲ್ಲಿ ಅವರ ಪಾನ್ ಕಾರ್ಡ್ ದೊರೆತಿದೆ. ಈ ವ್ಯಕ್ತಿಯ ಬಗ್ಗೆ ಏನಾದರೂ ಮಾಹಿತಿ ಇದ್ದರೆ, ವ್ಯಕ್ತಿಯನ್ನು ಗುರ್ತಿಸಿದ್ದೇ ಆದರೆ ಕೂಡಲೇ ಹನುಮಂತನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡಿ ಅಥವಾ ಸಂಪರ್ಕ ಮಾಡಿ. ಜಯರಾಮ್ ಅವರು ತಮ್ಮ ಕುಟುಂಬ ಸೇರಲು ಸಹಾಯ ಮಾಡಿ ಎಂದು ಹೇಳಿ ಪೊಲೀಸರು ಹೇಳಿಕೊಂಡಿದ್ದರು,


ನಗರ ಪೊಲೀಸರ ಈ ಪೋಸ್ಟ್ ನ್ನು ಸಾಕಷ್ಟು ಜನರು ಶೇರ್ ಮಾಡಿದ್ದರು. ಅಲ್ಲದೆ, ವಾಟ್ಸ್ ಅಪ್ ಗಳಲ್ಲೂ ಈ ಮಾಹಿತಿ ಹರಿದಾಡ ತೊಡಗಿತ್ತು.

ವಾಟ್ಸ್ ಅಪ್ ನಲ್ಲಿ ಹರಿದಾಡುತ್ತಿದ್ದ ಈ ಮಾಹಿತಿ ವೃತ್ತಿಯಲ್ಲಿ ಸಾಫ್ಟ್ ವೇರ್ ಆಗಿರುವ ಗಣೇಶ್ ಕಂಬಾರ್ ಎಂಬುವವರಿಗೆ ತಲುಪಿತ್ತು. ಇದರಂತೆ ಜಯರಾಮ್ ಅವರನ್ನು ಗುರ್ತಿಸಿದ್ದ ಅವರು, ತಮ್ಮ ಗಳೆಯನೊಂದಿಗೆ ಕೂಡಲೇ ಹನುಮಂತ ನಗರ ಪೊಲೀಸ್ ಠಾಣೆಯನ್ನು ಸಂಪರ್ಕಿಸಿದ್ದಾರೆ. ನಂತರ ಪೊಲೀಸರು ಜಯರಾಮ್ ಅವರನ್ನು ದಾಖಲಿಸಿದ್ದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಈ ವೇಳೆಯೂ ಗಣೇಶ್ ಅವರು ಜಯರಾಮ್ ಅವರನ್ನು ಗುರ್ತಿಸಿದ್ದಾರೆ.

ಜಯರಾಮ್ ಕುರಿತಂತೆ ತಿಳಿದಿದ್ದ ಮಾಹಿತಿಯನ್ನು ಪೊಲೀಸರಿಗೆ ನೀಡಿದ್ದಾರೆ. ಇನ್ನು ಜಯರಾಮ್ ಅವರನ್ನು ಗುರ್ತಿಸಿದ್ದರ ಸ್ವಾರಸ್ಯಕರ ಕೆಲ ಸಂಗತಿಯನ್ನು ಜಯರಾಮ್ ಅವರು ಹಂಚಿಕೊಂಡಿದ್ದಾರೆ.

ಕೆಲ ವರ್ಷಗಳ ಹಿಂದೆ ಕಾಸರಗೋಡು ತಾಲೂಕಿನ ಬುಲ್ಲೆರಿ ಕಟ್ಟೆ ಗ್ರಾಮದಲ್ಲಿ ಜಯರಾಮ್ ಅವರು ಟೈಲರ್ ಆಗಿದ್ದರು. ಆಗ ನಾನು 10 ತರಗತಿ ಓದುತ್ತಿದ್ದೆ. ತುಂಡು ಚಡ್ಡಿಯನ್ನೇ ಧರಿಸುತ್ತಿದ್ದ ನನಗೆ 10 ತರಗತಿ ಉತ್ತೀರ್ಣನಾದ ನಂತರ ಮನೆಯವರು ಮೊದಲ ಬಾರಿಗೆ ನನಗೆ ಪ್ಯಾಂಟ್ ವೊಂದನ್ನು ಹೊಲಿಸಿಕೊಟ್ಟಿದ್ದರು. ನನಗೆ ಮೊದಲ ಬಾರಿಗೆ ಪ್ಯಾಂಟ್ ಹೊಲಿದು ಕೊಟ್ಟಿದ್ದು ಜಯರಾಮ್ ಅವರೇ, ಹೀಗಾಗಿ ಜಯರಾಮ್ ಅವರು ನನ್ನ ನೆನಪಿನಲ್ಲೇ ಉಳಿದಿದ್ದರು.

ಜಯರಾಮ್ ಅವರ ತಂದೆ ಜನಾರ್ಧನ ಭಟ್ ಅವರು ಕೂಡ ನನಗೆ ಗೊತ್ತಿದ್ದಾರೆ. ಜಯರಾಮ್ ಅವರು ನನಗಿಂತ 7 ವರ್ಷ ದೊಡ್ಡವರಿರಬಹುದು. ಕಣ್ಮರೆಯಾದಾಗ ಜಯರಾಮ್ ಅವರು ಹೊಸದಾಗಿ ಮದವೆಯಾಗಿದ್ದರು. 23 ವರ್ಷದಲ್ಲಿ ಅವರು ಕಾಣೆಯಾಗಿದ್ದರು. ಅವರ ಕುಟುಂಬಸ್ಥರು ಸಾಕಷ್ಟು ವರ್ಷಗಳ ಕಾಲ ಹುಡುಕಾಟ ಆರಂಭಿಸಿದ್ದರು. ಆದರೆ, ಎಷ್ಟು ಹುಡುಕಿದರೂ ಸಿಗದಿದ್ದ ಕಾರಣ ಸುಮ್ಮನಾಗಿಬಿಟ್ಟಿದ್ದರು. ಜಯರಾಮ್ ಅವರ ತಂದೆ ಹಾಗೂ ಅವರ ದೊಡ್ಡ ಅಣ್ಣ ಕೆಲ ವರ್ಷಗಳ ಹಿಂದೆ ಸಾವನ್ನಪ್ಪಿದ್ದರು. ಇದೀಗ ಅವರ ಚಿಕ್ಕ ತಮ್ಮ ಚಂದ್ರಶೇಖರ್ ಭಟ್ ಅವರು ಇದ್ದಾರೆ.

ಜಯರಾಮ್ ಅವರ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆಯೇ ಅವರ ಸಹೋದರ ಚಂದ್ರಶೇಕರ್ ಅವರನ್ನು ಸಂಪರ್ಕಿಸಲಾಯಿತು. ಶನಿವಾರ ಬೆಂಗಳೂರಿಗೆ ಬರುವುದಾಗಿ ಹೇಳಿದ್ದಾರೆ. ಕಳೆದ 15 ವರ್ಷಗಳಿಂದಲೂ ನಾನು ಬೆಂಗಳೂರಿನಲ್ಲಿ ನೆಲೆಯೂರಿದ್ದೇನೆ. ಜಯರಾಮ್ ಅವರ ನೆನಪು ಈಗಲೂ ನನ್ನ ಮಿದುಳಿನಲ್ಲಿದೆ. ಘಟನೆ ಅನಿರೀಕ್ಷಿತವಾಗಿ ನಡೆದಿದೆ ಎಂದು ಗಣೇಶ್ ಅವರು ಹೇಳಿದ್ದಾರೆ.

ಜಯರಾಮ್ ಅವರನ್ನು ನನ್ನ ಗೆಳೆಯ ಗಣೇಶ್ ಗುರ್ತಿಸಿದ್ದ. ಮೊದಲ ಬಾರಿಗೆ ಸಂಶಯ ವ್ಯಕ್ತಪಡಿಸಿದ್ದ. ನಂತರ ಆಗಿದ್ದಾಗಲಿ ಒಮ್ಮೆ ಹೋಗಿ ನೋಡೋಣ ಎಂದು ಠಾಣೆಗೆ ಹೋಗಿದ್ದೆವು. ನಂತರ ಪೊಲೀಸರು ಆಸ್ಪತ್ರೆಗೆ ಕರೆದೊಯ್ದಾಗ ತನಗೆ ತಿಳಿದಿದ್ದ ವ್ಯಕ್ತಿ ಇವರೇ ಎಂದು ಗುರ್ತಿಸಿದ್ದ ಎಂದು ಗಣೇಶ್ ಅವರ ಗೆಳೆಯ ಕೇಶವ ಭಟ್ ಅವರು ಹೇಳಿದ್ದಾರೆ.

ಗುರುವಾರ ಸಂಜೆ 4.30ರ ಸುಮಾರಿಗೆ ರಸ್ತೆ ಮಧ್ಯೆ ವ್ಯಕ್ತಿಯೊಬ್ಬರು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವ ಕುರಿತಂತೆ ಠಾಣೆಗೆ ಕರೆಯೊಂದು ಬಂದಿತ್ತು. ಕೂಡಲೇ ಸ್ಥಳಕ್ಕೆ ಹೋಗಿ ಆ ವ್ಯಕ್ತಿಯನ್ನು ಬನ್ನೇರುಘಟ್ಟದ ಆರ್'ವಿಎಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವ್ಯಕ್ತಿಯ ಬಗ್ಗೆ ಯಾವುದೇ ಮಾಹಿತಿಗಳು ಲಭ್ಯವಾಗಿರಲಿಲ್ಲ. ಆದರೆ, ಅವರ ಜೇಬಿನಲ್ಲಿ ಪಾನ್ ಕಾರ್ಡ್ ವೊಂದು ದೊರೆತಿತ್ತು. ಇದನ್ನು ಆಧರಿಸಿ ಪಾನ್ ಕಾರ್ಡ್ ನಲ್ಲಿದ್ದ ಫೋಟೋವನ್ನೇ ಸಾಮಾಜಿಕ ಜಾಲತಾಣದಲ್ಲಿ ಹಾಕಲಾಯಿತು. ಶುಕ್ರವಾರ ಇಬ್ಬರು ವ್ಯಕ್ತಿಗಳು ಠಾಣೆಗೆ ಬಂದು ಜಯರಾಮ್ ಭಟ್ ಅವರನ್ನು ಗುರ್ತಿಸಿದ್ದರು ಎಂದು ಹನುಮಂತ ನಗರ ಪೊಲೀಸ್ ಠಾಣಾ ಇನ್ಸ್ ಪೆಕ್ಟರ್ ದಿಲೀಪ್ ಕುಮಾರ್ ಕೆ.ಹೆಚ್ ಅವರು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

ಸಂಭಾಲ್ ದೇವಸ್ಥಾನದಿಂದ ಸಾಯಿಬಾಬಾ ವಿಗ್ರಹಕ್ಕೆ ಗೇಟ್ ಪಾಸ್! ಗಂಗಾ ನದಿಯಲ್ಲಿ ವಿಸರ್ಜನೆ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

SCROLL FOR NEXT