ಸಾವಿಗೀಡಾದ ಭಜರಂಗದಳ ಕಾರ್ಯಕರ್ತ 
ರಾಜ್ಯ

ಮಂಗಳೂರು: ಬಜರಂಗ ದಳದ ಮುಖಂಡ ಶಂಕಾಸ್ಪದ ಸಾವು

ಮಂಗಳೂರು ನಗರಿನ ಬಜರಂಗ ದಳದ ಮುಖಂಡನೋರ್ವ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಬೆಂಗರೆ ಬೀಚ್ ನಲ್ಲಿ ಜಗದೀಶ್ ಸುವರ್ಣ ಅವರ ಶವ ಪತ್ತೆಯಾಗಿದೆ.

ಮಂಗಳೂರು: ಮಂಗಳೂರು ನಗರದ ಬಜರಂಗ ದಳದ ಮುಖಂಡನೋರ್ವ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಬೆಂಗರೆ ಬೀಚ್ ನಲ್ಲಿ ಜಗದೀಶ್ ಸುವರ್ಣ ಅವರ ಶವ ಪತ್ತೆಯಾಗಿದೆ.

ಮೃತನನ್ನು 37 ವರ್ಷದ ಜಗದೀಶ್ ಸುವರ್ಣ ಎಂದು ಗುರುತಿಸಲಾಗಿದ್ದು. ಮಂಗಳೂರಿನ ಅಳಿವೆಬಾಗಿಲಿನ ಬೆಂಗರೆ ಬೀಚ್ ನಲ್ಲಿ ಶವ ಪತ್ತೆಯಾಗಿದೆ. ಗುರುವಾರ ರಾತ್ರಿ ಪಕ್ಕದ ಮನೆಯ ಮದುವೆ ಸಮಾರಂಭದಲ್ಲಿ ಭಾಗಿಯಾಗಿದ್ದ  ಜಗದೀಶ್ ಸುವರ್ಣ ಅವರು, ನಸುಕಿನ ಜಾವ 3 ಗಂಟೆಯವರೆಗೂ ಅಲ್ಲಿಯೇ ಇದ್ದರು. ನಂತರ ಅಲ್ಲಿಂದ ಹೊರಟು ಹೋದರು ಎಂದು ಅವರ ಸ್ನೇಹಿತರೊಬ್ಬರು ತಿಳಿಸಿದ್ದಾರೆ. ಆದರೆ ಶುಕ್ರವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಅಳಿವೆ  ಬಾಗಿಲಿನ ಬಳಿ ಸಮುದ್ರದಲ್ಲಿ ಅವರ ಶವ ತೇಲುತ್ತಿರುವುದು ಕಂಡುಬಂದಿದೆ.

ಇದನ್ನು ಕಂಡ ಕೂಡಲೇ ಸ್ಥಳೀಯರು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರು. ತಕ್ಷಣ ಸ್ಥಳಕ್ಕೆ ತೆರಳಿ ಶವವನ್ನು ಮೇಲಕ್ಕೆತ್ತಿ, ಮರಣೋತ್ತರ ಪರೀಕ್ಷೆಗಾಗಿ ನಗರದ ವೆನ್ಲಾಕ್ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಪಣಂಬೂರು  ಠಾಣೆ ಪೊಲೀಸರು ತಿಳಿಸಿದ್ದಾರೆ. 15 ವರ್ಷಗಳಿಂದ ಬಜರಂಗ ದಳದಲ್ಲಿ ಸಕ್ರಿಯರಾಗಿದ್ದ ಜಗದೀಶ್ ಸುವರ್ಣ, ಸಂಘಟನೆಯ ಬೆಂಗರೆ ಘಟಕದ ಸಂಚಾಲಕರಾಗಿದ್ದರು ಎಂದು ತಿಳಿದುಬಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!