ರಾಜ್ಯ

ಬೆಂಗಳೂರಿಗೆ ಕುಡಿಯುವ ನೀರು ಪೂರೈಸಲು ಮಂಗಳೂರಲ್ಲಿ ಜಲಾಶಯ ನಿರ್ಮಿಸಿ: ಐಐಎಸ್ಸಿ ತಜ್ಞರ ಸಲಹೆ

Sumana Upadhyaya
ಬೆಂಗಳೂರು: ಕರ್ನಾಟಕದ ಪಶ್ಚಿಮ ಭಾಗದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಿಂದ ಹರಿಯುವ ನೇತ್ರಾವತಿ ನದಿಯ ನೀರನ್ನು ಬೆಂಗಳೂರು ನಗರಕ್ಕೆ ಕುಡಿಯುವ ನೀರಿಗೆ ಬಳಸಬಹುದಾದ ಸಾಧ್ಯತಾ ವರದಿಯನ್ನು ಪ್ರೊ.ಟಿ.ಜಿ.ಸೀತಾರಾಮ್ ನೇತೃತ್ವದ ಭಾರತೀಯ ವಿಜ್ಞಾನ ಸಂಸ್ಥೆಯ ತಜ್ಞರ ತಂಡ ಸಲ್ಲಿಸಿದೆ.
ವಿಜ್ಞಾನಿಗಳ ತಂಡ ವರದಿಯನ್ನು ನಗರಾಭಿವೃದ್ಧಿ ಸಚಿವ ರೋಶನ್ ಬೇಗ್ ಅವರಿಗೆ ಸಲ್ಲಿಸಿದೆ. ಮಂಗಳೂರಿನಲ್ಲಿರುವ ನದಿಗಳಿಗೆ ಜಲಾಶಯಗಳನ್ನು ನಿರ್ಮಿಸಿದರೆ ಅದನ್ನು ಶುದ್ಧೀಕರಿಸಿ ಬೆಂಗಳೂರಿಗೆ ನೀರು ಪೂರೈಕೆ ಮಾಡಬಹುದು. ಪ್ರತಿ ವರ್ಷ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನದಿಗಳಿಂದ ಸುಮಾರು 240 ಟಿಎಂಸಿ ನೀರು ಸಮುದ್ರಕ್ಕೆ ಹರಿದು ಹೋಗುತ್ತದೆ. 
ಜಲಾಶಯಗಳನ್ನು ನಿರ್ಮಿಸಿದರೆ ಬೆಂಗಳೂರು ನಗರದ ನಾಗರಿಕರಿಗೆ ಕುಡಿಯಲು ಅಗತ್ಯವಿರುವ ಸರಿಸುಮಾರು 24 ಟಿಎಂಸಿ ನೀರಿನಲ್ಲಿ ಸುಮಾರು 20 ಟಿಎಂಸಿ ನೀರನ್ನು ಸಂಗ್ರಹಿಸಬಹುದು ಮತ್ತು ಮಂಗಳೂರು ನಗರಕ್ಕೆ 2.1 ಟಿಎಂಸಿ ನೀರನ್ನು ಪೂರೈಕೆ ಮಾಡಬಹುದು ಎಂದು ತಜ್ಞರ ತಂಡ ಹೇಳಿದೆ.
ಪ್ರೊ.ಸೀತಾರಾಮ್ ಅವರು ಐಐಎಸ್ಸಿಯ ಸಿವಿಲ್ ಎಂಜಿನಿಯರಿಂಗ್ ವಿಭಾಗದಲ್ಲಿ ಹಿರಿಯ ಪ್ರಾಧ್ಯಾಪಕರಾಗಿದ್ದಾರೆ.
SCROLL FOR NEXT