ಆರೋಗ್ಯ ಶಿಬಿರದಲ್ಲಿ ಡಾ. ಎಡ್ಮಂಡ್ ಫರ್ನಾಂಡಿಸ್
ಮಂಗಳೂರು: ಸಾಮಾನ್ಯವಾಗಿ ಎಲ್ಲರೂ ಎಂಡಿ (ಡಾಕ್ಟರ್ ಆಫ್ ಮೆಡಿಸಿನ್ ಇನ್ ಕಮ್ಯೂನಿಟಿ ಮೆಡಿಸಿನ್) ಅನ್ನು ಪೂರ್ಣಗೊಳಿಸಿದ ನಂತರ, ಹೆಸರಾಂತ ಆಸ್ಪತ್ರೆಯಲ್ಲಿ ಅಥವಾ ಖಾಸಗಿ ಕ್ಲಿನಿಕ್ ನಲ್ಲಿ ಪ್ರಾಕ್ಟೀಸ್ ಮಾಡುವ ಸಾಂಪ್ರದಾಯಿಕ ಮಾರ್ಗವನ್ನು ಅನುಸರಿಸಲು ಬಯಸುತ್ತಾರೆ. ಆದರೆ ಇಲ್ಲೊಬ್ಬ ವೈದ್ಯ ತಾವು ವಿಭಿನ್ನವಾಗಿ ಆಲೋಚಿಸಿ ತಮ್ಮ ಸಹಪಾಠಿಗಳನ್ನು ಮತ್ತು ಶಿಕ್ಷಕರುವನ್ನು ಅಚ್ಚರಿಗೊಳಿಸಿದ್ದಾರೆ. ಸಾರ್ವಜನಿಕ ಆರೋಗ್ಯ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿರುವ ಈ ವೈದ್ಯ ಇರುವುದು ಮಂಗಳೂರಿನಲಿ.
ಅವರು ಡಾ. ಫರ್ನಾಂಡಿಸ್, ಫರ್ನಾಂಡಿಸ್ ಅವರನ್ನು ಹತ್ತಿರದಿಂದ ಬಲ್ಲವರು, ಈ ಯುವ ವೈದ್ಯರು ಎಲ್ಲರಂತೆ ಇಲ್ಲದೆ ವಿಶೇಷವಾಗಿ ಆಲೋಚಿಸಬಲ್ಲವರೆಂದು ತಿಳಿದಿದ್ದರು. ಇದಾಗಲೇ ಫರ್ನಾಂಡಿಸ್ 26, ವೈದ್ಯರ ತಂಡದೊಡನೆ ಗುಜರಾತ್ ಪ್ರವಾಹ ಸೇರಿದಂತೆ ಮೂರು ವಿಪತ್ತು ಪರಿಹಾರ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದಾರೆ.
"ನನ್ನ ಮೊದಲ ಮಿಷನ್ ಫಿಲಿಪೈನ್ಸ್ನಲ್ಲಿತ್ತು, ಇದು 2013 ರಲ್ಲಿ ಹೈಯಾನ್ ಟೈಫೂನ್ನಿಂದ ನಾಶವಾದ ಭಾಗದಲಿತ್ತು ," ಡಾ ಫರ್ನಾಂಡಿಸ್ ಸ್ಮರಿಸಿಕೊಂಡು ಹೇಳುತ್ತಾರೆ. ಟೈಫೂನ್ 6,300 ಜೀವಗಳನ್ನು ಬಲಿ ಪಡೆದಿತ್ತು. 2015 ರಲ್ಲಿ ಅತ್ಯಂತ ಕೆಟ್ಟ ಪ್ರವಾಹದಿಂದ ನಾಶಗೊಂಡ ಚೆನ್ನೈ ನಿವಾಸಿಗಳಿಗೆ ಸಹಾಯವನ್ನು ಒದಗಿಸುವ ಕಾರ್ಯದಲ್ಲಿ ಸಹ ಇವರು ಭಾಗಿಯಾಗಿದ್ದರು.
ನವದೆಹಲಿಯ ಮೂಲದ ಸೀಡ್ಸ್ ಜೊತೆಗಿನ ಒಂದು ಕಾರ್ಯಕ್ರಮದ ಪಾಲುದಾರಿಕೆಯು ಡಾ. ಫರ್ನಾಂಡಿಸ್ ಗೆ ಗುಜರಾತಿನಲ್ಲಿ ವೈದ್ಯಕೀಯ ತಂಡವನ್ನು ಮುನ್ನಡೆಸಲು ನೆರವಾಯಿತು. "ಸೀಡ್ಸ್ ಸಂಸ್ಥೆ ವ್ಯವಸ್ಥಿತ ಸಹಾಯದಿಂದ ಅಲ್ಲಿನ ಶಾಲೆಗಳಲ್ಲಿ ಪುನರ್ವಸತಿ ಸೇವೆಗಳನ್ನು ಮೇಲ್ವಿಚಾರಣೆ ಮಾಡಿದ್ದೆವು" ಎಂದು ಅವರು ಹೇಳುತ್ತಾರೆ. ಬನಸ್ಕಾತ್ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಆಗಸ್ಟ್ 11 ರಿಂದ 15 ರವರೆಗೆ 362 ರೋಗಿಗಳು ಇವರ ಆರೋಗ್ಯ ಶಿಬಿರಗಳಲ್ಲಿ ಭಾಗವಹಿಸಿದ್ದರು.
"ಬನಸ್ಕಾತ್, ಜಿಲ್ಲೆಯಲ್ಲಿ ಈ ಪ್ರವಾಹದಿಂದ 61 ಸಾವುಗಳು ಸಂಭವಿಸಿದ್ದವು. ಸುಮಾರು 80,000 ಜನರನ್ನು ಪ್ರವಾಹದಿಂದ ಸ್ಥಳಾಂತರಿಸಲಾಗಿತ್ತು. ಹದಿನೈದು ದಿನಗಳ ನಂತರ, ಪ್ರವಾಹ ನೀರು ತಗ್ಗಿತ್ತು. "ಶುಚಿತ್ವ ಕೆಲಸವನ್ನು ನಾವು ಮುಂಚಿನಲ್ಲೇ ಪ್ರಾರಂಭಿಸದಿದ್ದರೆ ಇನ್ನೂ ಅನುಕೂಲ್ಕವಾಗುತ್ತಿತ್ತು. ಅವರು ತಿಳಿಸಿದರು.
ಹಳ್ಳಿಗಳಲ್ಲಿನ ಬಡತನವನ್ನು ಕಂದ ವೈದ್ಯರು . "ಈ ಪ್ರದೇಶ ಇನ್ನು ಸಹ ಆಧುನಿಕರಣಗೊಂಡಿರಲಿಲ್ಲ, ಅವರು ಕನಿಷ್ಟ ಅರ್ಧ ಶತಮಾನದ ಹಿಂದೆ ಇದ್ದರು. ಮಹಿಳೆಯರು ಇನ್ನೂ ಹಿಂದುಳಿದಿದ್ದಾರೆ. ಆರೋಗ್ಯ ಶಿಬಿರದಲ್ಲಿ ಪಾಲ್ಗೊಂಡ ಓರ್ವ ಮಹಿಳೆ ತೀಕ್ಷ್ಣವಾದ ಕಣ್ಣಿನ ನೋವಿನ ಬಗ್ಗೆ ಹೇಳುತ್ತಾರೆ ಆದರೆ ಮುಖದ ಮುಸುಕನ್ನು ಎತ್ತಬಾರದೆಂದು ಹೇಳಿ ಕಣ್ಣಿನ ಪರೀಕ್ಷೆಗ ನನಗೆ ಅವಕಾಶ ನೀಡಲಿಲ್ಲ "ಎಂದು ಅವರು ಹೇಳಿದರು. ಭಾರತವು ತನ್ನ 71 ನೇ ಸ್ವಾತಂತ್ರ್ಯ ವರ್ಷವನ್ನು ಆಚರಿಸುತ್ತಿರುವಾಗ , ಆರ್ ಟಿಇ ಮತ್ತು ಇತರ ಕ್ರಾಂತಿಕಾರಿ ಯೋಜನೆಗಳನ್ನು ಬಳಸಿಕೊಂಡು ಸವಲತ್ತನ್ನು ಪಡೆದುಕೊಳ್ಳುವುದು ಅಗತ್ಯವಾಘಿದೆ ಎಂದು ಅವರು ತಿಳಿಸಿದರು.
ಡಾ ಫರ್ನಾಂಡಿಸ್ ತನ್ನ ತರುಣದಲ್ಲಿಯೇ ಹಲವಾರು ಸಾಧನೆ ಮಾಡಿದ್ದಾರೆ. ಅವರು ಸಿಎಚ್ ಡಿ ನ ಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದು, ಟಾಸ್ಕ್ ಫೋರ್ಸ್, ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ (ಡಿಡಿಎಂ ಎ) ಸದಸ್ಯರಾಗಿದ್ದಾರೆ. ಅವರು ಸೆಮಿನಾರ್ ಗಳನ್ನು ನಡೆಸುವಲ್ಲಿ ತೊಡಗಿಸಿಕೊಂಡಿದ್ದಾರೆ, ದುರಂತ ನಿರ್ವಹಣೆ ಮತ್ತು ಜಾಗತಿಕ ಆರೋಗ್ಯದ ಸಾಮರ್ಥ್ಯ ನಿರ್ಮಾಣ ತರಬೇತಿಗಳನ್ನು ನಡೆಸುತ್ತಾರೆ. ಮಂಗಳೂರಿನಲ್ಲಿ ವಾಹನಗಳಲ್ಲಿ ಸೀಟ್ ಬೆಲ್ಟ್ ಕಡ್ಡಾಯ ಮಾಡುವ ನಿರ್ಧಾರದ ಹಿಂದೆ ಇವರ ಸಿಎಚ್ ಡಿ ಕೆಲಸ ಮಾಡಿತ್ತು.