ರಾಜ್ಯ

ಬೆಂಗಳೂರು: ವಾಹನ ಸಂಚಾರ ಮುಕ್ತ ವಲಯಗಳ ಘೋಷಣೆಗೆ ಹೆಚ್ಚುತ್ತಿರುವ ಬೇಡಿಕೆ

Sumana Upadhyaya
ಬೆಂಗಳೂರು: ಕಮರ್ಷಿಯಲ್ ಸ್ಟ್ರೀಟ್, ಎಂ.ಜಿ.ರೋಡ್, ಶಿವಾಜಿನಗರ, ಅವೆನ್ಯೂ ರೋಡ್, ಚಿಕ್ಕಪೇಟೆ ಇತ್ಯಾದಿ ಸ್ಥಳಗಳಲ್ಲಿ ನೀವು ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುವುದು ಅಷ್ಟು ಸುಲಭವಲ್ಲ. ಕಿರು ದಾರಿಯಲ್ಲಿ ನಡೆಯುತ್ತಾ ಹೋಗುತ್ತಿದ್ದರೆ ಹಿಂದು-ಮುಂದು, ಎಡ-ಬಲ ನಾಲ್ಕೂ ಕಡೆಗಳಿಂದ ವಾಹನ ಹಾರ್ನ್ ಮಾಡುತ್ತಿರುತ್ತದೆ. 
ಈ ಪರಿಸ್ಥಿತಿಯ ನಡುವೆ ಬೆಂಗಳೂರು ನಗರದ ಶಾಪಿಂಗ್ ಸ್ಥಳಗಳನ್ನು ಅತ್ಯಂತ ಜನದಟ್ಟಣೆಯ ಜಾಗಗಳನ್ನು ವಾಹನ ಮುಕ್ತವನ್ನಾಗಿಸಬೇಕೆಂಬ ಕೂಗು ಜೋರಾಗುತ್ತಿದೆ.
 ಕಮರ್ಷಿಯಲ್ ಸ್ಟ್ರೀಟ್, ಚರ್ಚ್ ಸ್ಟ್ರೀಟ್, ಬ್ರಿಗೇಡ್ ರಸ್ತೆ, ಚಿಕ್ಕಪೇಟೆ, ಅವೆನ್ಯೂ ರಸ್ತೆ, ಇಂದಿರಾನಗರ, ಕೋರಮಂಗಲ,  ಹೆಚ್ ಎಸ್ಆರ್ ಲೇ ಔಟ್ ಮೊದಲಾದ ಸ್ಥಳಗಳಲ್ಲಿ ಅಲ್ಲಿನ ಸುತ್ತಮುತ್ತಲ ನಿವಾಸಿಗಳು ಮತ್ತು ವ್ಯಾಪಾರ ಒಕ್ಕೂಟಗಳು ಆಸಕ್ತಿ ತೋರಿಸಿ ಕ್ರಮ ಕೈಗೊಂಡರೆ ವಾರಾಂತ್ಯಗಳಲ್ಲಿ ವಾಹನ ಸಂಚಾರ ಮುಕ್ತಗೊಳಿಸಬಹುದು ಎಂದು ಬೆಂಗಳೂರು ಸಂಚಾರ ಪೊಲೀಸರು ಹೇಳುತ್ತಾರೆ.
ಕಬ್ಬನ್ ಪಾರ್ಕನ್ನು ಭಾನುವಾರ ಸಂಚಾರ ಮುಕ್ತಗೊಳಿಸಲಾಗಿದೆ. ಕಮರ್ಷಿಯಲ್ ಸ್ಟ್ರೀಟ್, ಅವೆನ್ಯೂ ರಸ್ತೆ ಮೊದಲಾದವುಗಳನ್ನು ಪಾದಚಾರಿಗಳ ಸುಗಮ ಸಂಚಾರಕ್ಕೆ ವಾರಾಂತ್ಯಗಳಲ್ಲಿ ಸಂಚಾರ ಮುಕ್ತಗೊಳಿಸಲಾಗುವುದು ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ(ಸಂಚಾರಿ) ಆರ್. ಹಿತೇಂದ್ರ ತಿಳಿಸಿದ್ದಾರೆ.
ಕಳೆದ ವರ್ಷ, ಬೆಂಗಳೂರು ಸಂಚಾರ ಪೊಲೀಸರು ಮತ್ತು ಕಮರ್ಷಿಯಲ್ ಸ್ಟ್ರೀಟ್ ವ್ಯಾಪಾರಿಗಳ ಒಕ್ಕೂಟ ಕೆಲವು ಗಂಟೆಗಳವರೆಗೆ ವಾರಾಂತ್ಯಗಳಲ್ಲಿ ವಾಹನ ಸಂಚಾರವನ್ನು ನಿಷೇಧಿಸಿತ್ತು. ಆದರೆ ಕೆಲವು ಸಮಯ ಕಳೆದ ನಂತರ ಅದು ಮಹತ್ವವನ್ನು ಕಳೆದುಕೊಂಡಿತ್ತು.
SCROLL FOR NEXT