ರಾಜ್ಯ

ಬಿಜೆಪಿ ಉಳಿಸಿ ಕಾರ್ಯಕ್ರಮದಲ್ಲಿ ಯಡಿಯೂರಪ್ಪ ವಿರುದ್ಧ ಈಶ್ವರಪ್ಪ ಬೆಂಬಲಿಗರ ಟೀಕೆ, ವಾಗ್ದಾಳಿ!

Srinivas Rao BV
ಬೆಂಗಳೂರು: ಅರಮನೆ ಮೈದಾನದಲ್ಲಿ ನಡೆಯುತ್ತಿರುವ "ಬಿಜೆಪಿ ಉಳಿಸಿ" ಕಾರ್ಯಕ್ರಮದಲ್ಲಿ ಈಶ್ವರಪ್ಪ-ಯಡಿಯೂರಪ್ಪ ಬೆಂಬಲಿಗರ ನಡುವೆ ವಾಗ್ವಾದ ನಡೆದ ಘಟನೆ ನಡೆದಿದೆ. 
ಏ.27 ರಂದು ಬಿಜೆಪಿ ನಾಯಕರು ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಈಶ್ವರಪ್ಪ ಹಾಗೂ ಅವರ ಬೆಂಬಲಿಗರು ಭಾಗವಹಿಸಿದ್ದರು. ಈ ವೇಳೆ ಭಾಷಣ ಮಾಡಿದ ವಿಧಾನಪರಿಷತ್ ಸದಸ್ಯ ಭಾನುಪ್ರಕಾಶ್ ಯಡಿಯೂರಪ್ಪನವರ ವಿರುದ್ಧ ಟೀಕೆ ಮಾಡಿದರು. ಪರಿಣಾಮ ರೊಚ್ಚಿಗೆದ್ದ ಯಡಿಯೂರಪ್ಪ ಬೆಂಬಲಿಗರು ಭಾನುಪ್ರಕಾಶ್ ಅವರನ್ನು ಕಾರ್ಯಕ್ರಮದಿಂದ ಹೊರಗೆ ಕಳಿಸಬೇಕೆಂದು ಆಗ್ರಹಿಸಿದರು. ಭಾನುಪ್ರಕಾಶ್ ಅವರನ್ನು ಕಾರ್ಯಕ್ರಮದಿಂದ ಹೊರಗೆ ಕಳಿಸಬೇಕೆಂದು ಯಡಿಯೂರಪ್ಪ ಬೆಂಬಲಿಗರು ಆಗ್ರಹಿಸಿದ ಹಿನ್ನೆಲೆಯಲ್ಲಿ ಈಶ್ವರಪ್ಪ- ಯಡಿಯೂರಪ್ಪ ಬೆಂಬಲಿಗರ ನಡುವೆ ವಾಗ್ವಾದ ನಡೆದು ಗೊಂದಲದ ವಾತಾವರಣ ಉಂಟಾಯಿತು. 
ಇನ್ನು "ಬಿಜೆಪಿ ಉಳಿಸಿ" ಸಮಾವೇಶದ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಯಡಿಯೂರಪ್ಪ, ಈಶ್ವರಪ್ಪನವರು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರ ಸೂಚನೆಯನ್ನು ಧಿಕ್ಕರಿಸಿ ಮತ್ತೆ ರಾಯಣ್ಣ ಬ್ರಿಗೇಡ್ ಸಂಘಟನೆಯಲ್ಲಿ ಸಕ್ರಿಯರಾಗಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋತ ಈಶ್ವರಪ್ಪನವರನ್ನು ವಿಧಾನಪರಿಷತ್ ಗೆ ಆಯ್ಕೆ ಮಾಡಿ ವಿಪಕ್ಷನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ. ಈಶ್ವರಪ್ಪನವರು ಪಕ್ಷದ ರಾಷ್ಟ್ರಾಧ್ಯಕ್ಷರ ಸೂಚನೆಯನ್ನು ಧಿಕ್ಕರಿಸುವುದು ಸೂಕ್ತವಲ್ಲ ಅವರು ರಾಯಣ್ಣ ಬ್ರಿಗೇಡ್ ನಲ್ಲಿ ಸಕ್ರಿಯರಾಗಿರಬೇಕು ಇಲ್ಲವೇ ಬಿಜೆಪಿಯ ವಿಧಾಪರಿಷತ್ ವಿಪಕ್ಷ ನಾಯಕರಾಗಿರಬೇಕು ಎಂದು ಯಡಿಯೂರಪ್ಪ ಎಚ್ಚರಿಕೆ ನೀಡಿದ್ದಾರೆ. 
ಇನ್ನು ಇದೇ ವೇಳೆ ಎಂಎಲ್ ಸಿ ಭಾನುಪ್ರಕಾಶ್ ಅವರ ವಿರುದ್ಧವೂ ಯಡಿಯೂರಪ್ಪ ಅಸಮಾಧಾನ ವ್ಯಕ್ತಪಡಿಸಿದ್ದು, ಭಾನುಪ್ರಕಾಶ್, ಮಾಜಿ ಸಚಿವ ಶಿವಣ್ಣ, ಸೇರಿದಂತೆ ಇನ್ನಿತರ ಭಿನ್ನಮತೀಯರು ಬಿಜೆಪಿ ರಾಷ್ಟ್ರೀಯ ನಾಯಕರಾದ ಸಂತೋಷ್ ಅವರ ಬಲಗೈ ಭಂಟರಾಗಿದ್ದು ಅವರಿಂದಲೇ ಪಕ್ಷದಲ್ಲಿ ಭಿನ್ನಮತ ಉಂಟಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. 
ಇತ್ತೀಚೆಗಷ್ಟೇ ರಾಜ್ಯದಲ್ಲಿ ನಡೆದ ವಿಧಾನಸಭಾ ಉಪಚುನಾವಣೆಯಲ್ಲಿ ಬಿಜೆಪಿಗೆ ಸೋಲುಂಟಾದ ಹಿನ್ನೆಲೆಯಲ್ಲಿ ಬಿಜೆಪಿ ಭಿನ್ನಮತೀಯ ನಾಯಕರು ಸಂಘಟನೆ (ಬಿಜೆಪಿ) ಉಳಿಸಿ ಸಮಾವೇಶ ಹಮ್ಮಿಕೊಂಡಿದ್ದರು. ಈ ಸಮಾವೇಶದಲ್ಲಿ ಕೆಎಸ್ ಈಶ್ವರಪ್ಪ, ಎಂಎಲ್ ಸಿ ಭಾನುಪ್ರಕಾಶ್ ಸೇರಿದಂತೆ ಹಲವು ಬಿಜೆಪಿ ಮುಖಂಡರು ಭಾಗವಹಿಸಿದ್ದರು. 
SCROLL FOR NEXT