ಮೈಸೂರು: ಬಸ್ ನಿಲ್ದಾಣದಲ್ಲಿ ಬಾಂಬ್ ಭೀತಿ ಸೃಷ್ಟಿಸಿದ ಯುಪಿಎಸ್ ಬಾಕ್ಸ್!
ಮೈಸೂರು: ಮೈಸೂರು ಗ್ರಾಮಾಂತರ ಬಸ್ ನಿಲ್ದಾಣದ ಬಳಿ ಅನುಮಾನಾಸ್ಪದ ವಸ್ತುವೊಂದು ಪತ್ತೆಯಾಗಿ ಕೆಲ ಕಾಲ ಆತಂಕ ಸೃಷ್ಟಿಯಾಗಿತ್ತು. ಬಸ್ ನಿಲ್ದಾಣದ ಮುಂಭಾಗದಲ್ಲಿರುವ ಪೀಪಲ್ಸ್ ಪಾರ್ಕ್ ನಲ್ಲಿ ಎರಡು ಬಾಕ್ಸ್ ಗಳು ಪತ್ತೆಯಾಗಿದ್ದು ಜನರು ಬಾಂಬ್ ಭೀತಿಗೆ ತುತ್ತಾಗಿದ್ದರು.
ಶೆಲ್ ಹಾಗೂ ವಯರ್ ತುಂಬಿದ ಬಾಕ್ಸ್ ಇದಾಗಿದ್ದು ಸಾರ್ವಜನಿಕರು ಭಯದಿಂದ ಕಂಟ್ರೋಲ್ ರೂಂ ಗೆ ಕರೆ ಮಾಡಿದ್ದರು. ಕೂಡಲೇ ಸ್ಥಳಕ್ಕೆ ಧಾವಿಸಿದ ಬಾಂಬ್ ನಿಷ್ಕ್ರಿಯ ದಳ ಹಾಗೂ ಪೋಲೀಸರು ಬಾಕ್ಸ್ ತೆರೆದು ಪರಿಶೀಲಿಸಿದ್ದಾರೆ. ಅದಾಗ ಆ ವಸ್ತು ಬಾಂಬ್ ಅಲ್ಲ ಬ್ಯಾಟರಿ ಹಾಗೂ ಸರ್ಕ್ಯೂಟ್ ಬೋರ್ಡ್ ಹೊಂದಿರುವ ಯುಪಿಎಸ್ ಪವರ್ ಬ್ಯಾಂಕ್ ಎಂದು ತಿಳಿದು ಬಂದಿದೆ.
ಯುಪಿಎಸ್ ಮಾದರಿಯ ಪವರ್ ಬ್ಯಾಂಕ್ ನಲ್ಲಿ ಸರ್ಕ್ಯೂಟ್ ಸಹ ಇದ್ದು ಇದನ್ನು ಸ್ಪೋಟಕವಾಗಿ ಬಳಸಲು ಸಾದ್ಯವಿಲ್ಲ. ಸ್ಪೋಟಕಕ್ಕಾಗಿ ಇಷ್ಟು ಶೆಲ್ ಬಳಸುವ ಅಗತ್ಯವಿಲ್ಲ. ಸಾರ್ವಜನಿಕರನ್ನು ಭಯಭೀತಿಗೊಳಿಸುವ ಸಲುವಾಗಿ ಯಾರೋ ಕಿಡಿಗೇಡಿಗಳು ಹೀಗೆ ಮಾಡಿದ್ದಾರೆ ಎಂದು ಮೈಸೂರು ನಗರ ಪೊಲೀಸ್ ಆಯುಕ್ತ ಡಾ. ಸುಬ್ರಹ್ಮಣೇಶ್ವರ ರಾವ್ ಹೇಳಿದ್ದಾರೆ.
ಇದನ್ನು ಇಲ್ಲೇಕೆ ಇಟ್ಟಿದ್ದರು? ಭಯ ಹುಟ್ಟಿಸಲೋ ಅಥವಾ ಬೇಡವೆಂದು ಬಿಟ್ಟು ಹೋಗಿದ್ದಾರೆಯೋ ಎನ್ನುವುದನ್ನು ಪತ್ತೆ ಮಾಡಿ ತಿಳಿಯುತ್ತೇವೆ ಎಂದು ಪೋಲೀಸ್ ಅಧಿಕಾರಿಗಳು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics