ರಾಜ್ಯ

ಅಕ್ರಮ ಎಸಗುತ್ತಿದ್ದ ಆಪರೇಟರ್ ಗಳ ವಿರುದ್ಧ ಯುಐಡಿಎಐ ಕ್ರಮ

Srinivas Rao BV
ಬೆಂಗಳೂರು: 2010 ರಲ್ಲಿ ಆಧಾರ್ ಕಾರ್ಡ್ ನೋಂದಣಿ ಪ್ರಾರಂಭವಾದಾಗಿನಿಂದಲೂ, ಆಧಾರ್ ಕೇಂದ್ರಗಳ ವಿರುದ್ಧ ಅಕ್ರಮ ಎಸಗುತ್ತಿರುವ ಆರೋಪ ಕೇಳಿಬರುತ್ತಿದೆ. ನೋಂದಣಿ ನಿಯಮಗಳನ್ನು ಉಲ್ಲಂಘಿಸುವುದು, ಆಧಾರ್ ನೋಂದಣಿಗೆ ಸಾರ್ವಜನಿಕರಿಂದ ಹಣ ಪಡೆಯುವುದು, ಸೂಕ್ತ ದಾಖಲೆಗಳು ಇಲ್ಲದೇ ಇದ್ದರೂ ಸಹ ಆಧಾರ್ ಕಾರ್ಡ್ ನೀಡುವುದು ಹೀಗೆ ಒಂದಲ್ಲಾ ಒಂದು ಆರೋಪ ನಿರಂತರವಾಗಿ ಕೇಳಿಬರುತ್ತಿತ್ತು. ಈಗ ಅದಕ್ಕೆ ಕಡಿವಾಣ ಹಾಕಲು ಯುಐಡಿಎಐ ಕ್ರಮ ಕೈಗೊಳ್ಳುತ್ತಿದೆ. 
ಅಕ್ರಮ ಎಸಗುವ ಕೇಂದ್ರಗಳ ವಿರುದ್ಧ ಯುಐಡಿಎಐ ಕಠಿಣ ಕ್ರಮ ಕೈಗೊಳ್ಳುತ್ತಿದೆ. ಕಳೆದ ಕೆಲವು ವಾರಗಳಿಂದ ರಾಜ್ಯದ ವಿವಿಧ ಭಾಗಗಳಲ್ಲಿ ಯುಐಡಿಎಐ ನಾಲ್ಕು ಪ್ರಕರಣಗಳನ್ನು ದಾಖಲಿಸಲಾಗಿದ್ದು, ಇದೇ ಮೊದಲ ಬಾರಿಗೆ ಆಧಾರ್ ಆಪರೇಟರ್ ಗಳ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. 
ಇತ್ತೀಚೆಗಷ್ಟೇ ಪೊನ್ನಂಪೇಟೆಯಲ್ಲಿ ಅಸ್ಸಾಂ ನಿಂದ ಬಂದ ಕಾರ್ಮಿಕರಿಗೆ ಆಧಾರ್ ನಂಬರ್ ನ್ನು ನೀಡುತ್ತಿದ್ದ ಆರೋಪದಲ್ಲಿ ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಬಾಂಗ್ಲಾ ದೇಶಿಗರಿಗೆ ಆಧಾರ್ ಕಾರ್ಡ್ ನೀಡಲಾಗುತ್ತಿದೆ ಸ್ಥಳೀಯರು ದಾಖಲಿಸಿದ್ದ ದೂರಿನ ಹಿನ್ನೆಲೆಯಲ್ಲಿ ಆಧಾರ್ ಕೇಂದ್ರದ ವಿರುದ್ಧ ದೂರು ದಾಖಲಾಗಿದೆ. 
SCROLL FOR NEXT