ರಾಜ್ಯ

ಕೊಳವೆ ಬಾವಿ ದುರಂತ: ಜಮೀನು ಮಾಲೀಕನ ಬಂಧನ

Shilpa D
ಬೆಳಗಾವಿ/ಅಥಣಿ: ತೆರೆದ ಕೊಳವೆ ಬಾವಿಗೆ ಬಿದ್ದು ಬಾಲಕಿಯೊಬ್ಬಳು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ, ಝುಂಜರವಾಡದ ಹೊಲದ ಮಾಲೀಕನನ್ನು ಬಂಧಿಸಲಾಗಿದೆ.
ಸುಟ್ಟಟ್ಟಿ ಗ್ರಾಮದ ನಿವಾಸಿ ಮುತ್ತಣ್ಣ ಶಂಕರ ಹಿಪ್ಪರಗಿ ಬಂಧಿತ  ವ್ಯಕ್ತಿ. ಅಥಣಿಯ ಜೆಎಂಎಫ್‌ಸಿ ನ್ಯಾಯಾಲಯವು ಆರೋಪಿಯನ್ನು ಮೇ 12ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಝುಂಜರವಾಡದಲ್ಲಿ ತಮಗೆ ಸೇರಿದ್ದ ಹೊಲದಲ್ಲಿ ಮುತ್ತಣ್ಣ ಕೊಳವೆ ಬಾವಿ ಕೊರೆಸಿದ್ದರು. ನೀರು ಬಾರದೇ ವಿಫಲವಾದ ನಂತರ ಬಾವಿಯನ್ನು ತೆರೆದ ಸ್ಥಿತಿಯಲ್ಲಿಯೇ ಬಿಟ್ಟಿದ್ದರು. ಇದರೊಳಗಿದ್ದ ಕೇಸಿಂಗ್‌ ಪೈಪ್‌ ತೆಗೆದು, ಬೇರೊಂದು ಬಾವಿಗೆ ಅಳವಡಿಸಿದ್ದರು. ಕಳೆದ ವಾರ, ಬಾಲಕಿ ಕಾವೇರಿ ಮಾದರ ತೆರೆದ ಕೊಳವೆ ಬಾವಿಯೊಳಗೆ ಬಿದ್ದು, ಮೃತಪಟ್ಟಿದ್ದಳು.
ಘಟನೆಗೆ ಸಂಬಂಧಿಸಿದಂತೆ ಐಗಳಿ ಪೊಲೀಸರು ಜಮೀನಿನ ಮಾಲೀಕ ಮುತ್ತಣ್ಣ ಶಂಕರ ಹಿಪ್ಪರಗಿ ಹಾಗೂ ಅವರ ತಂದೆ ಶಂಕರ ಹಿಪ್ಪರಗಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರು. ಪ್ರಕರಣದ ಮತ್ತೊಬ್ಬ ಆರೋಪಿ ಶಂಕರ ಹಿಪ್ಪರಗಿ ಪರಾರಿಯಾಗಿದ್ದಾನೆ.
SCROLL FOR NEXT