ರಾಜ್ಯ

ಶಾಸಕರಾಗಿ ಗೀತಾ ಮಹದೇವ ಪ್ರಸಾದ್, ಕಳಲೆ ಕೇಶವ ಮೂರ್ತಿ ಪ್ರಮಾಣ ವಚನ ಸ್ವೀಕಾರ

Srinivasamurthy VN

ಬೆಂಗಳೂರು: ನಂಜನಗೂಡು ಮತ್ತು ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಗೆದ್ದಿದ್ದ ಗೀತಾ ಮಹದೇವ ಪ್ರಸಾದ್ ಹಾಗೂ ಕಳಲೆ ಕೇಶವ ಮೂರ್ತಿ ಅವರು ಶುಕ್ರವಾರ ಶಾಸಕರಾಗಿ ಪ್ರಮಾಣ ವಚನ  ಸ್ವೀಕರಿಸಿದ್ದಾರೆ.

ವಿಧಾನಸೌಧದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಸ್ಪೀಕರ್ ಕೋಳಿವಾಡ ಅವರು ಗುಂಡ್ಲುಪೇಟೆ ಶಾಸಕಿ ಗೀತಾ ಮಹದೇವ ಪ್ರಸಾದ್ ಹಾಗೂ ನಂಜನಗೂಡು ಶಾಸಕ ಕಳಲೆ ಕೇಶವ ಮೂರ್ತಿ ಅವರಿಗೆ ಪ್ರತಿಜ್ಞಾ ವಿಧಿ  ಬೋದಿಸಿದರು. ಗೀತಾ ಮಹದೇವ ಪ್ರಸಾದ್ ಅವರು ಮಲೈ ಮಹದೇಶ್ವರ ಸ್ವಾಮಿ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರೆ, ಕಳಲೆ ಕೇಶವ ಮೂರ್ತಿ ಅವರು ನಂಜನಗೂಡು ಶ್ರೀಕಂಠೇಶ್ವರ ಸ್ವಾಮಿ ಹೆಸರಿನಲ್ಲಿ ಪ್ರತಿಜ್ಞಾ ವಿಧಿ  ಸ್ವೀಕರಿಸಿದರು.

ಇತ್ತೀಚೆಗೆ ನಡೆದಿದ್ದ ಎರಡು ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದ ಗೀತಾ ಮಹದೇವ ಪ್ರಸಾದ್ ಹಾಗೂ ಕಳಲೆ ಕೇಶವ ಮೂರ್ತಿ ವಿಜಯ ಶಾಲಿಗಳಾಗಿದ್ದರು. ಮಾಜಿ ಸಚಿವ ಎಚ್ ಎಸ್ ಮಹದೇವ  ಪ್ರಸಾದ್ ಅವರ ನಿಧನದಿಂದಾಗಿ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರ ತೆರವಾಗಿತ್ತು. ಅಂತೆಯೇ ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್ ಅವರ ರಾಜಿನಾಮೆಯಿಂದಾಗಿ ನಂಜನಗೂಡು ವಿಧಾನಸಭಾ ಕ್ಷೇತ್ರಕ್ಕೆ ಉಪ ಚುನಾವಣೆ  ನಡೆದಿತ್ತು.

SCROLL FOR NEXT