ಬೆಂಗಳೂರು: ರಾಜ್ಯದಾದ್ಯಂತ ವರುಣನ ಆರ್ಭಟ ಜೋರಾಗಿದ್ದು, ತಡರಾತ್ರಿ ಸುರಿದ ಭಾರೀ ಮಳೆಗೆ ವ್ಯಕ್ತಿಯೋರ್ವ ಬಲಿಯಾಗಿದ್ದಾನೆಂದು ಮಂಗಳವಾರ ತಿಳಿದುಬಂದಿದೆ.
ನಿನ್ನೆ ರಾತ್ರಿ ಸುರಿದ ಧಾರಾಕಾರ ಮಳೆಯಿಂದಾಗಿ ಮನೆಯ ಗೋಡೆ ಕುಸಿದ ಪರಿಣಾಮ ಮಗ್ಗಿ (40) ಎಂಬ ವ್ಯಕ್ತಿ ಸಾವನ್ನಪ್ಪಿದ್ದಾರನೆಂದು ವರದಿಗಳು ತಿಳಿಸಿವೆ.
ಮೈಸೂರಿನ ಗಾಂಧಿನಗರದ ಲಿಡ್ಕರ್ ಕಾಲೋನಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕಾಗಮಿಸಿರವ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
ಮಂಡ್ಯ ಮತ್ತು ಇತರೆ ಜಿಲ್ಲೆಗಳಲ್ಲಿ ಮಳೆರಾಯನ ನರ್ತನ ರೈತರಲ್ಲಿ ಸಂತಸವನ್ನು ತಂದಿದೆ. ಕಳೆದ ರಾತ್ರಿ 8 ಗಂಟೆಗೆ ಸುಮಾರಿಗೆ ಆರಂಭವಾದ ಮಳೆ ಸ್ವಲ್ಪ ಸಮಯದ ಬಳಿಕ ನಿರಂತರವಾಗಿ ಸುರಿಯಲು ಆರಂಭಿಸಿತ್ತು. ಮಳೆರಾಯನ ಆಗಮನದಿಂದಾಗಿ ರೈತರು ಮುಖದಲ್ಲಿ ಹರ್ಷ ವ್ಯಕ್ತವಾಗಿದೆ. ರೈತರ ಭೂಮಿಗೆ ಉತ್ತಮವಾಗಿ ನೀರು ದೊರಕಿದಂತಾಗಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos