ರಾಜ್ಯ

ಮೆಟ್ರೋ ಸ್ಟೇಷನ್ ಬೇಡ ಕೂಗಿಗೆ ಬೆಂಗಳೂರು ಸೆಂಟ್ರಲ್ ಸಂಸದರ ಧ್ವನಿ

Srinivas Rao BV
ಬೆಂಗಳೂರು: ಕಂಟೋನ್ಮೆಂಟ್ ಬಳಿ ಮೆಟ್ರೋ ನಿಲ್ದಾಣ ನಿರ್ಮಿಸುವುದಕ್ಕೆ ಎದುರಾಗಿರುವ ವಿರೋಧದ ಕೂಗಿಗೆ ಬೆಂಗಳೂರು ಕೇಂದ್ರ ಸಂಸದ ಪಿಸಿ ಮೋಹನ್ ಧ್ವನಿಗೂಡಿಸಿದ್ದಾರೆ. 
ಬಂಬೂ ಬಜಾರ್ ಬಳಿ ಮೆಟ್ರೋ ನಿಲ್ದಾಣ ನಿರ್ಮಾಣವಾದರೆ ಬಿಬಿಎಂಪಿ ಆಟದ ಮೈದಾನವನ್ನು ಕಳೆದುಕೊಳ್ಳಬೇಕಾಗುತ್ತದೆ. ಅಷ್ಟೇ ಅಲ್ಲದೇ ಜನಸಂದಣಿ ಇರುವ, ಕಿರಿದಾದ ರಸ್ತೆಗಳಿರುವ ಪ್ರದೇಶದಲ್ಲಿ ಮೆಟ್ರೋ ನಿಲ್ದಾಣ ನಿರ್ಮಾಣವಾದರೆ ಮತ್ತಷ್ಟು ದಟ್ಟಣೆ ಉಂಟಾಗಲಿದೆ ಎಂದು ಸ್ಥಳೀಯರು ಮೆಟ್ರೋ ನಿಲ್ದಾಣವನ್ನು ವಿರೋಧಿಸುತ್ತಿದ್ದಾರೆ. ಈಗ ಸ್ಥಳೀಯರ ಆಗ್ರಹಕ್ಕೆ ಬೆಂಗಳೂರು ಕೇಂದ್ರದ ಸಂಸದರೂ ಧ್ವನಿಗೂಡಿಸಿದ್ದು, ಈ ವಿಷಯವನ್ನು ಸಂಬಂಧಪಟ್ಟವರೊಂದಿಗೆ ಚರ್ಚಿಸಿ ಸಮಸ್ಯೆಗಳನ್ನು ಅವರ ಗಮನಕ್ಕೆ ತರುವುದಾಗಿ ಭರವಸೆ ನೀಡಿದ್ದಾರೆ. 
ಈ ಬಗ್ಗೆ ಫೇಸ್ ಬುಕ್ ನಲ್ಲಿ ಬರೆದಿರುವ ಸಂಸದ ಪಿಸಿ ಮೋಹನ್, ಬಂಬೂ ಬಜಾರ್ ನಲ್ಲಿ ಮೆಟ್ರೋ ಕಂಟೋನ್ಮೆಂಟ್ ನಿಲ್ದಾಣ ನಿರ್ಮಾಣ ಮಾಡುವುದರಿಂದ ಸಾರ್ವಜನಿಕ ಸಾರಿಗೆಯ ಬಳಕೆಯ ಉದ್ದೇಶಕ್ಕೇ ಧಕ್ಕೆ ಉಂಟಾಗುತ್ತದೆ" ನಗರಾಭಿವೃದ್ಧಿ ತಜ್ಞರು ಹೇಳಿರುವುದನ್ನು ಪುನರುಚ್ಛರಿಸಿರುವ ಪಿಸಿಮೋಹನ್, ಕಂಟೋನ್ಮೆಂಟ್ ರೈಲ್ವೆ ನಿಲ್ದಾಣ ಮುಂದಿನ ದಿನಗಳಲ್ಲಿ ಮುಖ್ಯ ರೈಲು ನಿಲ್ದಾಣವಾಗಲಿದೆ, ಈ ಹಿನ್ನೆಲೆಯಲ್ಲಿ ಬಂಬೂ ಬಜಾರ್ ಬಳಿ ಕಂಟೋನ್ಮೆಂಟ್ ಮೆಟ್ರೋ ನಿಲ್ದಾಣ ನಿರ್ಮಿಸುವುದು ಸೂಕ್ತವಲ್ಲ ಎಂದಿದ್ದಾರೆ. 
SCROLL FOR NEXT