ಬೆಂಗಳೂರು: ಅಕ್ರಮ ಆಸ್ತಿ ಪ್ರಕರಣದಲ್ಲಿ 4 ವರ್ಷ ಸೆರೆವಾಸಕ್ಕೆ ಗುರಿಯಾಗಿರುವ ಎಐಎಡಿಎಂಕೆ ನಾಯಕಿ ಶಶಿಕಲಾ ನಟರಾಜನ್ ಕೋರ್ಟ್ ವಿಧಿಸಿರುವ 10 ಕೋಟಿ ರು ದಂಡ ಪಾವತಿ ಮಾಡದಿದ್ದರೇ ಹೆಚ್ಚುವರಿಯಾಗಿ 13 ತಿಂಗಳ ಕಾಲ ಶಿಕ್ಷೆ ಅನುಭವಿಸಬೇಕಾಗುತ್ತದೆ.
ಸದ್ಯ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಶಶಿಕಲಾ ಸುಪ್ರೀಂಕೋರ್ಟ್ ಆದೇಶದಂತೆ 10 ಕೋಟಿ ರು ಹಣವನ್ನು ದಂಡದ ರೂಪದಲ್ಲಿ ಪಾವತಿಸಬೇಕು , ಹಣ ಪಾವತಿ ಮಾಡಲು ವಿಫಲವಾದರೇ ಆಕೆಗೆ ಇನ್ನೂ 13 ತಿಂಗಳುಗಳ ಹೆಚ್ಚುವರಿ ಸೆರೆವಾಸ ಅನುಭವಿಸಬೇಕಾಗುತ್ತದೆ ಎಂದು ಜೈಲು ಸೂಪರಿಂಡೆಂಟ್ ಕೃಷ್ಣ ಕುಮಾರ್ ತಿಳಿಸಿದ್ದಾರೆ.
ಅಕ್ರಮ ಆಸ್ತಿ ಪ್ರಕರಣ ಸಂಬಂಧ ಫೆಬ್ರವರಿ 14 ರಂದು ಸುಪ್ರೀಂಕೋರ್ಟ್ ಶಶಿಕಲಾ ಮತ್ತಿತರಿಗೆ 4 ವರ್ಷ ಸೆರೆವಾಸ ಹಾಗೂ ತಲಾ 10 ಕೋಟಿ ರು ದಂಡ ವಿಧಿಸಿತ್ತು. ಶಶಿಕಲಾ 3 ವರ್ಷ 11 ತಿಂಗಳು ಜೈಲು ಶಿಕ್ಷೆ ಅನುಭವಿಸಬೇಕಾಗಿದೆ.