ಕ್ಯಾಬ್ ಶೇರಿಂಗ್ ನಿಷೇಧಕ್ಕೆ ಬೆಂಗಳೂರು ಪ್ರಯಾಣಿಕರಿಂದ ವಿರೋಧ
ಸಾರಿಗೆ ಇಲಾಖೆ ಕ್ಯಾಬ್ ಶೇರಿಂಗ್ ಗೆ ನಿಷೇಧ ವಿಧಿಸಿರುವುದಕ್ಕೆ ಬೆಂಗಳೂರು ಪ್ರಯಾಣಿಕರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಪ್ರಮುಖವಾಗಿ ಐಟಿ ವಲಯದಿಂದ ವಿರೋಧ ವ್ಯಕ್ತವಾಗಿದ್ದು, ಸ್ಟಾರ್ಟ್ ಅಪ್ ಹಬ್ ಗಳಾಗಿರುವ ಕೋರಮಂಗಲಾ, ಹೆಚ್ಎಸ್ಆರ್ ಲೇಔಟ್ ಪ್ರದೇಶಗಳಲ್ಲಿ ಹೆಚ್ಚಿನ ಪ್ರತಿರೋಧ ವ್ಯಕ್ತವಾಗಿದೆ.
ಕೋರಮಂಗಲಾ, ಹೆಚ್ಎಸ್ಆರ್ ಲೇಔಟ್ ಗಳಲ್ಲಿ ಮೆಟ್ರೋ ಸಂಪರ್ಕ ಇಲ್ಲವಾದ ಕಾರಣ ಪ್ರಯಾಣಿಕರು ಬಿಎಂಟಿಸಿ ಬಸ್ ಹಾಗೂ ಆಟೋಗಳ ಮೇಲೆಯೇ ಅವಲಂಬಿತರಾಗಿದ್ದಾರೆ. ಆಟೋ ಚಾಲಕರು ಮೀಟರ್ ಪ್ರಕಾರ ಬಾಡಿಗೆ ತೆಗೆದುಕೊಳ್ಳುವುದು ಅಪರೂಪದ ಸಂಗತಿ. ಇಂತಹ ಸನ್ನಿವೇಶಗಳನ್ನು ಎದುರಿಸುವ ಸ್ಥಳೀಯ ನಿವಾಸಿಗಳಿಗೆ ಕ್ಯಾಬ್ ಶೇರಿಂಗ್ ವರದಾನವಾಗಿ ಪರಿಣಮಿಸಿದೆ.
ಬಿಎಂಟಿಸಿ ಬಸ್ ಗಳ ಸಂಖ್ಯೆ ಕಡಿಮೆ ಇರುವ ಹಿನ್ನೆಲೆಯಲ್ಲಿ ಕ್ಯಾಬ್ ಶೇರಿಂಗ್ ವ್ಯವಸ್ಥೆ ಕೈಗೆಟುವ ದರದಲ್ಲಿ ಸಿಗುವ ಸಾರಿಗೆ ವ್ಯವಸ್ಥೆಯಾಗಿದೆ ಎನ್ನುತ್ತಾರೆ ಇತ್ತೀಚೆಗಷ್ಟೇ ಎಂಜಿ ರಸ್ತೆಯಲ್ಲಿ ಕೆಲಸಕ್ಕೆ ಸೇರಿರುವ ಹೆಚ್ಎಸ್ಆರ್ ಲೇಔಟ್ ನ ನಿವಾಸಿ ರಶ್ಮಿ ಚಕ್ರವರ್ತಿ.
ಸರ್ಕಾರ ಜನರಿಗೆ ಸಹಕಾರಿಯಾಗುವಂತಹ ಕ್ರಮಗಳನ್ನು ಕೈಗೊಳ್ಳಬೇಕೆ ಹೊರತು, ಹಾನಿಯಾಗುವ ಕ್ರಮಗಳನ್ನಲ್ಲ. ಬಿಎಂಟಿಸಿ ಬಸ್ ಗಳು ಉಂಟುಮಾಡಿರುವ ನಿರರ್ಥಕತೆಯನ್ನು ಓಲಾ, ಉಬರ್ ಕ್ಯಾಬ್ ಗಳು ತುಂಬಿವೆ. ಕ್ಯಾಬ್ ಶೇರಿಂಗ್ ನಿಂದಾಗಿ ಬಿಎಂಟಿಸಿ ಬಸ್ ಗಳಿಗೆ ಹೊಡೆತ ಬೀಳುತ್ತಿರುವುದರಿಂದ ಕ್ಯಾಬ್ ಶೇರಿಂಗ್ ಗೆ ನಿಷೇಧ ವಿಧಿಸಲಾಗಿದೆ ಎಂದು ರಶ್ಮಿ ಚಕ್ರವರ್ತಿ ಅಭಿಪ್ರಾಯಪಟ್ಟಿದ್ದಾರೆ.
ಇನ್ನು ಕ್ಯಾಬ್ ಶೇರಿಂಗ್ ನ್ನು ಕಾನೂನಾತ್ಮಕಗೊಳಿಸಬಹುದೇ ಎಂಬ ಬಗ್ಗೆ ಸಾರಿಗೆ ಇಲಾಖೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದು, ಕೇಂದ್ರ ಸರ್ಕಾರದಿಂದ ಸ್ಪಷ್ಟನೆ ಕೋರಿದ್ದೇವೆ. ಕೇಂದ್ರ ಸರ್ಕಾರ ಅನುಮತಿ ನೀಡದೇ ಇದ್ದರೆ ಈ ಸೇವೆಯನ್ನು ರದ್ದುಗೊಳಿಸುತ್ತೇವೆ ಎಂದು ಸಾರಿಗೆ ಇಲಾಖೆ ಹೆಚ್ಚುವರಿ ಆಯುಕ್ತ ಹೆಚ್ ಜಿ ಕುಮಾರ್ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics