ಚ್ಎಎಲ್ ನಿರ್ಮಿತ ಹಾಕ್-ಐ ಯುದ್ಧ ವಿಮಾನವನ್ನು ಪರಿಶೀಲಿಸಿದ ರಕ್ಷಣಾ ಸಚಿವ ಅರುಣ್ ಜೇಟ್ಲಿ 
ರಾಜ್ಯ

ದೇಸಿ ನಿರ್ಮಿತ ಯುದ್ಧ ವಿಮಾನ ಹಾಕ್-ಐ ಸೇನೆಗೆ ಸೇರ್ಪಡೆ

ಮೊಟ್ಟಮೊದಲ ದೇಶಿ ನಿರ್ಮಿತ ಅತ್ಯಾಧುನಿಕ ಹಾಕ್-ಐ ಪೈಲಟ್ ತರಬೇತಿ ಯುದ್ಧ ವಿಮಾನವನ್ನು ರಕ್ಷಣಾ...

ಬೆಂಗಳೂರು: ಮೊಟ್ಟಮೊದಲ ದೇಶಿ ನಿರ್ಮಿತ ಅತ್ಯಾಧುನಿಕ ಹಾಕ್-ಐ ಪೈಲಟ್ ತರಬೇತಿ ಯುದ್ಧ ವಿಮಾನವನ್ನು ರಕ್ಷಣಾ ಸಚಿವ ಅರುಣ್ ಜೇಟ್ಲಿ ನಿನ್ನೆ ಬೆಂಗಳೂರಿನ ಎಚ್ಎಎಲ್ ವಿಮಾನ ನಿಲ್ದಾಣದಲ್ಲಿ ದೇಶಕ್ಕೆ ಸಮರ್ಪಿಸಿದರು.
ಇದು ಹಾಕ್-132 ಯುದ್ಧ ವಿಮಾನಗಳ ದೇಶೀಯ ಅವತರಣಿಕೆ. ಬ್ರಿಟನ್ ನಲ್ಲಿ ನಿರ್ಮಾಣಗೊಳ್ಳುವ ಹಾಕ್-132 ಯುದ್ಧ ವಿಮಾನಗಳನ್ನು ಭಾರತ ತಂತ್ರಜ್ಞಾನ ಹಸ್ತಾಂತರ ಒಪ್ಪಂದ ಮೂಲಕ ಖರೀದಿಗೆ ಮುಂದಾಗಿತ್ತು. ಮೊದಲ ಹಂತರ ವಿಮಾನಗಳನ್ನು ಬ್ರಿಟನ್ ನ ಬಿಎಇ ಸಿಸ್ಟಮ್ಸ್ ನಿಂದ ನೇರವಾಗಿ ಭಾರತ ಖರೀದಿ ಮಾಡಿತ್ತು. 
ಎರಡನೇ ಹಂತದಲ್ಲಿ ಈ ಯುದ್ಧ ವಿಮಾನ ನಿರ್ಮಾಣದ ತಂತ್ರಜ್ಞಾನ ಹಾಗೂ ನೆರವನ್ನು ಪಡೆದುಕೊಂಡ ಎಚ್ಎಎಲ್ ಇದೀಗ ಸಂಪೂರ್ಣ ದೇಶೀಯವಾಗಿ ಹಾಕ್ ಯುದ್ಧ ವಿಮಾನವನ್ನು ನಿರ್ಮಾಣ ಮಾಡಿದೆ.
ಎಚ್ಎಎಲ್ ನಿರ್ಮಿತ ಹಾಕ್-ಐ ಯುದ್ಧ ವಿಮಾನವು ಹಾಕ್ ಯುದ್ಧ ವಿಮಾನ ಸರಣಿಯಲ್ಲೇ ಅತ್ಯಂತ ಸುಧಾರಿತ ವಿಮಾನವಾಗಿದೆ.ದೇಶದ ರಕ್ಷಣಾ ವ್ಯವಸ್ಥೆಗೆ ತರಬೇತಿ ವಿಮಾನಗಳಾಗಿ ಹಾಕ್-ಐ ಸೇರ್ಪಡೆಗೊಳ್ಳಲಿದೆ. ಇದರಲ್ಲಿ ಬಳಸಲಾಗಿರುವ ಯಂತ್ರಾಂಶ, ತಂತ್ರಾಂಶಗಳೆಲ್ಲವೂ ಸಂಪೂರ್ಣ ದೇಸಿಯವಾಗಿದೆ. ಯುದ್ಧದಲ್ಲಿ ಪಾಲ್ಗೊಳ್ಳುವ  ಪೈಲಟ್ ಗಳ ತರಬೇತಿಗೆ ಬಳಸುವ ವಿಮಾನ ಇದಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೈಕಮಾಂಡ್ ಸೂಚನೆಗೆ ಮಣಿದ ಸಿದ್ದರಾಮಯ್ಯ: ಮುಖ್ಯಮಂತ್ರಿ ಸ್ಥಾನ ತ್ಯಜಿಸಲು ಸಮ್ಮತಿ; ಕಾಂಗ್ರೆಸ್ ಪವರ್ ಶಿಫ್ಟ್‌ಗೆ ಕೌಂಟ್‌ಡೌನ್ ಶುರು, ಡಿಕೆಶಿಗೆ ಸಿಎಂ ಪಟ್ಟ..?

CMRL ಹಣ ಅಕ್ರಮ ವರ್ಗಾವಣೆ ಪ್ರಕರಣ: ಕೇರಳ ಮಾಜಿ ಸಿಎಂ ಪಿಣರಾಯಿ ವಿಜಯನ್ ನಿವಾಸದ ಮೇಲೆ ED ದಾಳಿ..!

ಬೆಂಗಳೂರಿಗೂ ಎಂಟ್ರಿ ಕೊಟ್ಟಿತೇ ಮಹಾಮಾರಿ ಎಬೋಲಾ? ಆಫ್ರಿಕಾದಿಂದ ಬಂದ ಮಹಿಳೆಯಲ್ಲಿ ಸೋಂಕಿನ ಲಕ್ಷಣ ಪತ್ತೆ, ಆರೋಗ್ಯ ಇಲಾಖೆ ಹೈ ಅಲರ್ಟ್

ದೆಹಲಿ ಸಭೆ ಬಳಿಕ ಬೆಂಗಳೂರಿನಲ್ಲಿ ಶಕ್ತಿ ಪ್ರದರ್ಶನಕ್ಕೆ ಸಿದ್ದರಾಮಯ್ಯ ಸಜ್ಜು: ಬೆಂಬಲಿಗರ ಜೊತೆ ಮಹತ್ವದ ಸಭೆ, ಹೆಚ್ಚಿದ ಕುತೂಹಲ

IPL 2026: ಗುಜರಾತ್ ವಿರುದ್ಧ ಭರ್ಜರಿ ಗೆಲುವು; ಸತತ 2ನೇ ಬಾರಿ ಫೈನಲ್ಸ್ ಪ್ರವೇಶಿಸಿದ RCB

SCROLL FOR NEXT