ರಾಜ್ಯ

ಬೆಂಗಳೂರಿಗೆ ಕನಿಷ್ಠ 10 ಕ್ರೀಡಾಂಗಣಗಳು ಬೇಕು: ಹೈ ಕೋರ್ಟ್

Raghavendra Adiga
ಬೆಂಗಳೂರು: ಪ್ರಸ್ತುತ ನಗರದ ಜನಸಂಖ್ಯೆಯನ್ನು ಪರಿಗಣಿಸಿ ಬೆಂಗಳೂರಿಗೆ 10 ಕ್ರೀಡಾಂಗಣಗಳು ಅಗತ್ಯವಾಗಿದೆ ಎಂದ ಕರ್ನಾಟಕ ಹೈಕೋರ್ಟ್ ಕನಿಷ್ಠ 2 ಅಥವಾ 3 ಕ್ರೀಡಾಂಗಣಗಳನ್ನು ನಿರ್ಮಿಸಲು ರಾಜ್ಯ ಸರ್ಕಾರಕ್ಕೆ ಸಲಹೆ ಮಾಡಿದೆ.
ಕಂಠೀರವ ಕ್ರೀಡಾಂಗಣದಲ್ಲಿ ಅಥ್ಲೀಟ್‌ಗಳಿಗೆ ಸಿಂಥೆಟಿಕ್‌ ಟ್ರ್ಯಾಕ್‌ ಬಳಕೆಗೆ ವಿಧಿಸಿರುವ ನಿರ್ಬಂಧ ತೆರವುಗೊಳಿಸಬೇಕು ಎಂದು  ಕೋರಿ ಸಲ್ಲಿಸಲಾಗಿರುವ  ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಹಂಗಾಮಿ  ಮುಖ್ಯ ನ್ಯಾಯಾಧೀಶ ಎಚ್. ಜಿ. ರಮೇಶ್ ಮತ್ತು ನ್ಯಾಯಮೂರ್ತಿ ಪಿ.ದಿನೇಶ್ ಕುಮಾರ್ ಅವರ ವಿಭಾಗೀಯ ಪೀಠ ಈ ಸಲಹೆಯನ್ನು ನೀಡಿತು. ಹೆಚ್ಚಿನ ಸಂಖ್ಯೆಯ ಕ್ರೀಡಾಂಗಣಗಳನ್ನು ಹೊಂದುವಿಕೆಯು ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡುವ ಮತ್ತು ಆರೋಗ್ಯಕರ ಸಮಾಜ ನಿರ್ಮಾಣವನ್ನು ಪ್ರೋತ್ಸಾಹಿಸುತ್ತದೆ ಎಂದು ಪೀಠವು ಅಭಿಪ್ರಾಯಪಟ್ಟಿದೆ.
"ನಗರದಲ್ಲಿ ಇನ್ನೂ 10 ಉತ್ತಮ ಕ್ರೀಡಾಂಗಣಗಳನ್ನು ನಿರ್ಮಿಸಬೇಕು. 80 ಲಕ್ಷ ಜನಸಂಖ್ಯೆ ಇರುವ ಬೆಂಗಳೂರಿಗೆ ಒಂದೇ ಕ್ರೀಡಾಂಗಣ ಸಾಕಾಗುವುದಿಲ್ಲ. ಅಥ್ಲೀಟ್‌ಗಳಿಗೆ ಅನುಕೂಲವಾಗುವಂತೆ ಇನ್ನೊಂದಿಷ್ಟು ಕ್ರೀಡಾಂಗಣಗಳನ್ನು ನಿರ್ಮಿಸಿ" ಎಂದು ನ್ಯಾಯಮೂರ್ತಿಗಳು ಸಲಹೆ ನೀಡಿದ್ದಾರೆ.
ನ್ಯಾಯಾಲಯಕ್ಕೆ ಸಲ್ಲಿಸಿರುವ ಈ ಅರ್ಜಿಯ ಕೋರಿಕೆಯೇ ಸರಿ ಇಲ್ಲ, ನೀವು ಸರ್ಕಾರಿ ವಕೀಲರ ಜೊತೆ ಚರ್ಚಿಸಿ. ಅವರು ನಿಮ್ಮ ಸಮಸ್ಯೆಗೆ ಪರಿಹಾರ ಹೇಳುತ್ತಾರೆ. ನಾವು ಈ ಬಗ್ಗೆ ಏನು ಆದೇಶವನ್ನು ನೀಡುವುದಿಲ್ಲ. ಅರ್ಜಿದಾರರ ಪರ ಹಾಜರಿದ್ದ ಸುಶೀಲಾ ಅವರಿಗೆ ನ್ಯಾಯಪೀಠವು ಹೇಳಿದೆ.
ಕಳೆದ ಅಕ್ಟೋಬರ್ ನಲ್ಲಿ ನಡೆದ 17 ವರ್ಷದ ಒಳಗಿನವರ ಫುಟ್‌ಬಾಲ್‌ ವಿಶ್ವಕಪ್‌ ಪಂದ್ಯಾವಳಿಯ ಕಾರಣ ಒಡ್ಡಿ ಕ್ರೀಡಾಪಟುಗಳ ಅಭ್ಯಾಸಕ್ಕೆ ಕ್ರೀಡಾಂಗಣದಲ್ಲಿ ಅನುಮತಿ ಸಿಗುತ್ತಿಲ್ಲ.  ಸರ್ಕಾರ ಜೆಎಸ್‌ಡಬ್ಲ್ಯೂ ಬೆಂಗಳೂರು ಫುಟ್‌ಬಾಲ್‌ ಕ್ಲಬ್‌ ಜೊತೆ ಒಪ್ಪಂದ ಮಾಡಿಕೊಂಡಿದೆ. ಇದಕ್ಕಾಗಿ ಸಿಂಥೆಟಿಕ್‌ ಟ್ರ್ಯಾಕ್‌ ಹಾಗೂ ಮೈದಾನವನ್ನು  ಬಳಸಲು ಅಥ್ಲೀಟ್‌ಗಳಿಗೆ ಅನುಮತಿ ನೀಡುತ್ತಿಲ್ಲ ಎನ್ನುವುದು ಅರ್ಜಿದಾರರ ವಾದವಾಗಿತ್ತು. 
SCROLL FOR NEXT