ಸಾಂದರ್ಭಿಕ ಚಿತ್ರ 
ರಾಜ್ಯ

ಜನಪ್ರಿಯತೆ ಪಡೆದುಕೊಳ್ಳುತ್ತಿರುವ ಮೆಟ್ರೊ ನಿಲ್ದಾಣದೊಳಗಿನ ಸಿನಿಮಾ ಚಿತ್ರೀಕರಣ

ಜನವರಿ 1ರಂದು ಮಧ್ಯರಾತ್ರಿ ಕಳೆದ ನಂತರ ಕನ್ನಡ ಸಿನಿಮಾ ಲಕ್ನೋ ಟು ಬೆಂಗಳೂರು ಚಿತ್ರದ ಶೂಟಿಂಗ್ ಮೆಟ್ರೊ ನಿಲ್ದಾಣದ ....

ಬೆಂಗಳೂರು: ಜನವರಿ 1ರಂದು ಮಧ್ಯರಾತ್ರಿ ಕಳೆದ ನಂತರ ಕನ್ನಡ ಸಿನಿಮಾ ಲಕ್ನೋ ಟು ಬೆಂಗಳೂರು ಚಿತ್ರದ ಶೂಟಿಂಗ್ ಮೆಟ್ರೊ ನಿಲ್ದಾಣದ ಒಳಗೆ ನಡೆಯಲಿದೆ. ಕೆಲ ದಿನಗಳ ಹಿಂದೆ ಫಸ್ಟ್ ಟೇಕ್ ಫಿಲ್ಮ್ಸ್ ನಿರ್ಮಾಣ ಸಂಸ್ಥೆ ಕೆಲವು ದೃಶ್ಯಗಳನ್ನು ಮಧ್ಯರಾತ್ರಿಯಿಂದ ನಸುಕಿನ ಜಾವ 3 ಗಂಟೆಯೊಳಗೆ ಬೈಯಪ್ಪನಹಳ್ಳಿ ಮತ್ತು ಎಂ.ಜಿ.ರಸ್ತೆಯ ಮೆಟ್ರೊ ನಿಲ್ದಾಣದಲ್ಲಿ ಕೆಲವು ದೃಶ್ಯಗಳನ್ನು ಚಿತ್ರೀಕರಿಸಲಾಯಿತು.
ನಮ್ಮ ಮೆಟ್ರೊಗೆ ಬೆಂಗಳೂರಿಗರು ಮಾರು ಹೋಗಿರುವುದರಿಂದ ಸಿನಿಮಾ ನಿರ್ಮಾಪಕರು ಸಿನಿಮಾಗಳಲ್ಲಿ ಮತ್ತು ಜಾಹಿರಾತು ಸಂಸ್ಥೆಗಳು ಇದನ್ನು ಪ್ರಚಾರದ ತಂತ್ರವಾಗಿ ಬಳಸಿಕೊಳ್ಳಲು ಯೋಜಿಸುತ್ತಿವೆ. ಆಧುನಿಕ ಶೈಲಿಯ ನಿಲ್ದಾಣಗಳು ಮತ್ತು ರೈಲುಗಳು ನೋಡುಗರನ್ನು ಸೆಳೆಯುತ್ತಿವೆ. ಇದು ಪರೋಕ್ಷವಾಗಿ ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತಕ್ಕೆ(ಬಿಎಂಆರ್ ಸಿಎಲ್) ಆದಾಯವನ್ನು ತರುತ್ತಿವೆ.
ಸಿನಿಮಾ ಚಿತ್ರೀಕರಣಕ್ಕೆ ಒಪ್ಪಿಗೆ ನೀಡಿರುವ ಬಿಎಂಆರ್ ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಮಹೇಂದ್ರ ಜೈನ್, 2011ರಲ್ಲಿ ನಮ್ಮ ಮೆಟ್ರೊ ಕಾರ್ಯಾಚರಣೆ ಆರಂಭಿಸಿದಲ್ಲಿಂದ ನಾವು ಇಲ್ಲಿಯವರೆಗೆ 15 ಚಿತ್ರೀಕರಣ ಘಟಕಗಳಿಗೆ ಅನುಮತಿ ನೀಡಿದ್ದೇವೆ. ಅನೇಕ ಜಾಹಿರಾತುಗಳು ಮತ್ತು ಸಿನಿಮಾಗಳು ಇಲ್ಲಿ ಚಿತ್ರೀಕರಣಗೊಂಡಿವೆ ಎಂದು ಹೇಳಿದರು.
ಕನ್ನಡ ಸಿನಿಮಾಗಳು ಮಾತ್ರವಲ್ಲದೆ ತೆಲುಗು ಮತ್ತು ತಮಿಳು ಚಿತ್ರಗಳು ಕೂಡ ಕಬ್ಬನ್ ಪಾರ್ಕ್ ಮೆಟ್ರೊ ನಿಲ್ದಾಣದ ನೆಲದಡಿಯ ಸುರಂಗದಲ್ಲಿ ಕೂಡ ಚಿತ್ರೀಕರಿಸಲಾಗಿದೆ. ಆದಾಯದ ಮೇಲೆ ಇದರ ಪರಿಣಾಮವನ್ನು ವಿವರಿಸಿದ ಅವರು, ಪ್ರಯಾಣಿಕರ ದರದ ಹೊರತಾದ ಆದಾಯ ಮೆಟ್ರೊ ನಿಗಮಕ್ಕೆ ಖಂಡಿತಾ ಆದಾಯದ ಮೂಲವಾಗುತ್ತದೆ.
ಮುಂದಿನ ವರ್ಷಗಳಲ್ಲಿ ಈ ನಿಟ್ಟಿನಲ್ಲಿ ಇನ್ನಷ್ಟು ಗಮನಹರಿಸಿ ಗರಿಷ್ಠ ಆದಾಯ
ಪಡೆಯುವತ್ತ ಯೋಜನೆ ಮಾಡಲಾಗುವುದು. ಹಾಗೆಂದು ಸುರಕ್ಷತೆಯ ವಿಚಾರದಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಮಹೇಂದ್ರ ಜೈನ್ ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 13 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಬೂಕರ್ ಪ್ರಶಸ್ತಿ ಮಹತ್ವ ತಿಳಿದಿದ್ದರೆ ನನ್ನನ್ನು ಟೀಕಿಸುತ್ತಿರಲಿಲ್ಲ, ಸಾಹಿತ್ಯ ಸಮ್ಮೇಳನದ ವಿಡಿಯೋ ತಿರುಚಲಾಗಿದೆ: ಬಾನು ಮುಷ್ತಾಕ್

ಡಿಕೆಶಿ RSS ಗೀತೆ ಹೇಳಿದ್ದೂ ರಾಹುಲ್‌ ಗಾಂಧಿಗೆ ತಲುಪಲಿ: ಶಾಕ್ ಕೊಟ್ಟ ಸತೀಶ್‌ ಜಾರಕಿಹೊಳಿ ಹೇಳಿಕೆ

ಧರ್ಮಸ್ಥಳ ಕೇಸ್: ತನಿಖೆ ಶೀಘ್ರಗತಿ ಪೂರ್ಣಗೊಳಿಸಲು SIT ಪ್ರಯತ್ನ; ಗೃಹ ಸಚಿವ ಡಾ.ಜಿ.ಪರಮೇಶ್ವರ್

SCROLL FOR NEXT