ಬೆಂಗಳೂರು: ವರನ ಕಡೆ ಜನರಿಗೆ ಊಟ ಕಡಿಮೆ ಆಯಿತೆಂಬ ಕಾರಣಕ್ಕೆ ಮದುವೆಯನ್ನೇ ರದ್ದುಪಡಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರಿನ ಕೋಣನಕುಂಟೆಯ ಸೌಧಾಮಿನಿ ಛತ್ರದಲ್ಲಿ ನಾಗೇಂದ್ರ ಪ್ರಸಾದ್ ಮತ್ತು ಶಿಲ್ಪಾ ಎಂಬ ಜೋಡಿಯ ಮದುವೆ ನಿಗದಿಯಾಗಿತ್ತು. ನಿನ್ನೆ ಅರತಕ್ಷತೆ ನಡೆದಿದ್ದು, ಈ ವೇಳೆ ವರನ ಕಡೆಯ ಮೂವತ್ತು ಜನರಿಗೆ ಊಟ ಕಡಿಮೆಯಾಗಿದೆ ಎನ್ನಲಾಗಿದೆ.ಇದರಿಂದ ಗಲಾಟೆ ಆರಂಭಿಸಿಜವರನ ಕಡೆಯವರು ಊಟದ ವಿಚಾರವಾಗಿ ಹೆಣ್ಣಿನ ಮನೆಯವರ ಜೊತೆ ಗಲಾಟೆ ಆರಂಭಿಸಿದ್ದಾರೆ.
ಹೆಣ್ಣಿನ ಕಡೆಯವರು ಗಂಡಿನ ಕಡೆಯವರಿಗೆ ಸಮಾಧಾನ ಮಾಡಲು ಮುಂದಾಗಿದ್ದಾರೆ. ಆದರೆ, ಅದಕ್ಕೆ ಒಪ್ಪದ ವರ ನಾಗೇಂದ್ರ ಮತ್ತು ಆತನ ಸಂಬಂಧಿಗಳು ಮದುವೆ ನಿರಾಕರಿಸಿದ್ದಾರೆ. ಊಟದ ವಿಚಾರವಾಗಿ ಹೀಗೆ ಮಾಡುವವರು ಹುಡುಗಿಯನ್ನು ಕೊಡುವುದು ಬೇಡವೆಂದು ವಧುವಿನ ಕಡೆವರು ಮದುವೆಯನ್ನೇ ರದ್ದು ಮಾಡಿದ್ದಾರೆ.