ರಾಜ್ಯ

ಮಹಾಮಳೆ: 10 ವರ್ಷದಲ್ಲೇ ಬೆಂಗಳೂರಿನಲ್ಲಿ ಆಗಸ್ಟ್‌ನಲ್ಲಿ ಸುರಿದ ಭಾರೀ ಮಳೆ

Srinivasamurthy VN

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ತಡರಾತ್ರಿ ಸುರಿದ ಮಳೆ ಕಳೆದ 10 ವರ್ಷಗಳಲ್ಲೇ ಆಗಸ್ಟ್ ತಿಂಗಳಲ್ಲಿ ಬಿದ್ದ ಅತೀ ಹೆಚ್ಚು ಮಳೆ ಎಂಬ ದಾಖಲೆ ಬರೆದಿದೆ.

ನಿನ್ನೆ ತಡರಾತ್ರಿ ಆರಂಭವಾದ ಗುಡುಗು ಸಹಿತ ಭಾರಿ ಮಳೆ ಸಿಲಿಕಾನ್ ಸಿಟಿಯಲ್ಲಿ ಭಾರಿ ಅವಾಂತರ ಸೃಷ್ಟಿ ಮಾಡಿದ್ದು, ಈ ಹತ್ತು ವರ್ಷದಲ್ಲೇ ಆಗಸ್ಟ್ ತಿಂಗಳಿನಲ್ಲಿ ಸುರಿದ ಭಾರೀ ಮಳೆ ಇದಾಗಿದೆ. ಸೋಮವಾರ ರಾತ್ರಿ ಬೆಂಗಳೂರು  ನಗರದಲ್ಲಿ 13 ಸೆಂ.ಮೀ.(128.5 ಮಿ.ಮೀ) ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಪ್ರಮುಖ ವಿಚಾರವೆಂದರೆ ಎಚ್‌‌ಎಎಲ್‌ ಪ್ರದೇಶವೊಂದರಲ್ಲೇ ಬರೊಬ್ಬರಿ 14ಸೆಂ.ಮೀ (140 ಮಿ.ಮೀ) ಮಳೆಯಾಗಿದೆ.

ಸೋಮವಾರ ತಡ ರಾತ್ರಿ ಮಳೆ ಆರ್ಭಟಿಸಿದ್ದು, ಹಲವು ನಗರಗಳಲ್ಲಿ ಮಳೆ ನೀರು ವಸತಿ ಪ್ರದೇಶಕ್ಕೆ ನುಗ್ಗಿದೆ. ಒಂದೇ ರಾತ್ರಿಗೆ ಮಳೆ ಅವಾಂತರ ಸೃಷ್ಟಿಸಿದ್ದು, ತಡ ರಾತ್ರಿ ಗುಡುಗು, ಸಿಡಿಲಿನೊಂದಿಗೆ ಅಬ್ಬರಿಸಿದ ಮಳೆರಾಯ  ನಗರದ ವಿವಿಧ ಪ್ರದೇಶಗಳಲ್ಲಿ ಅವಾಂತರ ಸೃಷ್ಟಿ ಮಾಡಿದ್ದ. ತಗ್ಗು ಪ್ರದೇಶಗಳ ಮನೆಗಳಿಗೆ ನೀರು ನುಗ್ಗಿದೆ, ರಸ್ತೆಗಳು ಜಲಾವೃತವಾಗಿದ್ದು, ಕಾರು, ಬೈಕ್‌ ಗಳು ಸೇರಿದಂತೆ ನೂರಾರು ವಾಹನಗಳು ನೀರಲ್ಲಿ ಅರ್ಧಕ್ಕೆ ಮುಳುಗಿವೆ.  ಕೋರಮಂಗಲ, ಸಿಲ್ಕ್‌ ಬೋರ್ಡ್‌ ರಸ್ತೆಗಳು ಜಲಾವೃತವಾಗಿವೆ. ಕೋರಮಂಗಲದಲ್ಲಿ ಬೃಹತ್ ಮರವೊಂದು ರಸ್ತೆಗೆ ಬಿದ್ದಿದೆ. ವರ್ತೂರು ರಸ್ತೆಯಲ್ಲೂ ನೀರು ನಿಂತು ಸಂಚಾರಕ್ಕೆ ಅಡ್ಡಿಯಾಗಿದೆ. ಎಚ್‌ಎಲ್‌ನ ಕಾಂಪೌಂಡ್‌ ಕಸಿದು  ಬಿದ್ದಿದೆ. ಎಚ್‌ ಎಲ್‌ನ ಹೆಲಿಕಾಪ್ಟರ್‌ ವಿಭಾಗದ ಕಾಂಪೌಂಡ್‌ ಕಸಿದು ಬಿದ್ದಿದೆ.

ಇನ್ನು 2009ರ ಆಗಸ್ಟ್ 17ರಂದು ಅತೀ ಹೆಚ್ಚು ಅಂದರೆ 7.6 ಸೆಂ.ಮೀ ನಷ್ಟು ಮಳೆಯಾಗಿತ್ತು.

SCROLL FOR NEXT