ಗುಲ್ಷನ್ ಗ್ರೋವರ್, ಅರ್ಬಾಜ್ ಖಾನ್, ಸೋನು ಸೂದ್, ಸೊಹೈಲ್ ಖಾನ್ ಮತ್ತು ಜಮೀರ್ ಅಹ್ಮದ್ 
ರಾಜ್ಯ

ಬಾಲಿವುಡ್ ಸೆಲೆಬ್ರಿಟಿಗಳ ಜೊತೆ ಜೆಡಿಎಸ್ ಬಂಡಾಯ ಶಾಸಕ ಜಮೀರ್ ಹುಟ್ಟುಹಬ್ಬ ಆಚರಣೆ!

ಡಿಎಸ್ ಬಂಡಾಯ ಶಾಸಕ ಜಮೀರ್ ಅಹ್ಮದ್ ಖಾನ್ ಚಾಮರಾಜಪೇಟೆಯಲ್ಲಿ ಬಾಲಿವುಡ್ ಸೆಲೆಬ್ರಿಟಿಗಳ ಜೊತೆ ಅದ್ಧೂರಿಯಾಗಿ ತಮ್ಮ ...

ಬೆಂಗಳೂರು: ಜೆಡಿಎಸ್ ಬಂಡಾಯ ಶಾಸಕ ಜಮೀರ್ ಅಹ್ಮದ್ ಖಾನ್ ಚಾಮರಾಜಪೇಟೆಯಲ್ಲಿ  ಬಾಲಿವುಡ್ ಸೆಲೆಬ್ರಿಟಿಗಳ ಜೊತೆ ಅದ್ಧೂರಿಯಾಗಿ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡರು. 
ಇದೇ ವೇಳೆ ಮಾತನಾಡಿದ ಜಮೀರ್ ಮುಂದಿನ ವಿಧಾನ ಸಭೆ ಚುನಾವಣೆಯಲ್ಲಿ ಚಾಮರಾಜಪೇಟೆ ಮತದಾರರು ಮಾಜಿ ಪ್ರಧಾನಿ ದೇವೇಗೌಡರಿಗೆ ಅವರ ಸ್ಥಾನವನ್ನು ತೋರಿಸಲಿದ್ದಾರೆ ಎಂದು ಟೀಕಿಸಿದರು.
ಜಮೀರ್ ಹುಟ್ಟುಹಬ್ಬಕ್ಕೆ ಬಾಲಿವುಡ್ ನಟ ಸಲ್ಮಾನ್ ಖಾನ್ ಸಹೋದರರಾದ ಸೊಹೈಲ್ ಖಾನ್ ಮತ್ತು ಅರ್ಬಾಜ್ ಖಾನ್, ಗುಲ್ಷನ್ ಗ್ರೋವರ್, ಸೋನು ಸೂದ್, ತೆಲುಗು ಹಾಸ್ಯ ನಟ ಅಲಿ ಮುಂತಾದವರು ಪಾಲ್ಗೋಂಡಿದ್ದರು.
ಜಮೀರ್ ಹುಟ್ಟುಹಬ್ಬ ರಾಜಕೀಯ ರ್ಯಾಲಿಯಂತಿತ್ತು. ಚಾಮರಾಜಪೇಟೆಯ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಯಿತು. ಟಿಪ್ಪು ಸುಲ್ತಾನ್ ರೀತಿಯ ರುಮಾಲು ಧರಿಸಿದ್ದ ಜಮೀರ್ ಟಿಪ್ಪುವಿನ ಖಡ್ಗವನ್ನು ಹೋಲುವ ಚಾಕುವಿನಿಂದ ಕೇಕ್ ಕತ್ತರಿಸಿದರು. 
ನಟರುಗಳನ್ನು ನೋಡಲು ಅಪಾರ ಜನರು ಸೇರಿದ್ದರು. ಸಲ್ಮಾನ್ ಖಾನ್ ಅವರು ಈ ಕಾರ್ಯಕ್ರಮಕ್ಕೆ ಬರಬೇಕಿತ್ತು, ಆದರೆ ಅವರು ಶೂಟಿಂಗ್ ಕಾರಣದಿಂದ ಬರಲು ಸಾಧ್ಯವಿಲ್ಲ, ಹೀಗಾಗಿ ಅವರ ಬದಲಿಗೆ ಅವರ ಸಹೋದರರನ್ನು ಕಳುಹಿಸಿದ್ದಾರೆ ಎಂದು ಜಮೀರ್ ಹೇಳಿದರು. ಇದೇ ವೇಳೆ ತಮ್ಮ ಪುತ್ರ ಬಾಲಿವುಡ್ ಪ್ರವೇಶಿಸುವುದಾಗಿ ತಿಳಿಸಿದರು. 
ಇದೇ ವೇಳೆ ನಟರನ್ನು ನೋಡಲು ಹಾಗೂ ಜಮೀರ್ ಗೆ ಹುಟ್ಟುಹಬ್ಬದ ಶುಭಾಶಯ ಹೇಳಲು ಮುಗಿಬಿದ್ದ ಅಭಿಮಾನಿಗಳನ್ನು ಚದುರಿಸಲು ಪೊಲೀಸರು ಲಘು ಲಾಠಿ ಚಾರ್ಜ್ ಮಾಡಿದರು. 
ತಾವು ಈಗಾಗವೇ ಜೆಡಿಎಸ್ ತೊರೆಯುವುದಾಗಿ ಘೋಷಿಸಿರುವ ಜಮೀರ್ ಘೋಷಿಸಿದ್ದಾರೆ. ಜಮೀರ್  ಆಪ್ತ ಹಾಗೂ ಬಿಬಿಎಂಪಿ ಸದಸ್ಯ ಇಮ್ರಾನ್ ಪಾಷಾ ಹುಟ್ಟುಹಬ್ಬ ಆಚರಣೆಯಿಂದ ದೂರ ಉಳಿದಿದ್ದರು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT