ಬೆಂಗಳೂರು: ಕೇಂದ್ರ ಗೃಹ ಸಚಿವಾಲಯದ ಇತ್ತೀಚಿನ ವರದಿ ಪ್ರಕಾರ, ದೇಶದಲ್ಲಿಯೇ ಕರ್ನಾಟಕ ರಾಜ್ಯದಲ್ಲಿ ಹೆಚ್ಚಿನ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ.
ಜನವರಿ 1, 2016ರವರೆಗಿನ ಅಂಕಿಅಂಶ ಪ್ರಕಾರ,ಕರ್ನಾಟಕ ಪೊಲೀಸರು 3,952 ಕ್ಯಾಮರಾ/ಸಿಸಿಟಿವಿಗಳನ್ನು ಸಂಚಾರ ದಟ್ಟಣೆ, ಸುರಕ್ಷತೆ ಮತ್ತು ತನಿಖೆಯ ಉದ್ದೇಶದ ಸಲುವಾಗಿ ಅಳವಡಿಸಿದೆ. ಕರ್ನಾಟಕದ ನಂತರ ಮಧ್ಯ ಪ್ರದೇಶ(2,977), ಕೇರಳ(2,458), ಆಂಧ್ರ ಪ್ರದೇಶ(2,443) ಮತ್ತು ರಾಜಸ್ತಾನಗಳಲ್ಲಿ 2,025 ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ.
ಆಸಕ್ತಿಕರ ಸಂಗತಿಯೆಂದರೆ ದಕ್ಷಿಣ ಭಾರತದಲ್ಲಿ ಅತ್ಯಂತ ಕಡಿಮೆ ಪೊಲೀಸ್ ಸಿಬ್ಬಂದಿಯಿರುವುದು ಆಂಧ್ರ ಪ್ರದೇಶದ ನಂತರ ಕರ್ನಾಟಕದಲ್ಲಿಯೇ. ಕರ್ನಾಟಕದಲ್ಲಿ ಜನರಿಗೆ ಪೊಲೀಸ್ ರ ಅನುಪಾತ 1:876 ಅಂತರದಲ್ಲಿದೆ. ವಿಶ್ವ ಸಂಸ್ಥೆಯ ಪ್ರಕಾರ ಪ್ರತಿ 454 ಜನರಿಗೆ ಒಬ್ಬ ಪೊಲೀಸ್ ಸಿಬ್ಬಂದಿಯಿರಬೇಕು.
ಭದ್ರತೆ, ರಕ್ಷಣೆ ದೃಷ್ಟಿಯಿಂದ ಕಾರ್ಯಕರ್ತರು ಬೆಂಗಳೂರು ನಗರವೊಂದರಲ್ಲಿಯೇ 5,000 ಕ್ಯಾಮರಾಗಳನ್ನು ಅಳವಡಿಸಲು ರಾಜ್ಯ ಸರ್ಕಾರ ಚಿಂತಿಸುತ್ತಿದೆ.
ಭಾರತ ದೇಶದ ಕೆಲವು ರಾಜ್ಯಗಳಲ್ಲಿ ಒಬ್ಬ ಪೊಲೀಸ್ ಸಿಬ್ಬಂದಿಗೆ ಇರುವ ಜನಸಂಖ್ಯೆ ಇಂತಿದೆ:
ಉತ್ತರ ಪ್ರದೇಶ | 1,192 |
ಪಶ್ಚಿಮ ಬಂಗಾಳ | 1,374 |
ಬಿಹಾರ | 1,103 |
ಆಂಧ್ರ ಪ್ರದೇಶ | 1,044 |
ಮಧ್ಯ ಪ್ರದೇಶ | 892 |
ಗುಜರಾತ್ | 887 |
ಕರ್ನಾಟಕ | 876 |
ಒಟ್ಟು ಭಾರತ | 729 |
ಕರ್ನಾಟಕದ ಅಂಕಿಅಂಶಪ್ರತಿ ಪೊಲೀಸ್ ಸಿಬ್ಬಂದಿಗೆ ಮಂಜೂರಾಗಿರುವ ಜನಸಂಖ್ಯೆ: 564
ಪ್ರತಿ ಪೊಲೀಸ್ ಸಿಬ್ಬಂದಿಯ ಕಾರ್ಯನಿರ್ವಹಣೆಯ ಪ್ರದೇಶ, ಮಂಜೂರಾಗಿರುವುದು: 1.74 ಚದರ ಕಿಲೋ ಮೀಟರ್
ವಾಸ್ತವವಾಗಿ ಇರುವುದು: 2.7 ಚದರ ಕಿಲೋ ಮೀಟರ್
ಪ್ರತಿ 100 ಪೊಲೀಸ್ ಸಿಬ್ಬಂದಿಗೆ ಮಂಜೂರಾಗಿರುವುದು 10.90 ವಾಸ್ತವವಾಗಿ ಇರುವುದು 16.94 ಆಗಿದೆ.