ರಾಜ್ಯ

ಶೇ.25 ರಷ್ಟು ಸರ್ಕಾರಿ ಕೋಟಾ ಸೀಟುಗಳನ್ನು ನೀಡಲಿರುವ ಡೀಮ್ಡ್ ವೈದ್ಯಕೀಯ ವಿವಿಗಳು

Srinivas Rao BV
ಬೆಂಗಳೂರು: ಡೀಮ್ಡ್ ವೈದ್ಯಕೀಯ ವಿಶ್ವವಿದ್ಯಾನಿಲಯಗಳು ತಮ್ಮ ಶೇ.25 ರಷ್ಟು ಸೀಟುಗಳನ್ನು ಸರ್ಕಾರಿ ಕೋಟಾದೊಂದಿಗೆ ಹಂಚಿಕೊಳ್ಳಲು ಒಪ್ಪಿಗೆ ಸೂಚಿಸಿವೆ. 
ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಸಾಮಾನ್ಯ ಕೌನ್ಸಲಿಂಗ್ ಮೂಲಕ ಸರ್ಕಾರಿ ಕೋಟಾದ ಸೀಟುಗಳನ್ನು ನೀಡಲು ಡೀಮ್ಡ್ ವೈದ್ಯಕೀಯ ವಿಶ್ವವಿದ್ಯಾನಿಲಯಗಳು ಒಪ್ಪಿಗೆ ಸೂಚಿಸಿವೆ. ವೈದ್ಯಕೀಯ ಶಿಕ್ಷಣ ಸಚಿವ ಶರಣ್ ಪ್ರಕಾಶ್ ಪಾಟೀಲ್ ಅವರೊಂದಿಗೆ ನಡೆದ ಹಲವು ಸುತ್ತಿನ ಸಭೆಯ ನಂತರ ಡೀಮ್ಡ್ ವೈದ್ಯಕೀಯ ವಿಶ್ವವಿದ್ಯಾನಿಲಯಗಳು 2017-18 ರ ಶೈಕ್ಷಣಿಕ ವರ್ಷದಿಂದ ಸರ್ಕಾರಿ ಕೋಟಾ ಸೀಟುಗಳನ್ನು ನೀಡಲಿವೆ. 
ಡೀಮ್ಡ್ ವೈದ್ಯಕೀಯ ವಿವಿಗಳ ಈ ನಿರ್ಧಾರದಿಂದ ಸ್ನಾತಕೋತ್ತರ ವೈದ್ಯಕೀಯ ಸೀಟುಗಳ ಪೈಕಿ ಸರ್ಕಾರಿ ಸೀಟುಗಳಲ್ಲಿ 200 ಸೀಟುಗಳು ಹೆಚ್ಚಳವಾಗಲಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಶರಣ್ ಪ್ರಕಾಶ್ ಪಾಟೀಲ್ ಹೇಳಿದ್ದಾರೆ. ಸರ್ಕಾರಿ ಕೋಟಾ ಸೀಟುಗಳು 6 ಲಕ್ಷ  ನಿಶ್ಚಿತ ಶುಲ್ಕ ವಿಧಿಸಲಾಗಿದ್ದು ವಿದ್ಯಾರ್ಥಿಗಳಿಗೆ ಸಹಕಾರಿಯಾಗಿದೆ. 
SCROLL FOR NEXT