ಸಂಗ್ರಹ ಚಿತ್ರ 
ರಾಜ್ಯ

'ಪಾತಾಳ ಗಂಗೆ' ಹೊರತೆಗೆಯಲು ರಾಜ್ಯ ಸರ್ಕಾರದ ವಿನೂತನ ಯೋಜನೆ!

ಸತತ ಬರ ಮತ್ತು ವ್ಯಾಪಕ ನೀರಿನ ಅಭಾವ ಎದುರಿಸುತ್ತಿರುವ ಕರ್ನಾಟಕ ನೀರಿನ ಬರ ತಗ್ಗಿಸುವ ಸಲುವಾಗಿ ಭಾರಿ ಯೋಜನೆಯೊಂದನ್ನು ಕೈಗೆತ್ತಿಕೊಂಡಿದ್ದು, ಭೂಗರ್ಭದಲ್ಲಿರುವ ಅಂತರ್ಜಲವನ್ನು ಹೊರೆತೆಗೆಯಲು ಚಿಂತನೆ ನಡೆಸಿದೆ.

ಬೆಂಗಳೂರು: ಸತತ ಬರ ಮತ್ತು ವ್ಯಾಪಕ ನೀರಿನ ಅಭಾವ ಎದುರಿಸುತ್ತಿರುವ ಕರ್ನಾಟಕ ನೀರಿನ ಬರ ತಗ್ಗಿಸುವ ಸಲುವಾಗಿ ಭಾರಿ ಯೋಜನೆಯೊಂದನ್ನು ಕೈಗೆತ್ತಿಕೊಂಡಿದ್ದು, ಭೂಗರ್ಭದಲ್ಲಿರುವ ಅಂತರ್ಜಲವನ್ನು ಹೊರೆತೆಗೆಯಲು ಚಿಂತನೆ ನಡೆಸಿದೆ.

ಕಳೆದ ಐದು ವರ್ಷಗಳಿಂದ ಸತತ ಬರಗಾಲ ಎದುರಿಸುತ್ತಿರುವ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಭೀಕರ ಕೊರತೆ ಎದುರಾಗಿದ್ದ, ಇದೇ ಕಾರಣಕ್ಕೆ ಅತ್ಯಂತ ಗಂಭೀರ ಸಮಸ್ಯೆ ಇರುವ ರಾಜ್ಯದ 10 ಸ್ಥಳಗಳಲ್ಲಿ  ಭೂಗರ್ಭದ ಜಲನಾಡಿಯಿಂದಲೇ ನೀರು ಮೇಲೆತ್ತುವ ವಿನೂತನ ಯೋಜನೆ ಕೈಗೆತ್ತಿಕೊಳ್ಳಲು ಸರ್ಕಾರ ಚಿಂತನೆ ನಡೆಸಿದೆ. ಈ ವಿನೂತನ ತಂತ್ರಜ್ಞಾನದ ಮೂಲಕ ಭೂಗರ್ಭದಲ್ಲಿರುವ ಅಂತರ್ಜಲವನ್ನು ಹೊರೆತೆಗೆಯುವ ಯೋಜನೆಯನ್ನು ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸಲು ರಾಜ್ಯ ಸರ್ಕಾರ ಮುಂದಾಗಿದೆ.

ಗುರುವಾರ ಈ ಬಗ್ಗೆ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಎಚ್‌.ಕೆ.ಪಾಟೀಲ್‌ ಅವರು, "ರಾಜ್ಯದಲ್ಲಿ ತೀವ್ರ ಅಂತರ್ಜಲ ಕೊರತೆ ಎದುರಿಸುತ್ತಿರುವ 10  ಸ್ಥಳಗಳಲ್ಲಿ ಕುಡಿಯುವ ಉದ್ದೇಶಕ್ಕಾಗಿ ಭೂಗರ್ಭದ 3 ಸಾವಿರದಿಂದ 8 ಸಾವಿರ ಮೀಟರ್‌ ಅಡಿಯಲ್ಲಿ ಸಿಗುವ ಜಲನಾಡಿಗಳಿಂದ ನೀರು ತೆಗೆಯುವ ಪಾತಾಳ ಗಂಗೆ ಯೋಜನೆಯನ್ನು ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸಲು  ಮುಂದಿನ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗುವುದು. ಈ ಯೋಜನೆ ಯಶಸ್ವಿಯಾಗಿದ್ದೇ ಆದರೆ ಸುಮಾರು 80 ಸಾವಿರದಿಂದ 1 ಲಕ್ಷ  ಲೀಟರ್ ನಷ್ಟು ನೀರು ದೊರೆಯುವ ವಿಶ್ವಾಸವಿದೆ. ಈ ಹೊಸ  ತಂತ್ರಜ್ಞಾನವನ್ನು ದೇಶದಲ್ಲೇ ಮೊದಲ ಬಾರಿಗೆ ರಾಜ್ಯದಲ್ಲಿ ಕಾರ್ಯರೂಪಕ್ಕೆ ತರಲಾಗುತ್ತಿದೆ" ಎಂದು ಹೇಳಿದರು.

"ಈ ತಂತ್ರಜ್ಞಾನ ತುಸು ದುಬಾರಿಯಾದರೂ ವಿಜಯಪುರ ಜಿಲ್ಲೆಯ ಇಂಡಿ, ಕೋಲಾರ ಜಿಲ್ಲೆಯ ಶ್ರೀನಿವಾಸಪುರ, ಗದಗ ಜಿಲ್ಲೆಯ ಬೆಳದಡಿ, ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ  ಆನೇಕಲ್‌, ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ, ತುಮಕೂರು ಜಿಲ್ಲೆಯ ಪಾವಗಡ ಹಾಗೂ ಕಲಬುರಗಿ ಜಿಲ್ಲೆಯ ಆಳಂದದಲ್ಲಿ ಕುಡಿಯುವ ನೀರಿನ ಉದ್ದೇಶಕ್ಕಾಗಿ ಪ್ರಾಯೋಗಿಕವಾಗಿ ಜಾರಿ ತರಲಾಗುತ್ತಿದೆ. ಇದರ ಯಶಸ್ಸು ಆಧರಿಸಿ  ಯೋಜನೆ ವಿಸ್ತರಿಸಲಾಗುವುದು" ಎಂದು ವಿವರಿಸಿದರು.

ನೀರಿಲ್ಲದಿದ್ದರೆ ಹಣವೂ ಇಲ್ಲ!
ಇನ್ನು ಈ ತಂತ್ರಜ್ಞಾನದ ಮೂಲಕ ತೆಗೆಯುವ ನೀರು ಶುದ್ಧೀಕರಿಸಿದ ನೀರಿನಷ್ಟೇ ಕಲ್ಮಶರಹಿತವಾಗಿರುತ್ತದೆ ಹಾಗೂ ಒಂದು ವೇಳೆ ಜಲನಾಡಿಗಳಿಂದ ನೀರು ಬಾರದಿದ್ದರೆ ಗುತ್ತಿಗೆ ಪಡೆದ ವಾಟರ್‌ ಕ್ವೆಸ್ಟ್‌ ಹೈಡ್ರೋರಿಸೋರ್ಸ್‌ ಸಂಸ್ಥೆ   ಸರ್ಕಾರದಿಂದ ಹಣವನ್ನೇ ಪಡೆಯುವುದಿಲ್ಲ ಎಂಬ ಭರವಸೆ ನೀಡಿದೆ. ಹೀಗಾಗಿ ‘ಭೂಗರ್ಭದಲ್ಲಿರುವ ಅಂತರ್ಜಲವನ್ನು ಹೊರೆತೆಗೆಯುವ ಯೋಜನೆ' ಅನುಷ್ಠಾನದಿಂದ ಯಾವುದೇ ಆರ್ಥಿಕ ನಷ್ಟವೂ ಆಗುವುದಿಲ್ಲ ಮತ್ತು ನೈಸರ್ಗಿಕವಾಗಿ ಯಾವ ಪರಿಣಾಮವೂ ಉಂಟಾಗುವುದಿಲ್ಲ. ಆ ಬಗ್ಗೆ ಭಯ ಬೇಡ ಎಂದು ಸಚಿವ ಪಾಟೀಲ್ ಅಭಯ ನೀಡಿದರು.

ದೇಶದಲ್ಲಿ ಇದೇ ಮೊದಲ ಬಾರಿಗೆ ವಿನೂತನ ಪ್ರಯೋಗ
ಭೂಗರ್ಭದ ಆಳದಲ್ಲಿ ಸಮುದ್ರಗಳ ನಡುವೆ ಸಾಕಷ್ಟು ಜಲನಾಡಿಗಳಿವೆ. ಈ ಜಲನಾಡಿಗಳು ಭೂ ಪ್ರದೇಶದ ಮ್ಯಾಗ್ಮಾ ಪದರಿನ ಮೇಲೆ ಹಾಯ್ದು ಹೋಗುವಾಗ ಈ ಪದರಿನ ಹೆಚ್ಚಿನ ಉಷ್ಣತೆಯಿಂದ ಜಲನಾಡಿಗಳಲ್ಲಿ ಹರಿಯುವ ಉಪ್ಪು  ನೀರು ಆವಿಯಾಗಿ ಮೇಲಿನ ಪೊಟರೆಗಳಲ್ಲಿ ಸಂಗ್ರಹವಾಗುತ್ತದೆ. ಇಂತಹ ಜಲಮೂಲವನ್ನು ಗುರುತಿಸಿ, ಮೇಲೆತ್ತುವ ತಂತ್ರಜ್ಞಾನವನ್ನು ವಾಟರ್‌ ಕ್ವೆಸ್ಟ್‌ ಹೈಡ್ರೋರಿಸೋರ್ಸ್‌ ಸಂಸ್ಥೆ ಪ್ರಯೋಗ ನಡೆಸುತ್ತಿದೆ. ಈ ತಂತ್ರಜ್ಞಾನದಿಂದ  ಆಯಾ ಭೌಗೋಳಿಕ ಪರಿಸ್ಥಿತಿಗೆ ಅನುಗುಣವಾಗಿ 3​-8 ಸಾವಿರ ಮೀಟರ್‌ ಆಳದಿಂದ ಪ್ರತಿ ಗಂಟೆಗೆ ಒಂದು ಲಕ್ಷ ಲೀಟರ್‌ ನೀರು ಹೊರ ತೆಗೆಯಬಹುದು. ಅಷ್ಟೊಂದು ಆಳದಲ್ಲಿ ಸಿಗುವ ಜಲಮೂಲವೇ ಜಲನಾಡಿಯಾಗಿದೆ. ಇದರಿಂದ  ನೀರು ತೆಗೆಯುವ ಯೋಜನೆಗೆ ಪಾತಾಳಗರಡಿ ಎಂದು ಹೆಸರಿಟ್ಟಿದೆ. ದೇಶದಲ್ಲೇ ಇತಹುದೊಂದು ವಿನೂತನ ಪ್ರಯೋಗ ಇದೇ ಮೊದಲು ಎಂದು ಸಚಿವರು ತಿಳಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

SCROLL FOR NEXT