ಬೆಂಗಳೂರು ಮೈಸೂರು ರೈಲ್ವೆ ಮಾರ್ಗದ ವಿದ್ಯುದೀಕರಣ ಕಾಮಗಾರಿ ಪೂರ್ಣ
ಬೆಂಗಳೂರು: ಯಲಿಯೂರು ಮತ್ತು ಮೈಸೂರು ನಡುವಿನ 39 ಕಿಮೀ ಎಲೆಕ್ಟ್ರಿಫೈಡ್ ವಿಭಾಗದಲ್ಲಿ ರೈಲುಗಳನ್ನು ಓಡಿಸಲು ರೈಲ್ವೆ ಸುರಕ್ಷತಾ ಆಯೋಗ (ಸಿಆರ್ ಎಸ್)ಅನುಮತಿ ನೀಡಿದೆ. ಇದರಿಒಡನೆ ಬೆಂಗಳೂರು ಮತ್ತು ಮೈಸೂರು ನಡುವೆರೈಲುಗಳ ಸಂಚಾರದ ವೇಗ ಹೆಚ್ಚಳವಾಗಲಿದೆ. ರೈಲ್ವೆ ಸಚಿವ ಪಿಯೂಷ್ ಗೋಯಲ್ ಡಿಸೆಂಬರ್ 26 ರಂದು ಬೆಂಗಳೂರು ಮತ್ತು ಮೈಸೂರು ನಡುವಿನ ವಿದ್ಯುಚ್ಛಕ್ತಿ ಚಾಲಿತ ರೈಲು ಯೋಜನೆಗೆ ಚಾಲನೆ ನೀಡಲಿದ್ದಾರೆ. ಬೆಂಗಳೂರಿನ ಮೂಲಕ ಚೆನ್ನೆ, ಮೈಸೂರುಗೆ ಹೋಗುವ ಶತಾಬ್ದಿ ಎಕ್ಸ್ ಪ್ರೆಸ್ ಆ ದಿನದಿಂದ ತನ್ನ ವೇಗವನ್ನು ಹೆಚ್ಚಿಸಿಕೊಳ್ಳಲಿದೆ.
"ಶತಾಬ್ದಿ ಇನ್ನು ಮುಂದೆ ಬೆಂಗಳೂರು ನಗರ ರೈಲ್ವೆ ನಿಲ್ದಾಣದಲ್ಲಿ ನಿಲ್ಲುವಂತಿಲ್ಲ ಮತ್ತು ವಿದ್ಯುತ್ ಮಾರ್ಗವನ್ನು ಡೀಸೆಲ್ಗೆ ಬದಲಾಯಿಸುವವರೆಗೂ ಕಾಯಬೇಕಾಗಿಲ್ಲ" ಎಂದು ನೈರುತ್ಯ ರೈಲ್ವೇ ವಲಯ ಪ್ರಧಾನ ವ್ಯವಸ್ಥಾಪಕರಾದ ಎ.ಕೆ. ಗುಪ್ತಾ ಹೇಳಿದ್ದಾರೆ. " "ಇದು ಮುಂದಿನ ರೈಲ್ವೆ ಟೈಮ್ ಟೇಬಲ್ ನ ಮೇಲೆ ಪ್ರಬಾವ ಬಿರುತ್ತದೆ ಎಂದು ಅವರು ಹೇಳಿದರು. ಬೆಂಗಳೂರು-ಮೈಸೂರು ,ಜೋಡಿ ರೈಲು ಮಾರ್ಗ ಯೋಜನೆ (138.3 ಕಿಮೀ) ಮತ್ತು ವಿದ್ಯುತ್ ಜನಕ ಯೋಜನೆಗಳಿಗೆ 2007 ರಲ್ಲಿ ಚಾಲನೆ ನೀಡಲಾಗಿತ್ತು.