ರಾಜ್ಯ

ರಾಜ್ಯ ಸರ್ಕಾರದಿಂದ ಬರಪೀಡಿತ ಪ್ರದೇಶಗಳ 2.25 ಲಕ್ಷ ರೈತರ ಸಾಲದ ಮೇಲಿನ ಬಡ್ಡಿ ಮನ್ನಾ

Shilpa D

ಬೆಂಗಳೂರು: ಬರಗಾಲದಿಂದ ತತ್ತರಿಸಿ ಸಂಕಷ್ಟದಲ್ಲಿರುವ ರೈತರ ರಕ್ಷಣೆಗೆ ಧಾವಿಸಿರುವ ರಾಜ್ಯ ಸರ್ಕಾರ ಮಾರ್ಚ್ 31 ರೊಳಗೆ ತಾವು ಪಡೆದಿರುವ ಸಾಲದ ಅಸಲು ಪಾವತಿಸಿದರೆ ಬಡ್ಡಿ ಮನ್ನಾ ಮಾಡುವುದಾಗಿ ಸರ್ಕಾರ ಘೋಷಿಸಿದೆ. ಸುಮಾರು 2.25 ಲಕ್ಷ ರೈತರು ಇದರ ಸದುಪಯೋಗ ಪಡೆಯಲಿದ್ದಾರೆ.  

ಸರ್ಕಾರವು ಬಡವರು, ದುರ್ಬಲ ವರ್ಗದವರು ಮತ್ತು ಅವಕಾಶ ವಂಚಿತರ ಅಭಿವೃದ್ಧಿಗೆ ಬದ್ಧವಾಗಿದೆ ಎಂದು ಭಾಷಣ ಆರಂಭಿಸಿದ ರಾಜ್ಯಪಾಲ ವಜೂಭಾಯ್‌ ವಾಲಾ, ರಾಜ್ಯವು ಆರು ವರ್ಷಗಳಿಂದ ಸತತ ಬರಕ್ಕೆ ತುತ್ತಾಗಿದ್ದು  ರೈತಾಪಿ ವರ್ಗ ಸಂಕಷ್ಟದಲ್ಲಿದೆ. ಪ್ರಸಕ್ತ ವರ್ಷ 160 ತಾಲೂಕು ಬರಪೀಡಿತ ಎಂದು ಘೋಷಿಸಿದ್ದು ಬರ ಸಮರ್ಪಕವಾಗಿ ನಿರ್ವಹಿಸಲಾಗುತ್ತಿದ್ದು ಕುಡಿವ ನೀರು, ಮೇವು ಪೂರೈಕೆ, ಉದ್ಯೋಗ ಸೃಷ್ಟಿಗೆ ಒತ್ತು ಕೊಡಲಾಗಿದೆ.

ಈರುಳ್ಳಿಗೆ ಕನಿಷ್ಠ ಬೆಂಬಲ ಬೆಲೆಗಾಗಿ 65 ಕೋಟಿ, ತೆಂಗಿನ ಕಾಯಿಗೆ 155 ಕೋಟಿ ಹಾಗೂ ತೊಗರಿ ಬೇಳೆಗೆ ಪ್ರತಿ ಕ್ವಿಂಟಾಲ್ ಗೆ  450 ರು ಬೋನಸ್ ನೀಡಲು ಸರ್ಕಾರ ಚಿಂತಿಸಿದೆ.

ಮುಂದಿನ ಐದು ವರ್ಷಗಳ ನೀರಾವರಿ ಯೋಜನೆಗಳಿಗಾಗಿ 50 ಸಾವಿರ ಕೋಟಿ ರು. ಬಂಡವಾಳ ಹೂಡುವುದಾಗಿ ಭರವಸೆ ನೀಡಿತ್ತು. ಅದರಂತೆ ಈಗಾಗಲೇ 42,540 ಕೋಟಿ ರು ಹಣವನ್ನು ಕಳೆದ ನಾಲ್ಕು ವರ್ಷಗಳಲ್ಲಿ ವಿವಿಧ ನೀರಾವರಿ ಯೋಜನೆಗಳಿಗಾಗಿ ವ್ಯಯಿಸಲಾಗಿದೆ.

ಜೊತೆಗೆ ಗ್ರಾಮಗಳಲ್ಲಿ ಬಯಲು ಮುಕ್ತ ಶೌಚ ಯೋಜನೆಗೆ ವಿಶೇಷ ಒತ್ತು ನೀಡಿದೆ ಎಂದು ತಿಳಿಸಿದ್ದಾರೆ. 2016ರ ವೇಳೆಗೆ 26 ಲಕ್ಷ ಶೌಚಾಲಯ ನಿರ್ಮಿಸಿದ್ದು, 5 ಜಿಲ್ಲೆ 26 ತಾಲೂಕುಗಳ 1035 ಗ್ರಾಮ ಪಂಚಾಯಿತಿ, 4954 ಗ್ರಾಮ ಬಯಲು ಬಹಿರ್ದೆಸೆ ಮುಕ್ತವಾಗಿದ್ದು, ಮಾರ್ಚ್‌ ಅಂತ್ಯಕ್ಕೆ ಇನ್ನೂ ಎರಡು ಜಿಲ್ಲೆ, 20 ತಾಲೂಕು, 500 ಗ್ರಾಮ ಪಂಚಾಯಿತಿ, 3000 ಗ್ರಾಮಗಳನ್ನು ಬಯಲು ಬಹಿರ್ದೆಸೆ ಮುಕ್ತ ಎಂದು ಘೋಷಿಸಲಾಗುವುದು ಎಂದು ಹೇಳಿದರು. ರಾಜ್ಯವನ್ನು ಗುಡಿಸಲು ಮುಕ್ತ ಮಾಡಲು 10.42 ಲಕ್ಷ ಮನೆ ನಿರ್ಮಿಸಿದ್ದು ಹೊಸದಾಗಿ ಆರು ಲಕ್ಷ ಮನೆ ನಿರ್ಮಿಸಲು ಗುರಿ ಹೊಂದಲಾಗಿದೆ.

SCROLL FOR NEXT