ವಿಜಯಪುರ: ಭೀಮಾ ತೀರದ ಕುಖ್ಯಾತ ಹಂತಕ ಬಾಗಪ್ಪ ಹರಿಜನ್ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಆಗಸ್ಟ್ 8ರಂದು ವಿಜಯಪುರ ಕೋರ್ಟ್ ಆವರಣದಲ್ಲಿ ಬಾಗಪ್ಪ ಹರಿಜನ್ ಮೇಲೆ ಗುಂಡಿನ ದಾಳಿ ನಡೆದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ರಮೇಶ್ ಹಡಪದ್(44), ಭೀಮಶ್ಯಾ ಹರಿಜನ್(36), ನಾಮದೇವ ದೊಡ್ಮನಿ(50), ಪ್ರಭು ಜಮಾದಾರ(48), ರಜಾಕ್ ಕಾಂಬಳೆ(40) ಮತ್ತು ಮಲ್ಲೇಶ್ ಬಿಂಗೇರಿ(48) ಎಂಬುವರನ್ನು ಬಂಧಿಸಿದ್ದಾರೆ.
ಭೀಮಾತೀರದ ಹಂತಕರಿಂದಲೇ ಪ್ರತೀಕಾರಕ್ಕಾಗಿ ನಡೆದ ಗುಂಡಿನ ದಾಳಿ ಇದಾಗಿತ್ತು. ಈ ಸಂಬಂಧ ಆರು ಮಂದಿಯನ್ನು ಬಂಧಿಸಿದ್ದು ಇನ್ನು ಮೂವರು ಆರೋಪಿ ಹಾಗೂ ವೆಪನ್ ಗಳಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಇನ್ನು ಬಂಧಿತ ಆರೋಪಿಗಳಿಂದ ಆರು ಮೊಬೈಲ್ ಹಾಗೂ ಒಂದು ಸ್ಕಾರ್ಪಿಯೊ ವಾಹನವನ್ನು ಜಪ್ತಿ ಮಾಡಲಾಗಿದೆ ಎಂದು ವಿಜಯಪುರದ ಎಸ್ ಪಿ ಕುಲದೀಪ್ ಜೈನ್ ಹೇಳಿದ್ದಾರೆ.
ಗುಂಡಿನ ದಾಳಿಯಿಂದಾಗಿ ತೀವ್ರವಾಗಿ ಗಾಯಗೊಂಡಿದ್ದ ಬಾಗಪ್ಪ ಹರಿಜನ್ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮೂರು ಗುಂಡುಗಳು ಆತನ ದೇಹ ಸೇರಿದ್ದು ಶಸ್ತ್ರಚಿಕಿತ್ಸೆ ಮೂಲಕ ವೈದ್ಯರು ಅವುಗಳನ್ನು ಹೊರತೆಗೆದಿದ್ದರು.
ಬಸವರಾಜ್ ಹರಿಜನ್ ಎಂಬುವನ ಕೊಲೆ ಪ್ರಕರಣ ಸಂಬಂಧ ಬಾಗಪ್ಪ ಹರಿಜನ್ ಆಗಸ್ಟ್ 8ರಂದು ವಿಚಾರಣೆಗಾಗಿ ಕೋರ್ಟ್ ಗೆ ಆಗಮಿಸಿದ್ದರು.