ರಾಜ್ಯ

ಜಾಗತಿಕ ಮಟ್ಟದಲ್ಲಿ ಕನ್ನಡ ಜಾನಪದ ಗೀತೆ ಕಂಪು ಪಸರಿಸಿದ 'ಅಮ್ಮ ರಾಮಚಂದ್ರ'

Shilpa D
ಮೈಸೂರು: ಕರ್ನಾಟಕದ  ಹಾಡುಗಾರ ಅಮ್ಮ ರಾಮಚಂದ್ರ ಕ್ಯಾಲಿಪೋರ್ನಿಯಾದ ಸಭಾಂಗಣದಲ್ಲಿ ಗೀತೆಗಳನ್ನು ಜಾನಪದ ಹಾಡುವ ಮೂಲಕ ಅಲ್ಲಿನ ಪ್ರೇಕ್ಷಕರನ್ನು ರಂಜಿಸಿದ್ದಾರೆ. ಹಾಡು ಕೇಳಿದವರೆಲ್ಲಾ ಕುಣಿಯುವಂತೆ ಮಾಡಿದ್ದಾರೆ.
ಸಂಗೀತಕ್ಕೆ ಯಾವುದೇ ಭಾಷೆಯಿಲ್ಲ, ಯಾವುದೇ ಭಾಷೆಯಾದರೂ ಅದನ್ನು ಅನುಭವಿಸಿ ಸಂತೋಷ ಪಡಬೇಕು. ನಾನು ಕ್ಯಾಲಿಫೋರ್ನಿಯಾದಲ್ಲಿ ಚೆಲ್ಲಿದರೂ ಮಲ್ಲಿಗೆಯಾ ಜನಪದ ಗೀತೆಯನ್ನು ಹಾಡಲು ಆರಂಭಿಸಿದಾಗ ಅಲ್ಲಿದ್ದ ವಿದೇಶಿಯರು ಹಾಡಿಗೆ ಡ್ಯಾನ್ಸ್ ಮಾಡಿದರು, ನಂತರ ಅವರೆಲ್ಲ ಬಂದು ನನ್ನ ತಬ್ಬಿ  ನನ್ನ ಜೊತೆ ಫೋಟೋ ಕ್ಕಿಕ್ಕಿಸಿಕೊಂಡರು. ಆಗ ನನಗಾದ ಸಂತೋಷಕ್ಕೆ ಕೊನೆಯೆ ಇರಲಿಲ್ಲ ಎಂದು 32 ವರ್ಷದ ಜಾನಪದ ಹಾಡುಗಾರ ರಾಮಚಂದ್ರ ಹೇಳುತ್ತಾರೆ,
ಮೈಸೂರಿನ ಎಚ್ .ಡಿ ಕೋಟೆ ತಾಲೂಕಿನ ದೇವಲಾಪುರ ಎಂಬ ಗ್ರಾಮದ ರಾಮಚಂದ್ರ ಅಂತರಾರಾಷ್ಟ್ರೀಯ ಮಟ್ಟದಲ್ಲಿ ಗೌರವ ಪಡೆದುಕೊಂಡಿದ್ದಾರೆ,
ಕೂಲಿ ಕಾರ್ಮಿಕರ ದಂಪತಿ ಪುತ್ರನಾಗಿ ಜನಿಸಿದ ರಾಮಚಂದ್ರ ತನ್ನ ವಿದ್ಯಾಭ್ಯಾಸ ಹಾಗೂ ಸಂಸಾರಕ್ಕಾಗಿ 8ನೇ ವಯಸ್ಸಿನಲ್ಲಿಯೇ ಹಣ ಸಂಪಾದಿಸಲು ಆರಂಭಿಸಿದರು. ನಾನು ಎಲ್ಲಾ ರೀತಿಯ ಕೆಲಸಗಳನ್ನು ಮಾಡಿದ್ದೇನೆ, ರಸ್ತೆಗೆ ಡಾಂಬರು ಹಾಕುವುದು, ಕಲ್ಲು ಪುಡಿ ಮಾಡುವುದು, ಹಸು ಮೇಯಿಸುವುದು ಸೇರಿದಂತೆ ಎಲ್ಲಾ ರೀತಿಯ ಕೆಲಸಗಳನ್ನು ಮಾಡಿ ಹೇಗೋ ಎಸ್ ಎಸ್ ಎಲ್ ಸಿ ವರೆಗೂ ವಿದ್ಯಾಭ್ಯಾಸ ಮಾಡಿದೆ. 
ಎಸ್ ಎಸ್ ಎಲ್ ಸಿಯಲ್ಲಿ ಅನುತ್ತೀರ್ಣನಾದ ನಂತರ 2 ವರ್ಷ ಮನೆಯಲ್ಲಿಯೇ ಉಳಿದೆ. ನಂತರ ವಿದ್ಯಾಭ್ಯಾಸ ಮುಂದುವರಿಸಿ 2013 ರಲ್ಲಿ ಜಾನಪದ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿದೆ, 7 ವರ್ಷದ ಹಿಂದೆ ಜಾನಪದ ಹಾಡುಗಾರನಾಗಿ ವೃತ್ತಿ ಆರಂಭಿಸಿ, ಇವತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಿದ್ದಾರೆ. ಚೀನಾ, ಅಮೆರಿಕಾ ಮತ್ತು ಯುರೋಪ್ ಗಳಲ್ಲಿ ತಮ್ಮ ಹಾಡಿನ ಪ್ರದರ್ಶನ ನೀಡಿದ್ದಾರೆ.
ವಿಎಸ್ ಎಸ್ ಕಾಲೇಜಿನಲ್ಲಿ ನಾನು ಪಿಯುಸಿ ಓದುತ್ತಿದ್ದೆ, ಆ ವೇಳೆ ಆಶ್ರದ ಹಾಸ್ಟೆಲ್ ನಲ್ಲಿ ವಾಸಿಸುತ್ತಿದ್ದೆ, ನಾನು ಹಾಡುತ್ತಿದ್ದುದ್ದನ್ನು ಕೇಳಿದ ನನ್ನ ರೂಮ್ ಮೇಟ್ ಈ ವಿಷಯವನ್ನು ಶಿಕ್ಷಕರಿಗೆ ತಿಳಿಸಿದ, ಹಾಡಿನ ಸ್ಪರ್ದೆಯಲ್ಲಿ ಶಿಕ್ಷಕರು ನನ್ನನ್ನು ತುಂಬಾ ಪ್ರೋತ್ಸಾಹಿಸಿದರು. ಅಂದು ಹಾಡಲು ನಾನು ತುಂಬಾ ಹೆದರಿದ್ದೆ, ಆದರೆ ನನ್ನ ಶಿಕ್ಷಕರು ನನ್ನನ್ನು ಬೆಂಬಲಿಸಿ ಧೈರ್ಯ ತುಂಬಿದರು, ನನಗೆ ಮೊದಲ ಪ್ರಶಸ್ತಿ ಬಂತು. ಅಲ್ಲಿಂದ ನನ್ನ ಜೀವವೇ ಬದಲಾಯಿತು ಎಂದು ಹೇಳಿದ್ದಾರೆ.
ನನಗೆ ಯಾರು ಗುರು ಇಲ್ಲ, ನಮ್ಮ ಮನೆಯಲ್ಲಿ ನಾನು ಚಿಕ್ಕವನಿದ್ದಾಗ ಒಂದು ರೇಡಿಯೋ ಕೂಡ ಇರಲಿಲ್ಲ,. ಪಕ್ಕದ ಮನೆಯಲ್ಲಿ ಕುಳಿತು ಹಾಡು ಕೇಳುತ್ತಿದ್ದೆ. ನಾನು ಹಾಡುಗಾರನಾಗಬೇಕೆಂಬುದು ನನ್ನ ತಾಯಿಯ ಕನಸಾಗಿತ್ತು. ಈಗ ನಾನು ಪ್ರತಿ ತಿಂಗಳು 25 ಸಾವಿರ ರು ಸಂಪಾದನೆ ಮಾಡುತ್ತಿದ್ದೇನೆ, ನಾನು ಖುಷಿಯಾಗಿದ್ದೇನೆ ಎಂದು ಹೇಳುತ್ತಾರೆ.
ನೂರಾರು ಯುವಕರಿಗೆ ಸಂಗೀತ ಕಲಿಸುತ್ತಿದ್ದಾರೆ. ಎಚ್ ಡಿ ಕೋಟೆಯಲ್ಲಿ ಜಾನಪದ ಕಲೆ ಬಗ್ಗೆ ತರಬೇತಿ ನೀಡುವ ಕೇಂದ್ರ ಸ್ಥಾಪಿಸಬೇಕೆಂಬುದು ರಾಮಚಂದ್ರ ಅವರ ಮಹದಾಸೆಯಾಗಿದೆ.
SCROLL FOR NEXT