ರಾಜ್ಯ

ಸರ್ಕಾರಿ ಜಮೀನು ಕೈತಪ್ಪುವ ಭೀತಿಯಲ್ಲಿ ವಿಷ ಸೇವಿಸಿದ ಅಪ್ಪ-ಮಗಳು

Vishwanath S
ಮುಂಡರಗಿ(ಗದಗ): ನಾಲ್ಕು ಎಕರೆ ಸರ್ಕಾರಿ ಜಮೀನು ಕೈತಪ್ಪುವ ಭೀತಿಯಿಂದ ತಂದೆ ಮಗಳು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಮುಂಡರಗಿಯ ಕೋರ್ಲಹಳ್ಳಿ ಗ್ರಾಮದಲ್ಲಿ ನಡೆದಿದೆ. 
ಆತ್ಮಹತ್ಯೆಗೆ ಯತ್ನಿಸಿದವರನ್ನು 64 ವರ್ಷದ ಲಿಯಾಖತ್ ಬಳ್ಳಾರಿ ಮತ್ತು 32 ವರ್ಷದ ಮೆಹಬೂಬಿ ಎಂದು ಗುರುತಿಸಲಾಗಿದೆ. ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಈ ಇಬ್ಬರನ್ನು ಖುದ್ದು ತಹಶೀಲ್ದಾರ್ ಅವರೇ ತಮ್ಮ ವಾಹನದಲ್ಲಿ ತಾಲೂಕು ಆಸ್ಪತ್ರೆಗೆ ದಾಖಲಿಸಿದ್ದಾರೆ. 
ನನ್ನೇಸಾಬ ಬಳ್ಳಾರಿ ಎಂಬುವರು 1955-56ನೇ ಸಾಲಿನಿಂದ ಸರ್ಕಾರಿ ಜಮೀನನ್ನು ಸಾಗುವಳಿ ಮಾಡುತ್ತಿದ್ದರು. ಇವರಿಗೆ ಮೂವರು ಮಕ್ಕಳ ಪೈಕಿ ಲಿಯಾಖತ್ ಬಳ್ಳಾರಿಯವರಿಗೂ ನಾಲ್ಕು ಎಕರೆ ಜಮೀನು ಬಂದಿತ್ತು. 2001ರಲ್ಲಿ ಕಂದಾಯ ಇಲಾಖೆ ಕಂಪ್ಯೂಟರ್ ಉತಾರ ಪ್ರಕಾರ ಕಾಲಂ-9ರಲ್ಲಿ ಸರ್ಕಾರಿ ಖಾಲಿ ಭೂಮಿ ಹೆಸರಲ್ಲಿದ್ದು ಸಾಗುವಳಿ ಕಾಲಂನಲ್ಲಿ 1956ರಿಂದಲೂ ನನ್ನೇಸಾಬ ಮತ್ತವರ ಮಕ್ಕಳ ಹೆಸರಿತ್ತು. 
2001ರವರೆಗೂ ಕುಟುಂಬ ಭೂಮಿಯ ಕಂದಾಯ ಕಟ್ಟಿಸಿಕೊಳ್ಳುತ್ತಿದ್ದ ಕಂದಾಯ ಇಲಾಖೆ 2002ರಿಂದ ಗೇಣಿ ಕಟ್ಟಿಸಿಕೊಳ್ಳಲು ನಿರಾಕಿಸಿತ್ತು. ಈಬಗ್ಗೆ ಕುಟಂಬಸ್ಥರು ಭೂನ್ಯಾಯಮಂಡಳಿಯ ಮೇಟ್ಟಿಲೇರಿದ್ದರು. ಆದರೆ ನ್ಯಾಯಾಲಯ ಸರ್ಕಾರದ ಪರವಾಗಿ ತೀರ್ಪು ನೀಡಿದ್ದರಿಂದ ಲಿಯಾಖತ್ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. 
SCROLL FOR NEXT