ರಾಜ್ಯ

ನಿರುದ್ಯೋಗ, ಡೋಕ್ಲಾಮ್, ಗೋರಖ್ ಪುರ ವಿಷಯಗಳಲ್ಲಿ ಪ್ರಧಾನಿ ಮೌನಕ್ಕೆ ರಾಹುಲ್ ಟೀಕೆ

Srinivas Rao BV
ಬೆಂಗಳೂರು: ಸ್ವಾತಂತ್ರ್ಯ ದಿನಾಚರಣೆಯಂದು ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣವನ್ನು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಟೀಕಿಸಿದ್ದು, ಪ್ರಧಾನಿ ಕಳೆದ ವರ್ಷಕ್ಕಿಂತ ಈ ಬಾರಿ ಕಡಿಮೆ ಅವಧಿಯ ಭಾಷಣ ಮಾಡಿದ್ದು ಅವರ ಬಳಿ ಮಾತನಾಡಲು ವಿಷಯಗಳು ಇಲ್ಲದಂತಾಗಿವೆ ಎಂದು ಲೇವಡಿ ಮಾಡಿದ್ದಾರೆ. 
ಆ.16 ರಂದು ಬೆಂಗಳೂರಿನಲ್ಲಿ ಇಂದಿರಾ ಕ್ಯಾಂಟೀನ್ ಉದ್ಘಾಟನೆ ಮಾಡಿ ಮಾತನಾಡಿರುವ ರಾಹುಲ್ ಗಾಂಧಿ, ನಾಲ್ಕು ವರ್ಷಗಳಲ್ಲಿಯೇ ಮೊದಲ ಬಾರಿಗೆ ಅತ್ಯಂತ ಕಡಿಮೆ ಅವಧಿಯ ಭಾಷಣ ಮಾಡಿದ್ದಾರೆ. ಅವರ ಬಳಿ ಮಾತನಾಡಲು ವಿಷಯಗಳು ಇಲ್ಲದಂತಾಗಿವೆ ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬರುವ ಮುನ್ನ 2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಭರವಸೆ ನೀಡಿದ್ದರು. ಆದರೆ ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆಯಲ್ಲಿ 
ನಿರುದ್ಯೋಗ, ಡೋಕ್ಲಾಮ್, ಗೋರಖ್ ಪುರ ವಿಷಯಗಳ ಬಗ್ಗೆ ಪ್ರಧಾನಿ ಮೌನ ವಹಿಸಿದ್ದಾರೆ ಎಂದು ರಾಹುಲ್ ಗಾಂಧಿ ಟೀಕಿಸಿದ್ದಾರೆ. 
ನಿರಿದ್ಯೋಗ ಸಮಸ್ಯೆ 8 ವರ್ಷಗಳಲ್ಲೇ ಹೆಚ್ಚಿದೆ ಎಂದು ಸ್ವಾತಂತ್ರ್ಯದಿನದ ಭಾಷಣದಲ್ಲಿ ಪ್ರಧಾನಿ ಮೋದಿ ಹೇಳಿಲ್ಲ.  ಕಾಶ್ಮೀರದಲ್ಲಿ ಶಾಂತಿ ಸ್ಥಾಪನೆಗೆ ನಮ್ಮ ಸರ್ಕಾರದ 10 ವರ್ಷಗಳ ಶ್ರಮವನ್ನು ಮೋದಿ ಸರ್ಕಾರ ಕೇವಲ ಒಂದು ತಿಂಗಳಲ್ಲಿ ನಿರ್ನಾಮ ಮಾಡಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ. 
SCROLL FOR NEXT