ಬೆಂಗಳೂರು: ಬೆಂಗಳೂರಿನಲ್ಲಿ ಮೆಟ್ರೋ ಸಏವೆ ಪ್ರಾರಂಭವಾದ ದಿನದಿಂದ ಇಲ್ಲಿಯವರೆಗೆ ಒಟ್ಟು 17.71 ಕೋಟಿ ಪ್ರಯಾಣಿಕರು ಮೆಟ್ರೋ ಸೇವೆಯನ್ನು ಬಳಸಿಕೊಂಡಿದ್ದಾರೆ. ಬೆಂಗಳುರು ನಗರದಲ್ಲಿ ಒಟ್ಟು 40 ಮೆಟ್ರೋ ನಿಲ್ದಾಣಗಳಿದ್ದು ಇವುಗಳಲ್ಲಿ ಕೆಂಪೇಗೌಡ ನಿಲ್ದಾಣವೊಂದರಲ್ಲೇ ದಾಖಲೆ ಸಂಖ್ಯೆಯ ಪ್ರಯಾಣಿಕರನ್ನು ಕಾಣಬಹುದಾಗಿದೆ. ಇದೇ ವೇಳೆ ಕರ್ನಾಟಕ ಬಾಂಡ್ ದಿನದಂದು ಇಡೀ ದಿನಕ್ಕೆ ಕೇವಲ 1,450 ಪ್ರಯಾಣಿಕರು ಮೆಟ್ರೋ ಸೇವೆಯನ್ನು ಬಳಸಿಕೊಂಡಿದ್ದಾರೆ. ಒಂದು ಮೆಟ್ರೊ ರೈಲಿನಲ್ಲಿ ಗರಿಷ್ಠ 975 ಪ್ರಯಾಣಿಕರು ಪ್ರಯಾಣಿಸಬಹುದಾಗಿದೆ.
"ನಾವು ಅಕ್ಟೋಬರ್ 20, 2011 ರಿಂದ ಡಿಸೆಂಬರ್ 27, 2017 ವರೆಗೆ ನಮ್ಮ ಮೆಟ್ರೋ ರೈಲಿನಲ್ಲಿ 17,71,98,953 ಪ್ರಯಾಣಿಕರು ಪಯಣಿಸಿದ್ದಾರೆ ವಾರದ ದಿನಗಳಲ್ಲಿ ನೇರಳೆ ಮಾರ್ಗದಲ್ಲಿ ಹೆಚ್ಚು ಸಂಖ್ಯೆಯ ಪ್ರಯಾಣಿಕರು ಪಯಣಿಸಿದರೆ ವಾರಾಂತ್ಯದಲ್ಲಿ ಮತ್ತು ರಜಾ ದಿನಗಳಲ್ಲಿ ಹಸಿರು ಮಾರ್ಗದಲ್ಲಿ ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ" ಬೆಂಗಳೂರು ಮೆಟ್ರೋ ರೈಲು ನಿಗಮದ ಕಾರ್ಯಾಚರಣೆ ಮತ್ತು ನಿರ್ವಹಣೆಯ ವಿಭಾಗದ ಕಾರ್ಯನಿರ್ವಾಹಕ ನಿರ್ದೇಶಕ ಎ.ಎಸ್. ಶಂಕರ್ ಎಕ್ಸ್ ಪ್ರೆಸ್ ಗೆ ತಿಳಿಸಿದರು.
ಮೆಟ್ರೋ ಪ್ರಾರಂಭವಾದ ದಿನದಿಂದ ಎರಡು ಬಾರಿ ನಾಲ್ಕು ಲಕ್ಷ ಪ್ರಯಾಣಿಕರನ್ನು ಕಂಡಿದ್ದು ಸಪ್ಟೆಂಬರ್ 28, 2017, ಪ್ರಯಾಣಿಕರ ಸಂಖ್ಯೆ 4,10,050 ರಷ್ಟಿದ್ದದ್ದು ಪ್ರಥಮ ಬಾರಿಗೆ ಮೆಟ್ರೋ ಪ್ರಯಾಣಿಕರ ಸಂಖ್ಯೆ ನಾಲ್ಕು ಲಕ್ಷಕ್ಕೆ ಏರಿಕೆ ಕಂಡು ದಾಖಲೆ ಬರೆದಿತ್ತು. ಇನ್ನು ಅಕ್ಟೋಬರ್ 13 ರಂದು 4,04,920 ಪ್ರಯಾಣಿಕರು ಮೆಟ್ರೋದಲ್ಲಿ ಪ್ರಯಾಣಿಸಿದ್ದರು.
ಬೆಂಗಳೂರಿಗರ ಬಹುದಿನದ ಕನಸಾಗಿದ್ದ ಮೆಟ್ರೋ ರೈಲು ಅಕ್ಟೋಬರ್ 20, 2011ರಿಂದ ಪ್ರಾರಂಭವಾಗಿದ್ದು ಮೊದಲ ಹಂತದಲ್ಲಿ ಎಂಜಿ ರಸ್ತೆಯಿಂದ ಬೈಯಪ್ಪನಹಳ್ಳಿಗೆ ಮೆಟ್ರೋ ರೈಲ ಸಂಚಾರ ನಡೆಸಿತ್ತು.