ಸಾಂದರ್ಭಿಕ ಚಿತ್ರ 
ರಾಜ್ಯ

ಮಾರ್ಚ್ 31 ರಿಂದ ರಾಜ್ಯದ 47 ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳ ಆನ್ ಲೈನ್ ನೋಂದಣಿ

ಮಾರ್ಚ್ 31 ರಿಂದ ಕರ್ನಾಟಕ ರಾಜ್ಯದ 47 ಸರ್ಕಾರಿ ಆಸ್ಪತ್ರೆಗಳು ಕೇಂದ್ರ ಸರ್ಕಾರದ ಆನ್ ಲೈನ್ ರಿಜಿಸ್ಟಾರ್ ಸಿಸ್ಟಮ್ ಗೆ ಒಳಪಡಲಿವೆ. ಸದ್ಯ ನಿಮ್ಹಾನ್ಸ್, ಸಂವಾದ ...

ಬೆಂಗಳೂರು: ಮಾರ್ಚ್ 31 ರಿಂದ ಕರ್ನಾಟಕ ರಾಜ್ಯದ 47 ಸರ್ಕಾರಿ ಆಸ್ಪತ್ರೆಗಳು ಕೇಂದ್ರ ಸರ್ಕಾರದ ಆನ್ ಲೈನ್ ರಿಜಿಸ್ಟಾರ್ ಸಿಸ್ಟಮ್ ಗೆ ಒಳಪಡಲಿವೆ. ಸದ್ಯ ನಿಮ್ಹಾನ್ಸ್, ಸಂವಾದ ವಾಕ್ ಮತ್ತು ಶ್ರವಣ ಸಂಸ್ಥೆ ಹಾಗೂ ಕೆ.ಸಿ ಜನರಲ್ ಆಸ್ಪತ್ರೆಗಳಲ್ಲಿ ಈ ವ್ಯವಸ್ಥೆ ಲಭ್ಯವಿದೆ.

ರೋಗಿಯ ನೋಂದಣಿ ಸಂಖ್ಯೆಯ ಜೊತೆಗೆ ಆಧಾರ್ ಕಾರ್ಡ್ ಲಿಂಕ್ ಮಾಡವಾಗುತ್ತದೆ. ಇದರಿಂದ ದೇಶದ ಯಾವುದೇ ಆಸ್ಪತ್ರೆಯಲ್ಲಿ ರೋಗಿಯ ಕಾಯಿಲೆ, ಚಿಕಿತ್ಸೆ, ಸೇರಿದಂತೆ ಎಲ್ಲಾ ವಿವರಗಳು ಸುಲಭವಾಗಿ ಲಭ್ಯವಾಗಲಿವೆ.

ಮೊದಲ ಹಂತವಾಗಿ  ರಾಜ್ಯದ 47 ಸರ್ಕಾರಿ ಆಸ್ಪತ್ರೆಗಳಲ್ಲಿ ಈ ವ್ಯವಸ್ಥೆ ಜಾರಿಗೆ ಬರಲಿದೆ ಎಂದು ರಾಜ್ಯ ನೋಡಲ್ ಅಧಿಕಾರಿ ಡಾ. ಎಚ್ ಗಣೇಶ್ ಹೇಳಿದ್ದಾರೆ, ಈ ಆಸ್ಪತ್ರೆಗಳಲ್ಲಿ ಆನ್ ಲೈನ್ ರಿಜಿಸ್ಚಾರ್ ಸಿಸ್ಟಮ್ ಅಳವಡಿಸಲು ಈಗಾಗಲೇ ಟೆಂಡರ್ ಕರೆಯಲಾಗಿದೆ,. ಈ ವ್ಯವಸ್ಥೆಯಿಂದಾಗಿ ರೋಗಿಯ ಆರೈಕೆ, ಪ್ರಯೋಗಾಲಯ ಸೇವೆ, ವೈದ್ಯಕೀಯ ದಾಖಲೆಗಳ ಸಮಗ್ರ ನಿರ್ವಹಣೆಯನ್ನು ಕ್ರೋಡೀಕರಿಸಿ ಮಾಹಿತಿ ನೀಡಲಾಗುತ್ತದೆ. ರೋಗಿಯ ಸಮಗ್ರ ಡೇಟಾ ಸಂಗ್ರಹಿಸುವುದರಿಂದ ನಿಖರ, ವಾಸ್ತವ, ಮಾಹಿತಿ, ಮೇಲ್ವಿಚಾರಣೆ, ಯೋಜನಾ ನಿರ್ವಹಣೆ, ಸಂಶೋಧನೆಗೆ ಹೆಚ್ಚು ಅನುಕೂಲವಾಗಲಿದೆ.

ಇ-ಹಾಸ್ಪಿಟಲ್ ನಿಖರವಾದ ಚಿಕಿತ್ಸೆ ನೀಡಲು ನೆರವಾಗುತ್ತದೆ. ರೋಗಿಯ ಸಮಗ್ರ ಮಾಹಿತಿ ಗಣಕೀಕರಣಗೊಳ್ಳುತ್ತದೆ. ಅನಗತ್ಯ ವೈದ್ಯಕೀಯ ಪರೀಕ್ಷೆಗಳಿಗೆ ಕಡಿವಾಣ ಬೀಳುತ್ತದೆ. ರೋಗಿಗಿ ಯಾವ ರೀತಿಯ ಚಿಕಿತ್ಸೆ ಅವಶ್ಯಕತೆ ಇದೆ ಎಂಬುದನ್ನು ನುರಿತ ವೈದ್ಯರು ನಿರ್ಧರಿಸುತ್ತಾರೆ, ಅದರಂತೆ ರೋಗಿ ಚಿಕಿತ್ಸೆ ಪಡೆಯಬಹುದಾಗಿದೆ. ಇದೊಂದು ವಿನೂತನ ಹಾಗೂ ಶ್ಲಾಘನೀಯ ಪ್ರಯತ್ನವಾಗಿದೆ.

ಪ್ರಾಥಮಿಕ ಹಂತದಿಂದ ತೃತೀಯ ಹಂತದ ಚಿಕಿತ್ಸಾ ಕೇಂದ್ರಗಳಿಗೆ ಹೋದರೂ ರೋಗಿ ಎಲ್ಲೆಲ್ಲಿ ಯಾವ ಚಿಕಿತ್ಸೆ ಪಡೆದಿದ್ದಾರೆ ಎಂಬುದನ್ನು ತಿಳಿಯಬಹುದಾಗಿದೆ. ಹೊರ ರೋಗಿ ಚೀಟಿ ಬಿಟ್ಟು ಬಂದಿದ್ದರೂ ಇ-ಹಾಸ್ಪಿಟಲ್ ಸಾಫ್ಟ್​ವೇರ್ ಮೂಲಕ ಮಾಹಿತಿ ಪಡೆಯಬಹುದು.

ಕೋಲಾರ ಜಿಲ್ಲಾಸ್ಪತ್ರೆಯಲ್ಲಿ ಈ ಸಿಸ್ಟಮ್ ನ ಪ್ರಯೋಗ ನಡೆದಿದೆ. ಆಸ್ಪತ್ರೆಯ ors.gov.in ವೆಬ್ ಸೈಟ್ ನಲ್ಲಿ ರೋಗಿ ನೋಂದಾಯಿಸಿಕೊಳ್ಳಬೇಕು. ಆರೋಗ್ಯ ಇಲಾಖೆ ವ್ಯಾಪ್ತಿಗೆ ಒಳಪಡುವ 21 ಜಿಲ್ಲೆಗಳ 2 ಮೆಡಿಕಲ್ ಆಸ್ಪತ್ರೆಗಳಲ್ಲಿ ಈ ವ್ಯವಸ್ಥೆಗೆ ಬರುತ್ತದೆ ಎಂದು ಡಾ. ಗಣೇಶ್ ತಿಳಿಸಿದ್ದಾರೆ. 2018ರ ಒಳಗೆ ರಾಜ್ಯದ ಎಲ್ಲಾ 144 ತಾಲೂಕುಗಳಲ್ಲಿಯೂ ಈ ಸೌಲಭ್ಯ ಸಿಗುತ್ತದೆ ಎಂದು ಅವರು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕಾಗ್ನಿಜಂಟ್, ಇನ್ಫೋಸಿಸ್, ಟಿಸಿಎಸ್, ವಿಪ್ರೋ ಎಚ್‌ಸಿಎಲ್ ಗೆ ಅಮೆರಿಕ ಶಾಕ್: ಗ್ರೀನ್ ಕಾರ್ಡ್ ಕಾರ್ಯಕ್ರಮದಿಂದ ಅಮಾನತು!

Sting operation ಮೂಲಕ ನಿಮ್ಮನ್ನು ಸಿಲುಕಿಸಲು ಯತ್ನಿಸಿರುವುದು ನಿಜವೇ ಆಗಿದ್ದರೆ ತನಿಖೆಗೆ ಆದೇಶಿಸಿ: ಸಿಎಂ ಡಿಕೆ.ಶಿವಕುಮಾರ್'ಗೆ HDK ಸವಾಲು

ಮತ ಕಳ್ಳತನದಿಂದಲೇ ಮೋದಿ ಪ್ರಧಾನಿಯಾಗಿದ್ದು, ಗೆಲ್ಲಲಾಗದ ರಾಜ್ಯಗಳಲ್ಲೂ BJP ಗೆಲುವು ಸಾಧಿಸಿದು: ಅಭಿಜೀತ್ ದೀಪ್ಕೆ

ರಾಜ್ಯದ ಬಾಕಿ ಹಣದ ಬಗ್ಗೆ ನಿರ್ಮಲಾ ಸೀತಾರಾಮನ್ ಜೊತೆ ಚರ್ಚೆ: GST ಮಂಡಳಿ ಸಭೆ ಬಳಿಕ CM ಡಿಕೆ.ಶಿವಕುಮಾರ್ ಹರ್ಷ

ಉತ್ತರ ಭಾರತ ವ್ಯಕ್ತಿಯಿಂದ ಡಿಕೆಶಿ ಸಿಲುಕಿಸಲು ಯತ್ನ: ಸಚಿವ ಸತೀಶ್ ಜಾರಕಿಹೊಳಿ