ಬೆಂಗಳೂರು: ರಾಷ್ಟ್ರಕವಿ ಕುವೆಂಪು ಅವರ ಮನೆಯ ಮಾದರಿ, ಹತ್ತಿರದಲ್ಲೇ ಇರುವ ಮೆಟ್ರೋ ಲಾಲ್ ಬಾಗ್ ಪುಷ್ಪ ಪ್ರದರ್ಶನಕ್ಕೆ ಒಂದೇ ದಿನದಲ್ಲಿ 50 ಸಾವಿರ ಮಂದಿಯನ್ನು ಆಕರ್ಷಿಸಿದೆ.
ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಆಯೋಜಿಸಲಾಗಿರುವ ಲಾಲ್ ಬಾಗ್ ನ ಪುಷ್ಪ ಪ್ರದರ್ಶನಕ್ಕೆ ಆ.06 ರಂದು 50 ಸಾವಿರ ಮಂದಿ ಭೇಟಿ ನೀಡಿದ್ದಾರೆ. ಅಧಿಕೃತ ದಾಖಲೆಯ ಪ್ರಕಾರ ಆಗಸ್ಟ್ 04 ರಂದು ಪ್ರಾರಂಭವಾದ ಪುಷ್ಪ ಪ್ರದರ್ಶನಕ್ಕೆ ಮೊದಲ ಭಾನುವಾರ 49,970 ಮಂದಿ ಭೇಟಿ ನೀಡಿದ್ದು, ಸುಮಾರು 24.05 ಲಕ್ಶ ರೂಪಾಯೊ ಗಳಿಕೆಯಾಗಿದೆ.
ಶನಿವಾರಕ್ಕೆ (20 ಸಾವಿರ ಪ್ರವಾಸಿಗರು, 9.04 ಲಕ್ಷ ರೂ ಆದಾಯ ಸಂಗ್ರಹ) ಹೋಲಿಸಿದರೆ ಭಾನುವಾರದ ಪ್ರವಾಸಿಗರ ಸಂಖ್ಯೆ ಹಾಗೂ ಆದಾಯ ಸಂಗ್ರಹ ದುಪ್ಪಟ್ಟಾಗಿದೆ. ಸುಮಾರು 3.25 ರಿಂದ 3.5 ಲಕ್ಷ ಆರ್ಕಿಡ್ ಹಾಗೂ ಗುಲಾಬಿ ಹೂಗಳನ್ನು ಗಳನ್ನು ಬಳಕೆ ಮಾಡಿ ನಿರ್ಮಿಸಲಾಗಿರುವ ಕುವೆಂಪು ಅವರ ಮನೆಯ ಮಾದರಿ ಲಾಲ್ ಬಾಗ್ ಪುಷ್ಪ ಪ್ರದರ್ಶನದ ಪ್ರಮುಖ ಆಕರ್ಷಣೆಯಾಗಿದೆ. .
ಕುವೆಂಪು ಅವರ ಮನೆಯ ಮಾದರಿ ಅತ್ಯಂತ ಆಕರ್ಷಣೀಯವಾಗಿತ್ತು. ಕಳೆದ ವರ್ಷವೂ ಪುಷ್ಪ ಪ್ರದರ್ಶನಕ್ಕೆ ಬಂದಿದ್ದೆ. ಕೆಳೆದ ವರ್ಷಕ್ಕಿಂತ ಈ ಬಾರಿಯ ಪುಷ್ಪ ಪ್ರದರ್ಶನ ಉತ್ತಮವಾಗಿದೆ ಎನಿಸಿತು ಎಂದು ಪ್ರವಾಸಿಗ ಪ್ರಣೀಟ್ ಶೆಟ್ಟಿ ಸಂತಸ ವ್ಯಕ್ತಪಡಿಸಿದ್ದಾರೆ.