ಮೈಸೂರು: ಭೂಮಿಯಲ್ಲಿ ಬೆಂಕಿ ಬರುತ್ತಿದೆ ಹತ್ತಿರ ಹೋಗಬೇಡ ಎಂದು ಹೇಳಿದರೂ ಹರ್ಷಿಲ್ ಕುತೂಹಲದಿಂದಾಗಿ ಕುದಿಯುತ್ತಿರುವ ಭೂಮಿಯೊಳಗೆ ಜಿಗಿದಿದ್ದ ಎಂದು ಮೃತ ಹರ್ಷಿಲ್ ಗೆಳೆಯ ಮನೋಜ್ ಹೇಳಿದ್ದಾನೆ.
ಕೆಲ ದಿನಗಳ ಹಿಂದಷ್ಟೇ ಮೈಸೂರಿನ ಹೊರವಲಯದ ಬೆಲವೆತ್ತ ಗ್ರಾಮ ವಿಚಿತ್ರ ಘಟನೆಯೊಂದಕ್ಕೆ ಸಾಕ್ಷಿಯಾಗಿತ್ತು. ಬೆಲವೆತ್ತ ಗ್ರಾಮದ ಭೂ ಪ್ರದೇಶವೊಂದರಲ್ಲಿ ಬೆಂಕಿ ನರ್ತನವಾಡುತ್ತಿತ್ತು. ಕ್ರಿಕೆಟ್ ಆಡಲೆಂದು ಹೋಗಿದ್ದ ನಾಲ್ವರು ಬಾಲಕರ ಪೈಕಿ ಹರ್ಷಿಲ್ ಎಂಬ ಬಾಲಕ ತೀವ್ರವಾಗಿ ಗಾಯಗೊಂಡು ಮೃತಪಟ್ಟಿದ್ದ.
ಘಟನೆ ಕುರಿತಂತೆ ಹರ್ಷಿಲ್ ಸ್ನೇಹಿತ ಮನೋಜ್ ಪ್ರತಿಕ್ರಿಯೆ ನೀಡಿದ್ದಾನೆ. ಭೂಮಿಯಲ್ಲಿ ಕಾಣಿಸಿಕೊಂಡಿದ್ದ ಬೆಂಕಿಯನ್ನು ಮನೋಜ್ ಮೊದಲು ನೋಡಿದ್ದ. ಆಟವಾಡುತ್ತಿದ್ದ ವೇಳೆ ಬೆಂಕಿ ಇದ್ದ ಭೂ ಪ್ರದೇಶಕ್ಕೆ ಹೋಗಿದ್ದ ಮನೋಜ್ ತನ್ನ ಕಾಲಿಗೆ ತೀವ್ರವಾಗಿ ಗಾಯ ಮಾಡಿಕೊಂಡಿದ್ದ. ಕೂಡಲೇ ತನ್ನ ಗೆಳೆಯರಾದ ಹರ್ಷಿಲ್, ಯಶವಂತ್ ಮತ್ತು ಉಲ್ಲಾಸ್'ಗೆ ಘಟನೆ ಬಗ್ಗೆ ಹೇಳಿದ್ದಾನೆ.
ಕಾಲಿಗೆ ಗಾಯವಾಗುತ್ತಿದ್ದಂತೆ ಸಹಾಯಕ್ಕಾಗಿ ಕೂಗಿಕೊಂಡಿದ್ದೆ...ಕೂಡಲೇ ಸ್ಥಳಕ್ಕೆ ನನ್ನ ಸ್ನೇಹಿತರು ಬಂದಿದ್ದರು. ಭೂಮಿಯಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದು, ಹತ್ತಿರ ಹೋಗದಂತೆ ಹರ್ಷಿಲ್'ಗೆ ಹೇಳಿದ್ದೆ. ಆದರೆ, ಆತ ನನ್ನ ಮಾತನ್ನು ಕೇಳದೆಯೇ ಕುತೂಹಲಭರಿತನಾಗಿ ಕುದಿಯುತ್ತಿರುವ ಭೂಮಿಯೊಳಗೆ ಜಿಗಿದಿದ್ದ ಎಂದು ಮನೋಜ್ ಹೇಳಿದ್ದಾನೆ.
ಪ್ರಸ್ತುತ ಮನೋಜ್ ಕೆಆರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics