ರಾಜ್ಯ

ಫೆಬ್ರವರಿ 2 ರವರೆಗೆ ಮೈಸೂರು ಮೃಗಾಲಯ ಬಂದ್

Shilpa D

ಮೈಸೂರು; ಹಕ್ಕಿ ಜ್ವರ ಭೀತಿ ಆವರಿಸಿರುವ ಹಿನ್ನಲೆಯಲ್ಲಿ ಸಮಾರು 125 ವರ್ಷಗಳ ಇತಿಹಾಸವಿರುವ ಮೈಸೂರಿನ ಐತಿಹಾಸಿಕ ಶ್ರೀಚಾಮರಾಜೇಂದ್ರ ಮೃಗಾಲಯವನ್ನು ಫೆಬ್ರವರಿ 2 ರ ವರೆಗೆ ಬಂದ್ ಮಾಡಲಾಗಿದೆ ಎಂದು ಇನ್ಸ್ಟಿಟ್ಯೂಟ್ ಆಫ್ ಅನಿಮಲ್ ಹೆಲ್ತ್ ಮತ್ತು ಪಶುವೈದ್ಯ ಬಯೋಲಾಜಿಕಲ್ಸ್ ಮತ್ತು ಅಧಿಕಾರಿಗಳು ಮೃಗಾಲಯದ ನಿರ್ದೇಶಕ ಎಸ್ ಎಂ ಬೈರೇಗೌಡ ತಿಳಿಸಿದ್ದಾರೆ.

ಕಳೆದ 15 ದಿನಗಳ ಅವಧಿಯಲ್ಲಿ  ಹಕ್ಕಿಜ್ವರ  ಪರೀಕ್ಷೆಗೆ ಎರಡು ಮಾದರಿಗಳನ್ನು ಸಂಗ್ರಹಿಸಿ ಭಾರತೀಯ ಮೃಗಾಲಯ ಪ್ರಾಧಿಕಾರಕ್ಕೆ ಕಳುಹಿಸಲಾಗಿದೆ. ಪರೀಕ್ಷೆಯಲ್ಲಿ  ಹಕ್ಕಿಜ್ವರ ದ ಯಾವುದೇ ಲಕ್ಷಣಗಳು ಇಲ್ಲ ಎಂದು ಖಚಿತ ಪಡಿಸಿ, ಮೃಗಾಲಯ ತೆರಯಲು ಅನುಮತಿ ನೀಡಿದ ಮೇಲಷ್ಟೇ ತೆರೆಯುವುದಾಗಿ ಅವರು ತಿಳಿಸಿದ್ದಾರೆ.

ಹಕ್ಕಿಜ್ವರ ಕೋಳಿ ಫಾರಂ ಗಳಿಗೆ ತಗಲುದಿರೆ ಸಾವಿರಾರು ಕೋಳಿಗಳ ಮಾರಣ ಹೋಮವಾಗುತ್ತದೆಂಬ ಆತಂಕ ವ್ಯಕ್ತ ಪಡಿಸಿದ್ದಾರೆ. ಹಕ್ಕಿ ಜ್ವರ ಸೋಂಕು ಮಾನವರಿಗೆ ಯಾವುದೇ ರೀತಿಯ ದುಷ್ಪರಿಣಾಮ ಬೀರುವುದಿಲ್ಲ ಎಂದು ಅವರು ತಿಳಿಸಿದ್ದಾರೆ.

ದೆಹಲಿ ಮೃಗಾಲಯ, ಒಡಿಸ್ಸಾ ಮತ್ತು ಗ್ವಾಲಿಯರ್ ಮೃಗಾಲಯಗಳಲ್ಲಿ ಹಕ್ಕಿ ಜ್ವರ ಭೀತಿಯಿಂದಾಗಿ ಮೂರು ತಿಂಗಳ ಕಾಲ ಪ್ರವೇಶ ರದ್ದುಗೊಳಿಸಲಾಗಿದೆ ಎಂದು ಅವರು ವಿವರಿಸಿದರು.

SCROLL FOR NEXT