ಬೆಂಗಳೂರು: ಸಜೀದಾ ಬೇಗಂ (65), ಕಳೆದ 10 ವರ್ಷಗಳಿಂದ ಮಾಗಡಿ ರಸ್ತೆಯ ಕುಶ್ಟರೋಗ ಆಸ್ಪತ್ರೆಯಲ್ಲಿ ವಾಸಿಸುತ್ತಿದ್ದಾರೆ. ಆಕೆಯ ಕುಟುಂಬದವರು ಆಕೆಯನ್ನು ವರ್ಷಗಳ ಹಿಂದೆ ಆಸ್ಪತ್ರೆಯಲ್ಲಿ ಬಿಟ್ಟು ಹೋಗಿದ್ದು ಮತ್ತೆ ಆಕೆಯನ್ನು ಭೇಟಿ ಆಗಲೂ ಬಂದಿಲ್ಲ. ಈ ಕುಷ್ಠರೋಗಿಯ ಏಕೈಕ ಆಧಾರವೆಂದರೆ ಪ್ರತಿ ತಿಂಗಳೂ ಅವರಿಗೆ ಬರುತ್ತಿದ್ದ ರೂ.1,000 ಪಿಂಚಣಿ. ಆದರೆ ಇದೇ ಮೂರು ತಿಂಗಳಿಂದ ಅದು ಸಹ ನಿಂತು ಹೋಗಿದೆ ಆಧಾರ್ ಕಾರ್ಡ್ ಇಲ್ಲದ ಕಾರಣಕ್ಕೆ ಪಿಂಚಣಿ ಸೌಲಭ್ಯವನ್ನು ಕಡಿತಗೊಳಿಸಲಾಗಿದೆ.
ಸಜೀದಾ ಕುಷ್ಟರೋಗದ ಕಾರಣ ತನ್ನ ಬೆರಳುಗಳನ್ನು, ಕಣ್ಣಿನ ದೃಷ್ಟಿಯನ್ನು ಕಳೆದುಕೊಂಡಿದ್ದಾರೆ. ಈ ವರ್ಷದ ಆಗಸ್ಟ್ ನಲ್ಲಿ ರಾಜಾಜಿನಗರದಲ್ಲಿನ ಉಪ ತಹಶೀಲ್ದಾರ್ ಕಚೇರಿಯಿಂದ ಸಜೀದಾ ಗೆ ಪತ್ರವೊಂದು ಬಂದಿದ್ದು ಅದರಲ್ಲಿ, ಇನ್ನು ಏಳು ದಿನಗಳಲ್ಲಿ ಆಕೆಯ ಪಿಂಚಣಿ ಖಾತೆಯನ್ನು ಆಧಾರ್ ನೊಡನೆ ಸಂಪರ್ಕಿಸಲು ವಿಫಲವಾದರೆ ಪಿಂಚಣಿ ಸೌಲಭ್ಯ ಕಡಿತಗೊಳ್ಳುವುದೆಂದು ಬರೆಯಲಾಗಿತ್ತು. ಸಜೀದಾ ಬಳಿ ಆಧಾರ್ ಇರಲಿಲ್ಲ. ಆಧಾರ್ ನೊಂದಣಿಗೆ ಬೆರಳಚ್ಚು ಮತ್ತು ಕಣ್ಣಿನ ಸ್ಕ್ಯಾನ್ ಮಾಡುವುದು ಅಗತ್ಯ. ದುರಂತವೆಂದರೆ ಸಜೀದಾಗೆ ಬೆರಳುಗಳು ಹಾಗೂ ದೃಷ್ಟಿ ಎರಡೂ ಇಲ್ಲವಾಗಿ ಹಲವು ದಿನಗಳಾದವು
"ಆಕೆ ಬಟ್ಟೆಗಳನ್ನು ಖರೀದಿಸುತ್ತಿದ್ದಳು ಮತ್ತು ಹಣದಿಂದ ಆಕೆಯ ಅಗತ್ಯಗಳನ್ನು ಪೂರೈಸುತ್ತಿಇದ್ದಳು. ಆದರೆ ಆಗಸ್ಟ್ ನಿಂದ ಆಕೆ ಪಿಂಚಣಿ ಸ್ವೀಕರಿಸಲಿಲ್ಲ. ಆಕೆಯ ಎರಡು ಕಣ್ಣುಗಳೂ ದೃಷ್ಟಿಹೀನವಾಗಿದೆ. ಯಾವುದೇ ಕೈ ಅಥವಾ ಕಾಲಿನ ಬೆರಳುಗಳು ಬೆರಳುಗಳಿಲ್ಲ. ಅವಳ ಬಯೋಮೆಟ್ರಿಕ್ ಗುರುತನ್ನು ಹೇಗೆ ತೆಗೆದುಕೊಳ್ಳುತ್ತಾರೆ ನನಗೆ ಗೊತ್ತಿಲ್ಲ. " ಕುಷ್ಠರೋಗ ಆಸ್ಪತ್ರೆ ವೈದ್ಯಕೀಯ ಅಧಿಕಾರಿ, ಡಾ. ಅಯುಬ್ ಅಲಿ ಝಾಯ್ ಹೇಳಿದ್ದಾರೆ ಆಕೆಯ ಸಮಸ್ಯೆಯನ್ನು ಪರಿಗಣಿಸಿ ಬಯೋಮೆಟ್ರಿಕ್ ಪರಿಶೀಲನೆಯಿಂದ ವಿನಾಯಿತಿ ನೀಡುವಂತೆ ಯುಐಡಿಎಐ ಅಧಿಕಾರಿಗಳಿಗೆ ಝಾಯ್ ಪತ್ರವೊಂದನ್ನು ಬರೆದಿದ್ದಾರೆ. "ಪಿಂಚಣಿ ಕಳುಹಿಸುವುದರಲ್ಲಿ ಆಡಳಿತಾತ್ಮಕ ಸಮಸ್ಯೆಯಿಂದ ವಿಳಂಬವಾಗಿದ್ದರೆ ಅಥವಾ ಅದನ್ನು ನಿಲ್ಲಿಸಿದ್ದಲ್ಲಿ ನಮಗೆ ಏನೂ ಮಾಡಲಾಗುವುದಿಲ್ಲ" ಎಂದು ಅವರು ಹೇಳಿದರು.
"ನನ್ನ ಮಗಳು ಮತ್ತು ಅಳಿಯ ಎಲ್ಲಿದ್ದಾರೆಂದು ನನಗೆ ಗೊತ್ತಿಲ್ಲ. ಯಾರೂ ನನ್ನನ್ನು ನೋಡಲು ಬಂದಿಲ್ಲ. ದಯವಿಟ್ಟು ನನ್ನ ಹಣವನ್ನು ನೀಡಿ," ಎಂದು ಸಜೀದಾ ದುಃಖತಪ್ತ ಮನಸ್ಸಿನಿಂದ ಕೇಳುತ್ತಾರೆ.
100 ಹಾಸಿಗೆಯ ಆಸ್ಪತ್ರೆಯಲ್ಲಿ ಪ್ರಸ್ತುತ 57 ಮಂದಿ ರೋಗಿಗಳಿದ್ದಾರೆ, ಮತ್ತು ಅವರಲ್ಲಿ ಕನಿಷ್ಠ 10 ಮಂದಿ ಬಳಿ ಆಧಾರ್ ಕಾರ್ಡ್ ಇಲ್ಲ ಎಂದು ಝಾಯ್ ಹೇಳಿದರು. "ಆಥಾರ್ ಕಾರ್ಡ್ ಇಲ್ಲದಿರುವ ಮತ್ತು ೈದೇ ಕಾರಣಕ್ಕೆ ತಹಶೀಲ್ದಾರರ ಕಚೇರಿಯಿಂದ ಅದೇಶ ಪತ್ರವನ್ನು ಸ್ವೀಕರಿಸಿದ ರಾಜಮ್ಮ ಎಂಬ ಇನ್ನೊಬ್ಬ ರೋಗಿಯೂ ಇದ್ದಾರೆ" ಎಂದು ಝಾಯ್ ಹೇಳಿದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos