ಬೆಂಗಳೂರು: ಉದ್ಯಾನ ನಗರಿ, ಕೂಲ್ ಸಿಟಿ ಎಂದು ಬಿರುದು ಪಡೆದಿದ್ದ ಬೆಂಗಳೂರಿಗೆ ಸಹ ಬಿಸಿಲಿನ ತಾಪ ತಟ್ಟಿದೆ. ವರ್ಷದಿಂದ ವರ್ಷಕ್ಕೆ ತಾಪಮಾನ ಏರಿಕೆಯಾಗುತ್ತಿದ್ದು ಈ ವರ್ಷ 40 ಡಿಗ್ರಿಗೆ ತಲುಪುವ ಸಾಧ್ಯತೆಯಿದೆ.
ಈ ವಾರದ ಆರಂಭದಲ್ಲಿ ಯಲಹಂಕದಲ್ಲಿ ಅತ್ಯಂತ ಗರಿಷ್ಠ ತಾಪಮಾನ 40 ಡಿಗ್ರಿಗೆ ತಲುಪಿತ್ತು. ನಿನ್ನೆ 39.6 ಡಿಗ್ರಿ ಸೆಲ್ಸಿಯಸ್, ಮೊನ್ನೆ ಶನಿವಾರ 38.1 ಡಿಗ್ರಿ ಸೆಲ್ಸಿಯಸ್ ಆಗಿತ್ತು ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣಾ ಕೇಂದ್ರ ತಿಳಿಸಿದೆ.
ಬೆಂಗಳೂರು ನಾಗರಿಕ ಹವಾಮಾನ ನೆಟ್ವರ್ಕ್ ನ ಪವನ್ ಶ್ರೀನಾಥ್, ಜಕ್ಕೂರು ಕೆರೆಯಲ್ಲಿ 32.3 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಬೆಂಗಳೂರಿನ ಇತರ ಭಾಗಗಳಿಗಿಂತ ಕೆರೆಯ ಸುತ್ತಮುತ್ತ ತಂಪಾಗಿದೆ ಎನ್ನುತ್ತಾರೆ.
ಹನುಮಂತನಗರದ ನಿವಾಸಿ ಹಾಗೂ ನಿವೃತ್ತ ಶಿಕ್ಷಕ ವೆಂಕಟೇಶಯ್ಯ, ಕೆಲವು ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಬೇಸಿಗೆಯಲ್ಲಿ ತಂಪು ಅನಿಸುತ್ತಿತ್ತು. ಇಂದು ಬೇರೆ ಕಾಲದಲ್ಲಿ ಕೂಡ ತಲೆಗೆ ಶಾಲು, ಟೊಪ್ಪಿ ಹಾಕಿಕೊಂಡು ಹೋಗಬೇಕಾದ ಪರಿಸ್ಥಿತಿಯಿದೆ. ನೂರಾರು ಮರಗಳನ್ನು ಕಡಿಯಲಾಗಿದೆ. ಹಲವು ಕೆರೆಗಳು ಒತ್ತುವರಿಯಾಗಿವೆ. ಹೀಗಾದಾಗ ತಂಪು ಉಳಿಯಲು ಹೇಗೆ ಸಾಧ್ಯ ಎಂದು ಕೇಳುತ್ತಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics