ರಾಜ್ಯ

ಮೈಸೂರು: 2021ರ ವೇಳೆಗೆ ಇಸ್ಕಾನ್ ನಿಂದ ನವಬೃಂದಾವನ ಕಾಂಪ್ಲೆಕ್ಸ್ ನಿರ್ಮಾಣ

Shilpa D

ಮೈಸೂರು: 2021ರ ವೇಳೆಗೆ ಮೈಸೂರಿನ ಜಯನಗರದ 9 ಎಕರೆ ಜಾಗದಲ್ಲಿ ಇಸ್ಕಾನ್ ಕೃಷ್ಣ ದೇವಾಲಯ ನಿರ್ಮಿಸಲಿದೆ.

ನವ ಬೃಂದಾವನ ಧಾಮವನ್ನು ಹೊಯ್ಸಳ ಶೈಲಿಯ ವಾಸ್ತು ಶಿಲ್ಪದಂತೆ ಸುಮಾರು 150 ಕೋಟಿ ರು ವೆಚ್ಚದಲ್ಲಿ ನಿರ್ಮಾಣ ಮಾಡಲಾಗುವುದು. ಅಮೆರಿಕಾದ ಗ್ರೀನ್ ಬಿಲ್ಡಿಂಗ್ ಕೌನ್ಸಿಲ್ ಪ್ರಮಾಣ ಪತ್ರಕ್ಕಾಗಿ ಕಾಯಲಾಗುತ್ತಿದೆ.

ನವ ಬೃಂದಾವನ ಧಾಮಕ್ಕೆ ಭಾನುವಾರ ರಾಜ್ಯಪಾಲ ವಜುಬಾಯಿವಾಲಾ ಶಂಕುಸ್ಥಾಪನೆ ನೆರವೇರಿಸಿದರು. ಜನರು ಇಂದು ಕೇವಲ ಭೌತಿಕವಾಗಿ ಬದುಕುತ್ತಿದ್ದಾರೆ, ಆದರೆ ಅವರಿಗೆ ಮಾನಸಿಕ ನೆಮ್ಮದಿಯಿಲ್ಲ ಎಂದು ಹೇಳಿದರು.

ಪ್ರತಿಯೊಬ್ಬರು ರಾಮ ಮತ್ತು ಕೃಷ್ಣನ ಕಥೆಗಳನ್ನು ಓದಲೇಬೇಕು.ರಾಮ ಮತ್ತು ಕೃಷ್ಣ ಹೇಗೆ ಬಡವರಿಗೆ ಸಹಾಯ ಮಾಡುತ್ತಿದ್ದರು ಎಂಬುದನ್ನು ತಿಳಿದುಕೊಳ್ಳುಬೇಕು. ಪ್ರತಿಯೊಬ್ಬರಿಗೂ ಹಣ ಸಂಪಾದನೆ ಮಾಡುವ ಸಾಮರ್ಥ್ಯವಿರುತ್ತದೆ. ಅದರಲ್ಲಿ ಒಂದು ಭಾಗವನ್ನು ಸಮಾಜ ಕಲ್ಯಾಣಕ್ಕಾಗಿ ಬಳಸಬೇಕು ಎಂದು ರಾಜ್ಯಪಾಲರು ಹೇಳಿದರು.

50 ಸಾವಿರ ಅನಾಥ ಮಕ್ಕಳಿಗಾಗಿ ದೇಶಾದ್ಯಂತ ಉಚಿತ ವಸತಿ ಶಾಲೆ ನಿರ್ಮಿಸಲು ಉದ್ದೇಶಿಸಿರುವುದಾಗಿ ಇಸ್ಕಾನ್ ಅಧ್ಯಕ್ಷ ಎಚ್.ಜಿ ಮಧು ಪಂಡಿತ ದಾಸ್ ಹೇಳಿದ್ದಾರೆ. ನವ ಬೃಂದಾವನ ಧಾಮದಲ್ಲಿ 2 ಸಾವಿರ ಅನಾಥ ಮಕ್ಕಳಿಗಾಗಿ ಉಚಿತ ವಸತಿ ಶಾಲೆ ನಿರ್ಮಿಸುವುದಾಗಿ ಹೇಳಿದ್ದಾರೆ.

SCROLL FOR NEXT