ರಾಜ್ಯ

ಮೈಸೂರು: ಶಾಸಕ ಎಂಕೆ ಸೋಮಶೇಖರ್ ವಿರುದ್ಧ ಜಾಮೀನುರಹಿತ ವಾರಂಟ್ ಜಾರಿ

Raghavendra Adiga
ಮೈಸೂರು: ಕಾಂಗ್ರೆಸ್​ ಶಾಸಕ ಎಂ. ಕೆ ಸೋಮಶೇಖರ್​ ಅವರ ವಿರುದ್ಧ ಮೈಸೂರಿನ ಜೆಎಂಎಫ್​ ನ್ಯಾಯಾಲಯ ಜಾಮೀನು ರಹಿತ ವಾರಂಟ್​ ಜಾರಿ ಮಾಡಿದೆ. ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಹಾಜರಾಗದ ಹಿನ್ನೆಲೆಯಲ್ಲಿ ನ್ಯಾಯಾಲಯ ಈ ವಾರಂಟ್ ಜಾರಿ ಮಾಡಿದೆ.
ಸುಳ್ಳು ಮಾಹಿತಿ ನೀಡಿ ಗ್ಯಾಸ್ ಏಜೆನ್ಸಿ ಪಡೆದಿದ್ದಾರೆಂದು ಮಾಜಿ ಕಾರ್ಪೊರೇಟರ್  ಎಂ.ಸಿ.ಚಿಕ್ಕಣ್ಣ 2008ರ ಮೇನಲ್ಲಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದರು. 
ಆಗ ಇದರ ವಿರುದ್ದ ಸೋಮಶೇಖರ್ ಸಹ ಪ್ರತಿ ಹೇಳಿಕೆ ನೀಡಿದ್ದರು. ಇದರಿಂದ ಬೇಸರಗೊಂಡ ಚಿಕ್ಕಣ್ಣ ಅವರು ಸೋಮಶೇಖರ್ ವಿರುದ್ಧ ಮೈಸೂರಿನ ಜೆಎಂಎಫ್‍ಸಿ 3ನೇ ನ್ಯಾಯಾಲಯದಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದರು. ಪ್ರಕರಣ ಸಂಬಂಧ ನ್ಯಾಯಾಲಯದಲ್ಲಿ ವಿಚಾರಣೆಗೆ ಹಲವು ಬಾರಿ ಸೋಮಶೇಖರ್ ಗೈರಾಗಿದ್ದರು.ಇದೀಗ ಮೊನ್ನೆ ಡಿ. 4ರಂದು ಅರ್ಜಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯುವುದಿದ್ದು ಶಾಸಕರ ಹಾಜರಾತಿ ಅನಿವಾರ್ಯವಾಗಿತ್ತು.ಆದರೆ ಅಂದು ಸಹ ಅವರು ಹಾಜರಾಗದೆ ಇದ್ದ ಕಾರಣ ನ್ಯಾಯಾಲಯವು  ಶಾಸಕರನ್ನು ಬಂಧಿಸುವಂತೆ ಜಾಮೀನ ರಹಿತ ವಾರಂಟ್​ ಜಾರಿ ಮಾಡಿದೆ
SCROLL FOR NEXT