ರಾಜ್ಯ

ಉಪನಗರ ರೈಲು ಸಾರಿಗೆ: ಮೆಮು ರೈಲು ಜನವರಿ 17ರಿಂದ ಸಂಚಾರ ಆರಂಭ

Vishwanath S

ಬೆಂಗಳೂರು: ರಾಜ್ಯ ಸರ್ಕಾರದ ಉಪನಗರ ರೈಲು ಸಾರಿಗೆ ಯೋಜನೆ ಬೆಂಗಳೂರು ನಗರ ರೈಲು ನಿಲ್ದಾಣದಿಂದ ರಾಮನಗರ, ವೈಟ್ ಫೀಲ್ಡ್ ಹಾಗೂ ಕುಪ್ಪಂ ನಿಲ್ದಾಣಗಳಿಗೆ ಮೂರು ಹೊಸ ಮೆಮು(ಮೇನ್ಲೈನ್ ಎಲೆಕ್ಟ್ರಿಕ್ ಮಲ್ಟಿಪಲ್ ಯುನಿಟ್) ರೈಲುಗಳು ಇದೇ ಜನವರಿ 17ರಿಂದ ಸಂಚಾರ ಆರಂಭಿಸಲಿವೆ.

ರೈಲ್ವೆ ಸಚಿವ ಸುರೇಶ್ ಪ್ರಭು ಅವರು ಉದ್ದೇಶಿತ ಮೂರು ರೈಲು ಸೇವೆಗಳ ಉದ್ಘಾಟನೆಗಾಗಿ ನಗರಕ್ಕೆ ಆಗಮಿಸಲಿದ್ದು ಜನವರಿ 16ರ ಸಂಜೆ ಚಾಲನೆ ನೀಡಲಿದ್ದು ಮಾರನೇ ದಿನದಿಂದ ರೈಲುಗಳು ಸಂಚಾರ ಆರಂಭಿಸಲಿವೆ ಎಂದು ರೈಲ್ವೇ ಮೂಲಗಳಿಂದ ತಿಳಿದುಬಂದಿದೆ.

ಬೆಂಗಳೂರಿನ ಕಾಂತ್ರಿವೀರ ಸಂಗೋಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ವೈಟ್ ಫೀಲ್ಡ್ ಗೆ ಬೆಳಗ್ಗೆ 8.45ಕ್ಕೆ ಹೊರಡುವ ರೈಲು 9.40ಕ್ಕೆ ವೈಟ್ ಫೀಲ್ಡ್ ತಲುಪಲಿದೆ. ಮತ್ತೆ ಅಲ್ಲಿಂದ್ದ 10.30ಕ್ಕೆ ರೈಲು ಹೊರಡಲಿದ್ದು 11.10ಕ್ಕೆ ಕೆಎಸ್ಆರ್ ಬೆಂಗಳೂರು ನಿಲ್ದಾಣವನ್ನು ತಲುಪಲಿದೆ. ಮತ್ತೆ ಕೆಎಸ್ಆರ್ ಬೆಂಗಳೂರು ನಿಲ್ದಾಣದಿಂದ 11.20ಕ್ಕೆ ರೈಲು ಕುಪ್ಪಂಗೆ ಹೊರಡಲಿದ್ದು 1.45ಕ್ಕೆ ಕುಪ್ಪಂ ತಲುಪಲಿದೆ. ನಂತರ 2.45ಕ್ಕೆ ಕುಪ್ಪಂನಿಂದ ಹೊರಡುವ ರೈಲು ಸಂಜೆ 5.20ಕ್ಕೆ ಕೆಎಸ್ಆರ್ ಬೆಂಗಳೂರು ರೈಲು ನಿಲ್ದಾಣವನ್ನು ತಲುಪಲಿದೆ.

ಕೆಎಸ್ಆರ್ ಬೆಂಗಳೂರಿನಿಂದ ರಾಮನಗರ ಮಾರ್ಗವಾಗಿ ತೆರಳುವ ರೈಲು ಬೆಳಗ್ಗೆ 5.20ರ ಸುಮಾರಿಗೆ ಹೊರಡಲಿದ್ದು ಬೆಳಗ್ಗೆ 6.15ಕ್ಕೆ ರಾಮನಗರ ತಲುಪಲಿದೆ. ಅಲ್ಲಿಂದ 7 ಗಂಟೆಗೆ ರೈಲು ಹೊರಡಲಿದ್ದು 8.40ಕ್ಕೆ ಕೆಎಸ್ಆರ್ ತಲುಪಲಿದೆ.

ಮತ್ತೆ ಕೆಎಸ್ಆರ್ ಬೆಂಗಳೂರಿನಿಂದ ರಾಮನಗರ ಮಾರ್ಗವಾಗಿ ತೆರಳುವ ರೈಲು ಬೆಳಗ್ಗೆ 7.55ರ ಸುಮಾರಿಗೆ ಹೊರಡಲಿದ್ದು ಬೆಳಗ್ಗೆ 9.10ಕ್ಕೆ ರಾಮನಗರ ತಲುಪಲಿದೆ. ಅಲ್ಲಿಂದ 9.35 ಗಂಟೆಗೆ ರೈಲು ಹೊರಡಲಿದ್ದು 11.10ಕ್ಕೆ ಕೆಎಸ್ಆರ್ ತಲುಪಲಿದೆ.

SCROLL FOR NEXT