ವಿಜಯಪುರ: ಕಳೆದ ಎರಡು ದಶಕಗಳಲ್ಲಿ ಈ ವರ್ಷ ವಿಜಯಪುರದಲ್ಲಿ ನೀರಿನ ಬವಣೆ ತಾರಕಕ್ಕೇರಿದೆ, ಕಳೆದ 16 ದಿನಗಳಿಂದ ಇಲ್ಲಿನ ನಿವಾಸಿಗಳಿಗೆ ನೀರು ಪೂರೈಸಲಾಗುತ್ತಿಲ್ಲ.
ಆಲಮಟ್ಟಿ ಜಲಾಶಯದಲ್ಲಿ ನೀರಿನ ಸಂಗ್ರಹ ಬರಿದಾಗಿರುವ ಕಾರಣ 1997 ರಲ್ಲಿ ಉಂಟಾಗಿದ್ದ ನೀರಿನ ಬವಣೆಯನ್ನು ಮತ್ತೆ ಎದುರಿಸುತ್ತಿದೆ. ಜಿಲ್ಲಾ ಉಸ್ತುವಾರಿ ಮತ್ತು ಜಲಸಂಪನ್ಮೂಲ ಸಚಿವರು ಆಗಿರುವ ಎಂ.ಬಿ ಪಾಟೀಲ್ ಬೇಸಿಗೆಯಲ್ಲಿ ನೀರಿನ ಅಭಾವ ತಲೆದೋರುವುದಿಲ್ಲ ಎಂಬ ಭರವಸೆ ನೀಡಿದ್ದರು.
123 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯವಿರುವ ಆಲಮಟ್ಟಿ ಜಲಾಶಯದಲ್ಲಿ ಕೇವಲ 12.5 ಟಿಎಂಸಿ ನೀರು ಉಳಿದಿದೆ. ಅದರಲ್ಲಿ ಕೇವಲ 7 ಟಿಎಂಸಿ ನೀರು ಮಾತ್ರ ಕುಡಿಯಲು ಬಳಕೆ ಮಾಡಬಹುದಾಗಿದೆ, ಶುಕ್ರವಾರ ಜಲಾಶಯದ ನೀರಿನ ಮಟ್ಟ 504 ಮೀಟರ್ ಗೆ ತಲುಪಿದೆ.
ಈ ಬಾರಿಯ ರಾಬಿ ಬೆಳೆಗೆ ಜಲಾಶಯದಿಂದ ನೀರು ಹರಿಸಿದ ಕಾರಣದಿಂದಾಗಿ ನೀರಿನ ಕೊರತೆ ತಲೆದೋರಿದೆ. ಈ ಮೊದಲು ಕೇವಲ ಖಾರಿಫ್ ಬೆಳೆಗಳಿಗೆ ಮಾತ್ರ ಜಲಾಶಯದಿಂದ ನೀರು ಹರಿಸಲಾಗುತ್ತಿತ್ತು. ಉಳಿದ ನೀರನ್ನು ವಿಜಯ ಪುರ ಮತ್ತು ಸುತ್ತಮುತ್ತಲಿನ ಜಿಲ್ಲೆಗಳ ಕುಡಿಯುವ ಉದ್ದೇಶಕ್ಕಾಗಿ ಬಳಸಲಾಗುತ್ತಿತ್ತು. ಆದರೆ ಈ ಬಾರಿ ರೈತರ ಒತ್ತಾಯದಮ ಮೇರೆಗೆ ರಾಬಿ ಬೆಳೆಗೆ ನೀರು ಬಿಡಲಾಗಿತ್ತು. ಮೊದಲ ಬಾರಿಗೆ ರಾಬಿ ಬೆಳೆಗೆ ನೀರು ಹರಿಸಿದ ಪರಿಣಾಮ ಕುಡಿಯುವ ನೀರಿನ ಬವಣೆ ತಲೆ ದೋರಿದೆ.
ರೈತರಿಗೆ ಅನುಕೂಲವಾಗಲಿ ಎಂದು ನೀರು ಹರಿಸಿದ್ದಕಿಂತ ರಾಜಕೀಯ ಉದ್ದೇಶದಿಂದ ರಬಿ ಬೆಳೆಗೆ ನೀರು ಬಿಡಲಾಗಿದೆ. ಎಂದು ನಗರ ನಿವಾಸಿಗಳು ಅಭಿಪ್ರಾಯ ಪಟ್ಟಿದ್ದಾರೆ. ನೀರು ನಿರ್ವಹಣೆ ಸಂಬಂಧ ಕೃಷ್ಣ ಭಾಗ್ಯ ಜಲ ನಿಗಮ ಅಧಿಕಾರಿಗಳು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಪಂಪ್ ಗಳಲ್ಲಿ ಬದಿ ಸೇರಿಕೊಂಡಿರುವ ಕಾರಣ ನೀರು ಪೂರೈಕೆ ನಿಲ್ಲಿಸಲಾಗಿದೆ, ರಿಪೇರಿ ಕೆಲಸ ನಡೆಸುತ್ತಿದ್ದು ಶೀಘ್ರವೇ ನೀರು ಪೂರೈಸುವುದಾಗಿ ಜಲ ಮಂಡಳಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos