ಬೆಂಗಳೂರು: ಸೆಕ್ಸ್ ರಾಕೆಟ್ ಅಡ್ಡೆ ಮೇಲೆ ದಾಳಿ ನಡೆಸಿದ ಸಿಸಿಬಿ ಪೊಲಿಸರು ಬಾಂಗ್ಲಾ ಮಹಿಳೆ ಸೇರಿದಂತೆ ಒಟ್ಟು 14 ಮಹಿಳೆಯರನ್ನು ರಕ್ಷಿಸಿ, 8 ಮಂದಿಯನ್ನು ಬಂಧಿಸಿದ್ದಾರೆ.
ಬಾಂಗ್ಲಾ ದೇಶ ಮೂಲದ ಮಹಿಳೆಗೆ ಕೆಲಸ ಕೊಡುವ ಆಮೀಷ ತೋರಿಸಿ ಪಶ್ಚಿಮ ಬಂಗಾಳದಿಂದ ಇಲ್ಲಿಗೆ ಕರೆತಂದು ಮಾರಾಟ ಮಾಡಿದ್ದಾರೆ. ನಕಲಿ ಗುರುತಿನ ಚೀಟಿ ಮತ್ತು ದಾಖಲೆಗಳನ್ನು ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಸಿಸಿಬಿಯ ಮಹಿಳಾ ಮತ್ತು ನಾರ್ಕೋಟಿಕ್ ಸ್ಕ್ಯಾಡ್ ನಡೆಸಿದ ಕಾರ್ಯಾಚರಣೆಯಲ್ಲಿ ಈ ತಂಡ ಸಿಕ್ಕಿ ಬಿದ್ದಿದೆ.
ಈಜಿಪುರ ಮತ್ತು ವಿವೇಕನಗರದ ಐದು ಮನೆಗಳನ್ನು ಈ ದಂಧೆಗೆ ಬಳಸಲಾಗುತ್ತಿತ್ತು. ದೀಪು ಮಂಡಲ್ ಅಲಿಯಾಸ್ ಅಮಿತ್,ಸೌಮೆನ್ ರಾಯ್, ತರುಣ್ ಘೋಷ್. ಸುಜಿತ್ ಸರ್ಕಾರ್, ಅಚಿಂತ್ಯಾ ಮಜುಮ್ದಾರ್, ಸಂಜಯ್ ಸಿಲ್, ಸೊರಬ್ ಅಲಿ ಮತ್ತು ಜೋಸ್ನಾ ಮಂಡಲ್ ಬಂಧಿತ ಆರೋಪಿಗಳು.
ಬಂಧಿತರೆಲ್ಲರು ಪಶ್ಚಿಮ ಬಂಗಾಳದವರು, ಎಲ್ಲಾ ಆರೋಪಿಗಳು 24 ರಿಂದ 15 ವರ್ಷದೊಳಗಿನ ಯುವಕರಾಗಿದ್ದಾರೆ. ಮಹಿಳೆಯರಿಗೆ ಮಸಾಜ್ ಪಾರ್ಲರ್ ನಲ್ಲಿ ಕೆಲಸ ಮಾಡಿ ಹೆಚ್ಚು ಹಣ ಸಂಪಾದಿಸಲು ಇವರು ಪುಸಲಾಯಿಸುತ್ತಿದ್ದರು ಎಂದು ವಿಚಾರಣೆ ವೇಳೆ ಆರೋಪಿಗಳು ಬಾಯ್ಬಿಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.