ಮಂಗಳೂರು: ಸಿಡಿಲು ಬಡಿದು ಮೂವರು ಮಹಿಳೆಯರು ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ಬುಧವಾರ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಜಕ್ರಿಬೆಟ್ಟು ಬಳಿ ನಡೆದಿದೆ.
ಬಟ್ಟೆ ತೊಳೆಯಲು ನದಿಗಿಳಿದ ಸಂದರ್ಭ ಸಿಡಿಲು ಬಡಿದ ಪರಿಣಾಮ ಜಯಮ್ಮ(28), ಕನಕಮ್ಮ(29) ಹಾಗೂ ಶಶಿಕಲಾ(7) ಎಂಬುವವರು ಮೃತಪಟ್ಟಿದ್ದು, ಎರಡು ವರ್ಷದ ಮಗು ಲಿಖಿತ ಸ್ಥಿತಿ ಗಂಭೀರವಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೃತರು ತುಮಕೂರು ಜಿಲ್ಲೆ ಶಿರಾ ತಾಲೂಕಿನ ಡ್ಯಾಗೇರ ಹಳ್ಳಿ ನಿವಾಸಿಗಳಾಗಿದ್ದು, ಬಂಟ್ವಾಳದಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು. ಕೆಲಸ ಮುಗಿಸಿ ಬಟ್ಟೆ ಒಗೆಯಲು ನದಿಗೆ ಇಳಿದಾಗ ಈ ಅವಘಡ ನಡೆದಿದೆ.
ಸ್ಥಳಕ್ಕೆ ಬಂಟ್ವಾಳ ಗ್ರಾಮಾಂತರ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.