ರಾಜ್ಯ

ಬರಿದಾಗುತ್ತಿರುವ ಜಲಾಶಯ: ಬೆಂಗಳೂರು, ಮೈಸೂರು, ಮಂಡ್ಯ ಭಾಗಗಳಲ್ಲಿ ಎದುರಾಗಲಿದೆ ನೀರಿನ ಸಮಸ್ಯೆ

Shilpa D

ಬೆಂಗಳೂರು: ಬೆಂಗಳೂರು, ಮೈಸೂರು ಹಾಗೂ ಮಂಡ್ಯ ಭಾಗಗಳಲ್ಲಿ ಈ ಬಾರಿಯ ಬೇಸಿಗೆಯಲ್ಲಿ ತೀವ್ರ ನೀರಿನ ಬಿಕ್ಕಟ್ಟು ಎದುರಾಗಲಿದೆ.  ನಗರಕ್ಕೆ ನೀರು ಸರಬರಾಜು ಮಾಡುವ ಪ್ರಮುಖ ಜಲಾಶಯಗಳಾದ ಕೃಷ್ಣರಾಜಸಾಗರ, ಮತ್ತು ಕಬಿನಿಗಳಲ್ಲಿ ನೀರಿನ ಸಂಗ್ರಹ ಮಟ್ಟ ಪಾತಾಳಕ್ಕಿಳಿದಿದೆ, ಹೀಗಾಗಿ ನಗರದಲ್ಲಿ ನೀರಿನ ಸಮಸ್ಯೆ ತಲೆದೋರಲಿದೆ. ಬೆಂಗಳೂರು ನಗರ ನೀರು ಸರಬರಾಜು ಮಂಡಳಿಗೆ ಬೇರೆ ದಾರಿಯಿಲ್ಲದೇ ಮತ್ತಷ್ಟು ಬೋರ್ ವೆಲ್ ಕೊರೆಸುವ ಅನಿವಾರ್ಯತೆ ಎದುರಾಗಿದೆ.

ಸೋಮವಾರದ ವೇಳೆಗೆ  ಕೆಆರ್ ಎಸ್ ಜಲಾಶಯದಲ್ಲಿ 5,932 ಟಿಎಂಸಿ ಅಡಿ ನೀರಿತ್ತು. ಕೆಆರ್ ಎಸ್ ನ ಒಟ್ಟಾರೆ ಸಂಗ್ರಹ  ಸಾಮರ್ಥ್ಯ 45.05 ಟಿಎಂಸಿ ಅಡಿ ಇದೆ.ಇನ್ನೂ ಕಬಿನಿ ಜಲಾಶದಲ್ಲಿ ಕಳೆದ ವರ್ಷ ಈ ವೇಳೆಗೆ 5.56 ಟಿಎಂಸಿ ಅಡಿ ನೀರಿತ್ತು. ಆದರೆ ಈ ಬಾರಿ 2.32 ಟಿಎಂಸಿ ಅಡಿ ನೀರಿದೆ. ಬೆಂಗಳೂರು ನಗರವೊಂದಕ್ಕೆ ಪ್ರತಿ ತಿಂಗಳು 2 ಟಿಎಂಸಿ ಅಡಿ ನೀರಿನ ಅವಶ್ಯಕತೆ ಇದೆ ಎಂದು
ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ಮಾನಿಟರಿಂಗ್ ಕೇಂದ್ರ ತಿಳಿಸಿದೆ.

ಬಿಸಿಲಿನ ತಾಪಕ್ಕೆ ಆವಿಯಾಗುವುದು ಹಾಗೂ ಪ್ರಸರಣ ನಷ್ಟ ಕೂಡು ಆಗುತ್ತಿರುವುದು ನಿರೀಕ್ಷೆಗಿಂತ ಹೆಚ್ಚಿನ ಪ್ರಮಾಣದಲ್ಲಿ ನೀರು ಬರಿದಾಗುತ್ತಿದೆ, ಅನಧಿಗಿಂತ ಮಳೆ ಬಾರದಿದ್ದರೇ ಮಾರ್ಚ್ ವೇಳೆಗೆ  ನೀರಿನ ಸಮಸ್ಯೆ ಉಲ್ಬಣಗೊಳ್ಳಲಿದೆ.

ಕೆಎರ್ಎಸ್ ಜಲಾಶಯದ ಮಟ್ಟ 5.59ಟಿಎಂಸಿ ಗೆ ತಲುಪಿದರೇ ಜಲಚರಗಳಿಗೂ ಸಮಸ್ಯೆ ಉಂಟಾಗುತ್ತದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಹೀಗಾಗಿ ಬಿಡಬ್ಲ್ಯೂ ಎಸ್ ಎಸ್ ಬಿ ನಗರದಲ್ಲಿ ಮತ್ತಷ್ಟು ಕೊಳವೆ ಬಾವಿಗಳನ್ನು ಕೊರೆಯಲು ಸಿದ್ಧತೆ ನಡೆಸುತ್ತಿದೆ. ಈಗಾಗಲೇ ಬಿಬಿಎಂಪಿ ವ್ಯಾಪ್ತಿಯಲ್ಲಿ 7,920 ಬೋರ್ ವೆಲ್ ಗಳಿವೆ, ಇದರಲ್ಲಿ 938 ಬೋರ್ ವೆಲ್ ಗಳು ಕಾರ್ಯ ಸ್ಥಗಿತಗೊಳಿಸಿರುವುದು ಸಮೀಕ್ಷೆಯಿಂದ ತಿಳಿದು ಬಂದಿದೆ ಎಂದು ಬುಡಬ್ಲ್ಯೂ ಎಸ್ ಎಸ್ ಬಿ ಅಧ್ಯಕ್ಷ ತುಷಾರ್ ಗಿರಿನಾಥ್ ತಿಳಿಸಿದ್ದಾರೆ.

ಬೋರ್ ವೆಲ್ ಕೊರೆಯುವ ಸಂಬಂಧ ನಾವು ಟೆಂಡರ್ ಕರೆದಿದ್ದೇವೆ, ಹೆಚ್ಚುತ್ತಿರುವ ನೀರಿನ ಬೇಡಿಕೆ ಹಿನ್ನೆಲೆಯಲ್ಲಿ ಸುಮಾರು 200 ರಿಂದ 400 ಬೋರ್ ವೆಲ್ ಕೊರೆಸಲು ಚಿಂತನೆ ನಡೆಸುತ್ತಿರುವುದಾಗಿ ಅವರು ಹೇಳಿದ್ದಾರೆ.ಇದರ ಜೊತೆಗೆ ಬಿಬಿಎಂಪಿ ಕಾರ್ಪೋರೇಟರ್ ಗಳು ಅವರು ವಾರ್ಡ್ ಗಳಲ್ಲಿ ಎರಡರಿಂದ ಮೂರು ಬೋರ್ ವೆಲ್ ಗಳನ್ನು ಕೊರೆಸಲಿದ್ದಾರೆ ಎಂದು ತಿಳಿಸಿದ್ದಾರೆ. ಖಾಸಗಿ ನೀರು ಪೂರೈಕೆದಾರರ ಸಹಾಯ ಕೂಡ ಪಡೆಯಲು ಚಿಂತನೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.

SCROLL FOR NEXT