ಬೆಂಗಳೂರು: ಬೆಂಗಳೂರು ನಗರ ಜಿಲ್ಲಾಡಳಿತದ ನೆರವಿನೊಂದಿಗೆ ಜ್ಞಾನಭಾರತಿ ಕ್ಯಾಂಪಸ್ ನಲ್ಲಿರುವ ಒತ್ತುವರಿಯಾದ ಸುಮಾರು 100 ಎಕರೆ ಭೂಮಿಯನ್ನು ಪುನಃ ಪಡೆದುಕೊಳ್ಳಲು ಬೆಂಗಳೂರು ವಿಶ್ವ ವಿದ್ಯಾಲಯ ನಿರ್ಧರಿಸಿದೆ.
ಕಳೆದ ವರ್ಷ ಡಿಸೆಂಬರ್ 19ರಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ವಿಶ್ವವಿದ್ಯಾಲಯ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರು. ಭೂ ಒತ್ತುವರಿಯಾದ ಕುರಿತು ವಿಶ್ವವಿದ್ಯಾಲಯ ರಿಜಿಸ್ಟ್ರಾರ್(ಆಡಳಿತ ವಿಭಾಗ) ಪ್ರೊ. ಕೆ.ಎನ್. ನಿಂಗೇ ಗೌಡ ವಿಸ್ತೃತ ವರದಿಯನ್ನು ಸಿದ್ದಪಡಿಸಿದ್ದರು.
ಲಭ್ಯವಿರುವ ಮಾಹಿತಿ ಪ್ರಕಾರ, ವಿಶ್ವವಿದ್ಯಾಲಯದ 1,112 ಎಕರೆ ಪ್ರದೇಶದಲ್ಲಿ 100 ಎಕರೆ ಭೂಮಿಯನ್ನು ಹಲವು ರಾಜಕೀಯ ನಾಯಕರು, ರಿಯಲ್ ಎಸ್ಟೇಟ್ ಉದ್ಯಮಿಗಳು, ಸ್ಥಳೀಯ ಮುಖಂಡರು ಮತ್ತು ಅನೇಕ ಜನರು ಒತ್ತುವರಿ ಮಾಡಿಕೊಂಡಿದ್ದಾರೆ.
ಸ್ಮಶಾನ, ಹಲವು ದೇವಸ್ಥಾನಗಳು, ಖಾಸಗಿ ಲೇ ಔಟ್ ಗಳು, ವಾಣಿಜ್ಯ ಕಟ್ಟಡಗಳು, ಪೆಟ್ರೋಲ್ ಬಂಕ್, ಶಾಲೆ-ಕಾಲೇಜುಗಳು ಮತ್ತು ಆಸ್ಪತ್ರೆಗಳು ಒತ್ತುವರಿ ಭೂಮಿಯಲ್ಲಿ ಸೇರಿಕೊಂಡಿವೆ. ಉದ್ಯಾನವನ ನಿರ್ಮಿಸಲು ಬಿಬಿಎಂಪಿ ಕೂಡ ವಿಶ್ವವಿದ್ಯಾಲಯದ ಸ್ವಲ್ಪ ಜಮೀನನ್ನು ಒತ್ತುವರಿ ಮಾಡಿಕೊಂಡಿದೆ. ಈ ವರದಿಯನ್ನು ಬೆಂಗಳೂರು ನಗರ ಜಿಲ್ಲಾಧಿಕಾರಿ ವಿ. ಶಂಕರ್ ಮತ್ತು ಉನ್ನತ ಶಿಕ್ಷಣ ಸಚಿವರಿಗೆ ರಿಜಿಸ್ಟ್ರಾರ್ ಸದ್ಯದಲ್ಲಿಯೇ ಸಲ್ಲಿಸಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics